ಉಚಿತ ಮೊಣಕಾಲು ಬದಲಿ ಶಸ್ತ್ರ ಚಿಕಿತ್ಸೆ ತಪಾಸಣಾ ಶಿಬಿರ
ಸಂಜೆವಾಣಿ ವಾರ್ತೆ
ಸಿರುಗುಪ್ಪ:ಮೇ,15- ತಾಲೂಕಿನ ತೆಕ್ಕಲಕೋಟೆಯ ಬೆಸ್ಟ್ ಮಾಂಟೇಸರಿ ಶಾಲೆಯಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ವತಿಯಿಂದ ಉಚಿತ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ನಿರಂತರ ಮೊಣಕಾಲು ನೋವು, ಮೊಣಕಾಲಿನ ಊತ ಬಿಗಿತ, ಸೀಮಿತ ವ್ಯಾಪ್ತಿಯಲ್ಲಿ ಮಾತ್ರ ಚಲನೆ, ಧೀರ್ಘಕಾಲದ ಜಂಟಿ ನೋವು ಮುಂತಾದ ನೋವುಗಳಿಗೆ ನುರಿತ ವೈದ್ಯರು ತಪಾಸಣೆ ನಡೆಸಿದರು. ಶಿಬಿರದಲ್ಲಿ 255 ಜನರಿಗೆ ತಪಾಸಣೆ ಮಾಡಲಾಯಿತು.
ನಾರಾಯಣ ಹೆಲ್ತ್ಸಿಟಿ ವೈದ್ಯರಾದ ನಿಕಂಜ್ ಗೊಂಡಾಲಿಯಾ, ಮಿಥನ್‌ಕುಮಾರ್ ಹಾಗೂ ಸಿಬ್ಬಂದಿಗಳಾದ ಬಹುಜನ್, ಬಾಲಾಜಿ, ಅಮಿತ್, ನಾಗರಾಜ ಮತ್ತು ಚನ್ನಬಸವ ಇದ್ದರು.