ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶ್ರೀ ಭಗೀರಥ ಜಯಂತಿ ಆಚರಣೆ
ವಿಜಯಪುರ, ಮೇ.15: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ಭಗೀರಥ ಜಯಂತಿಯನ್ನು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ಸರಳವಾಗಿ ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಶ್ರೀ ಭಗೀರಥ ಅವರ ಭಾವಚಿತ್ರಕ್ಕೆ ಪೂಜೆಯೊಂದಿಗೆ ಪುಷ್ಪಾರ್ಚನೆಯನ್ನು ಸಲ್ಲಿಸಿ ನಮಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಕವಿತಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಯ್ಯೂಬ್ ದ್ರಾಕ್ಷಿ, ಉಪ್ಪಾರ ಸಮಾಜದ ಜಿಲ್ಲಾ ಅಧ್ಯಕ್ಷÀ ಜಕ್ಕಪ್ಪ ಯಡವೆ, ಮುಖಂಡರುಗಳಾದ ಮುತ್ತಪ್ಪ ಕೆ.ಶಿವಣ್ಣನವರ, ಅನಿಲ್ ಅವಳೆ, ಯಲ್ಲಪ್ಪ ಬಂಡಿ, ಡಾ. ಸುರೇಶ ಕಾಗಲಕರರೆಡ್ಡಿ, ಸಿದ್ದು ಗೆರಡೆ, ಸಾಬು ಕಾತ್ರಾಳ, ಜೆ.ಎಲ್. ಕಸ್ತೂರಿ, ಶ್ರೀನಿವಾಸ ಅಂಬಲಿ, ಸುರೇಶ ಶಹಾಪೂರ, ಪುಂಡಲೀಕ ಉಪ್ಪಾರ, ವಿದ್ಯಾವತಿ ಅಂಕಲಗಿ ಹಾಗೂ ಇತರರು ಉಪಸ್ಥಿತರಿದ್ದರು.