ಗಾದೆಪ್ಪ ಅಭಿಮಾನಿಗಳ ಬಳಗದಿಂದ ಡಿ.ಕೆ.ಶಿವಕುಮಾರ್ ಜನ್ಮದಿನಾಚರಣೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.15: ರಾಜ್ಯದ  ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಜನ್ಮದಿನಾಚರಣೆಯನ್ನು
ಇಂದು ನಗರ ಪಾಲಿಕೆ ಸದಸ್ಯ  ಪಿ. ಗಾದೆಪ್ಪನವರ ಅಭಿಮಾನ ಬಳಗದಿಂದ ಇಲ್ಲಿನ ಕನಕ ದುರ್ಗಮ್ಮ ದೇವಸ್ಥಾನದಲ್ಲಿ   ವಿಶೇಷ ಪೂಜೆ ಸಲ್ಲಿಸಿ ಕೇಕ್ ಕತ್ತರಿಸಿ ಹಂಚುವ ಮೂಲಕ‌ ಆಚರಸಲಾಯ್ತುಮ
ಬುಡಾ ಅಧ್ಯಕ್ಷ ಜೆ.ಎಸ್. ಆಂಜನೇಯಲು. ಕಾಂಗ್ರೆಸ್ ಮಹಿಳಾ ಜಿಲ್ಲಾ ಅಧ್ಯಕ್ಷೆ ಮಂಜುಳ. ಮುಖಂಡರಾದ ಕಲ್ಕಂಬ ಪಂಪಾಪತಿ,ವೆಂಕಟೇಶ್ ಹೆಗಡೆ, ವಿಷ್ಣು,  ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯಡು,  ವಾರ್ಡಿನ ಕಾಂಗ್ರೆಸ್ಸಿನ ಕಾರ್ಯಕರ್ತರು, ಅಭಿಮಾನಿಗಳು, ಸ್ನೇಹಿತರು . ಪಾಲ್ಗೊಂಡಿದರು.