ಬಿಕೆಜಿ ಗ್ಲೋಬ್ಲ ಶಾಲೆಯ ಎಸ್.ಎಸ್.ಎಲ್.ಸಿ. ( ಸಿ.ಬಿ.ಎಸ್ಸಿ) ಉತ್ತಮ ಫಲಿತಾಂಶ
ಸಂಜೆವಾಣಿ ವಾರ್ತೆ
ಸಂಡೂರು: ಮೇ: 15: ಸಂಡೂರು: 2023-24 ನೇ ಸಾಲಿನ 10 ನೇ ತರಗತಿ ವಾರ್ಷಿಕ ಪರಿಕ್ಷೆಯಲ್ಲಿ ಬಿ.ಕೆ.ಜಿ ಗ್ಲೋಬಲ್ ಶಾಲೆಯ ವಿದ್ಯಾರ್ಥಿಗಳು ಅತ್ಯತ್ತಮ ಫಲಿತಾಂಶ ಪಡೆದಿರುತ್ತಾರೆ .ಸತತ ಮೂರನೇ ವರ್ಷವೂ ಸಹ ಶೇ 100% ಫಲಿತಾಂಶ ಬಂದಿರುತ್ತದೆ. 66 ವಿದ್ಯಾರ್ಥಿಗಳಲ್ಲಿ 47 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದಿರುತ್ತಾರೆ. 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 06 ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿ ಪಡೆದಿರುತ್ತಾರೆ. ಶೇಕಡÀ 71% ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದಿರುವುದು ವಿಶೇಷ ಸಾಧನೆಯಾಗಿದೆ.
ವಿದ್ಯಾರ್ಥಿಗಳಾದ ಮಾನಸ ಎಚ್ ಮತ್ತು ಇ ಅಭಿನವ್ 94.4%, ಚನ್ನವೀರ ಪ್ರಭು ಶೇ 93.6%, ನಿಖಿತಾ ಪಿ 93%, ಅರ್ನವ್ ಎ 91.2%, ಅಮನ್ ಎಚ್  91.2%, ಸಹನಾ ಎಚ್ ಜಿ 90.8%, ದರ್ಶನ್ ಡಿ ಬಿ 90 % ಪಡೆದು ಸಾಧನೆ ಮಾಡಿದ್ದಾರೆ. ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು ಕಾಲೇಜಿನ ಅಧ್ಯಕ್ಷರಾದ ಬಿ.ರುದ್ರಗೌಡ ರವರು , ಪ್ರಾಂಶುಪಾಲರಾದ ಮೋಹನ್ ರಾವ್‍ರವರು. ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳು ಅಭಿನಂದಿಸಿದರು