ಪಿಯುಸಿಯಲ್ಲಿ ನವೋದಯ ಶೇ೧೦೦ರಷ್ಟು ರಿಸಲ್ಟ್
ಸಂಜೆವಾಣಿ ವಾರ್ತೆ 
ಕೂಡ್ಲಿಗಿ. ಮೇ 15  : –   ಕೇಂದ್ರೀಯ ಪರೀಕ್ಷಾ  ಮಂಡಳಿಯು ಸೋಮವಾರ ಸಿಬಿಎಸ್‌ಇ  ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು, ಚಿಕ್ಕಜೋಗಿಹಳ್ಳಿಯಲ್ಲಿರು ಅವಳಿ ಜಿಲ್ಲೆಯ ಏಕೈಕ ಕೇಂದ್ರೀಯ ಜವಹಾರ್ ನವೋದಯ ವಿದ್ಯಾಯಲದಲ್ಲಿ  ಪರೀಕ್ಷೆ ಬರೆದ ಎಲ್ಲ ೩೪ ವಿದ್ಯಾರ್ಥಿ ಪಾಸಾಗುವ ಮೂಲಕ ವಿದ್ಯಾಲಯಕ್ಕೆ ಶೇ ೧೦೦ರಷ್ಟು ಫಲಿತಾಂಶ ಬಂದಿದೆ.
ಈ ಪೈಕಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅದರ್ಶ ಸುನೀಲ್ ಕುಮಾರ್ ೫೦೦ಕ್ಕೆ ೪೫೪ ಅಂಕ ಪಡೆದು ಶೇ% ೯೬.೬೦ ಸಾಧನೆ ಮಾಡಿದ್ದಾನೆ, ಅಲ್ಲದೆ, ಎಚ್.ಶಿವಕುಮಾರ್ ೫೦೦ಕ್ಕೆ ೪೫೫ ಶೇ೯೧, ಮಧುಪ್ರಿಯಾ ೫೦೦ಕ್ಕೆ ೪೪೫  ಅಂಕಗಳೊಂದಿಗೆ ಶೇ೮೯ರಷ್ಟು ಗರಿಷ್ಟ ಅಂಕ ಪಡೆದು ವಿದ್ಯಾಲಯಕ್ಕೆ ಟಪಾರ್ ಅಗಿದ್ದಾರೆ. ಅಲ್ಲದೆ, ೩೪ ವಿದ್ಯಾರ್ಥಿಗಳ ಪೈಕಿ ೧೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಾಸಾಗಿದ್ದಾರೆ, ಇನ್ನುಳಿ  ೨೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗುವ ಮೂಲಕ ಹಲವು ವರ್ಷಗಳ ಕಾಲ ನಿರಂತರ ಶೇ ೧೦೦ರಷ್ಟು ಸಾಧನೆ ಬಂದಿದೆ ಎಂದು ಪ್ರಾಚಾರ್ಯ ಸುದೇಶ್ ಗೋಪಾಲ್ ಮಲಾಜುರೆ ತಿಳಿಸಿದ್ದಾರೆ.
One attachment • Scanned by Gmail