ಬಸವೇಶ್ವರ ವೃತ್ತದ ಅಭಿವೃದ್ಧಿ ಕಾಮಗಾರಿ ಆರಂಭ
(ಸಂಜೆವಾಣಿ ವಾರ್ತೆ)
ಬಳ್ಳಾರಿ,ಮೇ.15: ನಗರದಲ್ಲಿ ಈ ವರೆಗೆ ಸಂಗನಕಲ್ಲು ರಸ್ತೆಯಲ್ಲಿ  ಕೆಇಬಿ ಸರ್ಕಲ್ ಎಂದು ಕರೆಯಲಾಗುತ್ತಿದ್ದ ಸರ್ಕಲನ್ನು ಬಸವೇಶ್ವರ ಸರ್ಕಲ್ ಎಂದು ಬದಲಾಯಿಸಿ ಅಭಿವೃದ್ಧಿ ಪಡಿಸುವ ಕಾರ್ಯ ಆರಂಭಗೊಂಡಿದೆ.
ಈ ಕಾಮಗಾರಿ ಜೊತೆಗೆ  ಸಂಗನಕಲ್ ರಸ್ತೆಯ (ಕೆಆರೆಸ್ ಹಾಲ್ ನಿಂದ ಬಸವೇಶ್ವರ ಸರ್ಕಲ್ ವರೆಗೆ) ಅಭಿವೃದ್ಧಿ ಹಾಗೂ ಸೌಂದರೀಕರಣ ಕಾಮಗಾರಿಯೂ ನಡೆಯಲಿದೆ.
ಈ ಕಾಮಗಾರಿಯನ್ನು ನಗರದ ಶಾಸಕ ಭರತ್ ರೆಡ್ಡಿ ನಿನ್ನೆ ಪರಿಶೀಲನೆ ನಡೆಸಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಹಾಗೂ ಬಸವಾನುಯಾಯಿಗಳ ಬೇಡಿಕೆಯ ಮೇರೆಗೆ ಕೆಇಬಿ ಸರ್ಕಲ್ ಗೆ ಬಸವೇಶ್ವರ ಸರ್ಕಲ್ ಎಂದು ನಾಮಕರಣ ಮಾಡಲು ತೀರ್ಮಾನ ಮಾಡಲಾಗಿದೆಯಂತೆ.‌