ಪರಿಸರ ಸ್ವಚ್ಛತೆಯೇ ಸೊಳ್ಳೆಗಳಿಗೆ ಕಡಿವಾಣ
ಸಂಜೆವಾಣಿ ವಾರ್ತೆ
ಸಿರುಗುಪ್ಪ: ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ನಗರದಾದ್ಯಂತ ನಡೆಯುವ ಲಾರ್ವ ತಾಣಗಳ ಸಮೀಕ್ಷೆಯನ್ನು ನಗರದ ವಿವಿಧ ಭಾಗಗಳಿಗೆ ಭೇಟಿ ನೀಡಿದ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾಕ್ಟರ್ ಅಬ್ದುಲ್ಲಾಹ್ ರವರು ಒಂದನೇ ವಾರ್ಡಿನಲ್ಲಿ ಮನೆ ಮನೆಗೆ ತೆರಳಿ ನೀರಿನ ಸಂಗ್ರಹ ತಾಣಗಳಾದ ಡ್ರಮ್, ಗಚ್ಚು, ಕೊಳಾಯಿ ಕುಣಿಗಳು ಮೊದಲಾದವುಗಳನ್ನು ತಂಡದೊಂದಿಗೆ ಪರಿಶೀಲನೆ ನಡೆಸಿದರು.
 ಕೊಳಾಯಿ ಕುಣಿಯಲ್ಲಿ ಲಾರ್ವ ಕಂಡು ಬಂದಿದ್ದರಿಂದ ಅಲ್ಲಿಯೇ ಅದನ್ನು ಸ್ವಚ್ಛಗೊಳಿಸಿ ನೆರೆದಿರುವಂತಹ ಜನರಿಗೆ ಸೊಳ್ಳೆಗಳಿಂದ ಹರಡುವ ಮಾರಕ ರೋಗಗಳಾದ ಮಲೇರಿಯಾ, ಡೆಂಗ್ಯು, ಚಿಕನ್ ಗುನ್ಯಾ, ಮೆದುಳು ಜ್ವರ, ಆನೆಕಾಲು ರೋಗಗಳ ಹರಡುವಿಕೆಯ ಬಗ್ಗೆ ವಿವರಣೆ ನೀಡಿದರು.
ಡೆಂಗ್ಯೂ  ಜ್ವರದ ಲಕ್ಷಣಗಳು ವಿಧಗಳು ಮತ್ತು ಪರಿಣಾಮ, ಸೊಳ್ಳೆಯ ಜೀವನ ಚಕ್ರ ಕುರಿತಂತೆ ಚಿತ್ರಗಳ ಮುಖಾಂತರ ಪ್ರಾತ್ಯಕ್ಷಿತವಾಗಿ ತೋರಿಸಿದರು. ಸೊಳ್ಳೆಯ ಉತ್ಪತ್ತಿ ತಡೆಯಲು ನೀರಿನ ತಾಣಗಳನ್ನು ವಾರದಲ್ಲಿ ಎರಡು ಸಲ ಸ್ವಚ್ಛವಾಗಿ ತೊಳೆದು ನೀರು ತುಂಬಿದ ನಂತರ ಮುಚ್ಚಿಡುವಂತೆ, ಟೈರ್ , ಘನತ್ಯಾಜ್ಯಗಳನ್ನು ದೂರಸಾಗಿಸುವಂತೆ, ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವ ಮುಂಜಾಗ್ರತಾ ಮತ್ತು ರಕ್ಷಣಾ ಕ್ರಮಗಳ ಕುರಿತು ಮಾಹಿತಿ ತಿಳಿಸಿದರು.
ಜಿಲ್ಲಾ ಮಲೇರಿಯಾ ವಿಭಾಗದ ಸಲಹೆಗಾರ ಪ್ರತಾಪ್,  ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಚೋಟಯ್ಯ, ಮಲೇರಿಯಾ ಮೇಲ್ವಿಚಾರಕರಾದ ಶ್ರೀನಿವಾಸ್,‌ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲಿಕಾರ್ಜುನಪ್ಪ, ಆಶಾ ಕಾರ್ಯಕರ್ತೆ ಭಾರತಿ ಇದ್ದರು.
One attachment • Scanned by Gmail