ಆಳಂದ ಸಾರ್ವಜನಿಕ ಆಸ್ಪತ್ರೆಗೆ ಟಾಪ್ 10ರ ಸ್ಥಾನದ ಗರಿ
ಆಳಂದ:ಮೇ.15: ಪಟ್ಟಣದ ಮಂಟಕಿ ರಸ್ತೆಯಲ್ಲಿರುವ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತನ್ನ ಒಪಿಡಿ ಅತ್ಯುತ್ತಮ ಕಾರ್ಯನಿವಾರ್ಹಣೆಯಲ್ಲಿ ರಾಜ್ಯ ಮಟ್ಟದ ಆಸ್ಪತ್ರೆಗಳ ಟಾಪ್ 10 ಸ್ಥಾನ ದೊರೆತ್ತಿದೆ.
ಕಳೆದ ಫೆಬ್ರವರಿ 7, 2024 ರಿಂದ ಏಪ್ರಿಲ್ 6, 2024 ರವರೆಗೆ ಇತ್ತೀಚೆಗೆ ನಡೆಸಿದ ಡಿಜಿಟಲ್ ಹೆಲ್ತ್ ಮ್ಯಾರಥಾನ್‍ನಲ್ಲಿ 5414 ಆರೋಗ್ಯ ದಾಖಲೆಗಳನ್ನು ಲಿಂಕ್ ಮಾಡುವ ಮೂಲಕ ಸಾರ್ವಜನಿಕ ಆಸ್ಪತ್ರೆ ಅಲ್ಯಾಂಡ್ ಅನ್ನು ಟಾಪ್ 10ರ ಸ್ಥಾನ ತಂದುಕೊಂಡಿದ್ದಕ್ಕೆ ರಾಜ್ಯದ ಆಯುಮಾನ ಭಾರತ ಮಿಷನ್ ನಿರ್ದೇಶಕರು ಶ್ಲಾಘಿಸಿದ್ದಾರೆ.
ಆಸ್ಪತ್ರೆ ಈ ಯೋಜನೆ ಅಡಿಯಲ್ಲಿ ಆಯುಷ್ಯಮಾನ ಭಾರತ ಡಿಜಿಟಲ್ ಮಿಷನ್ (ಎಬಿಡಿಎಂ) ರಾಜ್ಯದ 230 ಆಸ್ಪತ್ರೆಗಳಲ್ಲಿ ಟಾಪ್ 10ರಲ್ಲಿ ಆಳಂದ ಸಾರ್ವಜನಿಕ ಆಸ್ಪತ್ರೆಯೂ ಒಂದಾಗಿದೆ. ರೋಗಿಗಳ ಮೊಬೈಲ್ ಸಂಖ್ಯೆಗೆ ಆಧಾರ ಕಾರ್ಡ್ ಮತ್ತು ರೇಷ್‍ನ ಕಾಡ್ ಲಿಂಕ್ ಇದ್ದರೆ ಒಪಿಡಿ ಕಾರ್ಡ್ (ಹೊರರೋಗಿ ಚೀಟಿ) ಜರ್ನೆಟ್ ಮಾಡಿಕೊಡುವಲ್ಲಿ ಮುಂಚಣಿ ಸಾಧಿಸಿದೆ.
ಅಭಾ ಕಾರ್ಡ್ ನೋಂದಣಿ ಅವಕಾಶ: ಭಾರತ ಸರ್ಕಾರವು ಸಾರ್ವಜನಿಕ ಆರೋಗ್ಯದ ಮಾಹಿತಿ ಯನ್ನು ಡಿಜಿಟಲೀಕರಣಗೊಳಿಸಿ ಪ್ರತಿ ವ್ಯಕ್ತಿಯ ಆರೋಗ್ಯದ ಮಾಹಿತಿಯನ್ನು ಒಂದೇ ಸೂರಿನಡಿ ದೊರಕಿಸಿ ಆರೋಗ್ಯದ ಸೌಲಭ್ಯಗಳು ಸುಲಭವಾಗಿ ದೊರಕುವಂತೆ ಮಾಡುವ ಮಹತ್ವದ adado ABHA (Ayushman Bharath Health Account) ಕಾರ್ಡ್ ಯೋಜನೆಯನ್ನು ಆರಂಭಿಸಿರುತ್ತದೆ.
ಈ ಕಾರ್ಡ್ ಹೊಂದಿದ ವ್ಯಕ್ತಿಗಳು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ರೂ. 5.00 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು ಹಾಗೂ ಚಿಕಿತ್ಸೆಯ ಮಾಹಿತಿಯನ್ನು ದೇಶದ ಯಾವುದೇ ಭಾಗದಲ್ಲಿ ಆನ್‍ಲೈನ್ ಮೂಲಕ ಪಡೆಯಬಹುದಾಗಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಡಾ. ಮಹಾಂತಪ್ಪ ಹಾಳಮಳಿ
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳು ಆಳಂದ.