ಮನೆಗಳ್ಳತನ – ಚಿನ್ನ, ಬೆಳ್ಳಿ ಕಳುವು.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.15 :- ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಯಾರೋ ಕಳ್ಳರು ಹಾಡು ಹಗಲೇ  ಮನೆಯ ಚಿಲಕದ ಕೊಂಡಿ ಬಿಚ್ಚಿ ಮುರಿದು ಒಳಗೆ  ಪ್ರವೇಶ ಮಾಡಿ ಬಿರೋದಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರ ಬೆಳಿಗ್ಗೆ 9-30ಗಂಟೆಯಿಂದ ಮಧ್ಯಾಹ್ನ 2ಗಂಟೆ ಮಧ್ಯಾವಧಿ ಜರುಗಿದೆ.
ಹೌದು ಪಟ್ಟಣದ ಚೋರನೂರು ರಸ್ತೆ ಪಕ್ಕದಲ್ಲಿರುವ ಕೂಡ್ಲಿಗಿ  ಲೋಕೋಪಯೋಗಿ ಇಲಾಖೆ ನಿವೃತ್ತ ನೌಕರ ಸೋಮಶೇಖರ ಎನ್ನುವವರ ಮನೆಯೇ ಹಾಡು ಹಗಲೇ ಕಾರಣವಾಗಿದ್ದು ಬಂಗಾರದ 3ಜೊತೆ ಕಿವಿಯೋಲೆ ಮತ್ತು ಒಂದು ಕೆಜಿ ಬೆಳ್ಳಿ ಆಭರಣಗಳು ಕಳ್ಳತನವಾಗಿರುವ ಬಗ್ಗೆ ತಿಳಿದಿದೆ.
ಘಟನೆ ವಿವರ : ಮಂಗಳವಾರ ಬೆಳಿಗ್ಗೆ ಬೆಳಗಿನ ಉಪಹಾರ ಮುಗಿಸಿಕೊಂಡು ಬಾಗಿಲು ಹಾಕಿಕೊಂಡು ಮನೆಯ ಮಾಲೀಕ ಅಲ್ಲಿಯೇ ಸಮೀಪದ ಜಿಲ್ಲಾ ಪಂಚಾಯತ್ ಕಚೇರಿ ಹತ್ತಿರ ಹೋಗಿದ್ದು ಮನೆ ಬಾಗಿಲನ್ನು ಗಮನಿಸಿದ ಯಾರೋಕಳ್ಳರು ಹಾಡು ಹಗಲೇ ಮನೆಯ ಚಿಲಕದ ಕೊಂಡಿ ಬಿಚ್ಚಿ ಮನೆಯೊಳಗೆ ಹೋಗಿ  ಬೀರೋದಲ್ಲಿದ್ದ ಸುಮಾರು 3ಜೊತೆ ಕಿವಿಯೋಲೆ ಹಾಗೂ 1ಕೆಜಿ ಬೆಳ್ಳಿ ಸೇರಿದಂತೆ ಒಟ್ಟು 1.02,000ರೂ  ಮೌಲ್ಯದ ಚಿನ್ನ, ಬೆಳ್ಳಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಸೋಮಶೇಖರ ನೀಡಿದ ದೂರಿನಂತೆ  ಕೂಡ್ಲಿಗಿ ಪೊಲೀಸ ಠಾಣೆಯ ಪೊಲೀಸ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಕೂಡ್ಲಿಗಿ ಸಿಪಿಐ ವಿನಾಯಕ  ಪ್ರಭಾರಿ ಪಿಎಸ್ಐ ಮೋಹನ್ ಹಾಗೂ ಸಿಬ್ಬಂದಿ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ ಅಲ್ಲದೆ ಶ್ವಾನದಳ, ಬೆರಳಚ್ಚುಗಾರರು ಹಾಗೂ ಸುಖೋ ತಂಡ ಭೇಟಿ ನೀಡಿ ಮಾಹಿತಿ ಕಲೆಹಾಕಿಕೊಂಡಿದ್ದು ಕೂಡ್ಲಿಗಿ ಠಾಣೆಯ ಪೊಲೀಸರು ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.