ಬರ ಪರಿಹಾರ ಜಮೆಯಾಗದೇ ಇರುವರೈತರು ಸಹಾಯವಾಣಿ ಕೇಂದ್ರಗಳಿಗೆ ಕರೆ ಮಾಡಿ
ಬೀದರ. ಮೇ. 15: 2023-24ನೇ ಸಾಲಿನ ಬೀದರ ಜಿಲ್ಲೆಯ ಎಂಟು ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿರುವುದು ತಮ್ಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದ್ದು, ಜಿಲ್ಲೆಯ ಒಟ್ಟು 11075 ರೈತರ ಬ್ಯಾಂಕ ಖಾತೆಗಳಿಗೆ ವಿವಿಧ ಕಾರಣಾಂತರಗಳಿಂದ ಪರಿಹಾರ ಜಮೆಯಾಗದೇ ಬಾಕಿ ಉಳಿದಿರುತ್ತದೆ. ಪರಿಹಾರ ಜಮೆಯಾಗದೇ ಬಾಕಿ ಇರುವ ರೈತರ ಪಟ್ಟಿಯನ್ನು ನೀಡಲಾಗಿರುತ್ತದೆ.
ಪರಿಹಾರ ಜಮೆಯಾಗದೇ ಬಾಕಿ ಇರಲು ಕಾರಣಗಳು: ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ ಜೋಡಣೆಯಾಗದಿರುವುದು, ಫ್ರೂಟ್ಸ್ ತಂತ್ರಾಂಶದಲ್ಲಿರುವ ಹೆಸರು ಹಾಗೂ ಆಧಾರದಲ್ಲಿರುವ ಹೆಸರು ಹೊಂದಾಣಿಕೆಯಾಗದಿರುವುದು,ಬೆಳೆ ಹಾನಿ ಪ್ರಸ್ತಾವನೆಯಲ್ಲಿ ಸಲ್ಲಿಸಲಾದ ಬೆಳೆಗಳಾದ ಉದ್ದು, ಹೆಸರು, ಸೊಯಾಬಿನ್ ಹಾಗೂ ತೊಗರಿ ಬೆಳೆಗಳು ಬೆಳೆಯದೆ ಇರುವುದು.
ಸಹಾಯವಾಣಿ ಕೇಂದ್ರಗಳ ವಿವರ: ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೀದರ ದೂರವಾಣಿ ಸಂಖ್ಯೆ: 08482-224316, 224317, ಔರಾದ ತಾಲ್ಲೂಕಿನ ದೂರವಾಣಿ ಸಂಖ್ಯೆ: 08485-280024, ಕಮಲನಗರ ತಾಲ್ಲೂಕಿನ ದೂರವಾಣಿ ಸಂಖ್ಯೆ: 08485-285101, ಬೀದರ ತಾಲ್ಲೂಕಿನ ದೂರವಾಣಿ ಸಂಖ್ಯೆ: 08482-226459, ಭಾಲ್ಕಿ ತಾಲ್ಲೂಕಿನ ದೂರವಾಣಿ ಸಂಖ್ಯೆ: 08484-262218, ಬಸವಕಲ್ಯಾಣ ತಾಲ್ಲೂಕಿನ ದೂರವಾಣಿ ಸಂಖ್ಯೆ: 08481-250338, ಹುಮನಾಬಾದ ತಾಲ್ಲೂಕಿನ ದೂರವಾಣಿ ಸಂಖ್ಯೆ: 08483-270051, ಹುಲಸೂರ ತಾಲ್ಲೂಕಿನ ದೂರವಾಣಿ ಸಂಖ್ಯೆ: 9449317201, ಚಿಟ್ಟಗುಪ್ಪಾ ತಾಲ್ಲೂಕಿನ ದೂರವಾಣಿ ಸಂಖ್ಯೆ: 08483-277577.
ಪ್ರಯುಕ್ತ ಜಿಲ್ಲೆಯ ಎಲ್ಲಾ ರೈತರು ಸಂಬಂಧಪಟ್ಟ ಗ್ರಾಮದ ಆಡಳಿತ ಅಧಿಕಾರಿಗಳಿಗೆ ಕಛೇರಿಗೆ ಭೇಟಿ ನೀಡಿ, ತಹಸೀಲ್ದಾರ ಕಛೇರಿ ದೂರವಾಣಿ ಸಂಖ್ಯೆಗೆ ಅಥವಾ ಜಿಲ್ಲಾಧಿಕಾರಿಗಳ ಕಛೇರಿ ಸಹಾಯವಾಣಿ ಕೇಂದ್ರಕ್ಕೆ ಬೆಳಿಗ್ಗೆ 10 ರಿಂದ ಸಾಯಂಕಾಲ 5:30 ರವರೆಗೆ ಮಾತ್ರ ಕರೆ ಮಾಡಿ ನ್ಯೂನತೆಗಳನ್ನು ಸರಿಪಡಿಸಿಕೊಂಡು ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.