ನರೇಗಾ ಕಾರ್ಮಿಕರಿಂದ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಸಂಡೂರು: ಮೇ 15   ಉದ್ಯೋಗಖಾತ್ರಿಯ ಕೆಲಸವನ್ನು ಬಿರುಬಿಸಿಲಿನಲ್ಲಿಯೂ ನಿರಂತರವಾಗಿ ಮಾಡುತ್ತಿದ್ದರು. ಅಧಿಕಾರಿಗಳು ಕಡಿಮೆ ಕೂಲಿಯನ್ನು ಪಾವತಿಸುತ್ತಿಲ್ಲ ಅಲ್ಲದೆ ಮುಖ್ಯವಾಗಿ ನರೇಗಾ ಕೆಲಸವನ್ನು ಸಕಾಲಕ್ಕೆ ನೀಡದೇ ವಿಳಂಬ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿ ಹೊಸದರೋಜಿ ಗ್ರಾಮದ ಗ್ರಾಮೀಣ ಕೂಲಿ ಕಾರ್ಮಿಕರು ಹೊಸದರೋಜಿ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಕಾರ್ಮಿಕ ಮಹಿಳೆ ಹುಲಿಗೆಮ್ಮ ಮಾತನಾಡಿ, ಸರ್ವರ್ ಸಮಸ್ಯೆ ಪರಿಹಾರದಿಂದ ಅಧಿಕಾರಿಗಳು ಸಕಾಲಕ್ಕೆ ಕೆಲಸ ನೀಡದೇ ನರೇಗಾ ಕಾರ್ಮಿಕರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ಕುಡಿಯುವ ನೀರಿನ , ನೆರಳಿನ ವ್ಯವಸ್ಥೆ ಮಾಡಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಸಂಬಂಧಪಟ್ಟ ಅದಿಕಾರಿಗಳು, ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಸಹ ಪ್ರಯೋಜನವಾಗಿಲ್ಲ. ಅದಷ್ಟು ಬೇಗನೆ ಹೆಚ್ಚು ಕೂಲಿ ಪಾವತಿಸಿ ಸಕಾಲಕ್ಕೆ ಕೆಲಸ ಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕಿ ಕೆ. ವಾಣಿ ಕಾರ್ಮಿಕರಾದ ತಿಮ್ಮಪ್ಪ , ಮಹೇಂದ್ರ ಲಕ್ಷ್ಮೀ, ಜ್ಯೋತಿ, ಯಶೋಧಾ ಸುನೀತಾ ಸರೋಜ, ನಾಗಲಕ್ಷ್ಮೀ ಗಂಗಮ್ಮ ಉಪಸ್ಥಿತರಿದ್ದರು.
ಪ್ರತಿಕ್ರಿಯೆ:
ಕಾರ್ಮಿಕರಿಗೆ ಕೂಲಿ ಪಾವತಿಸಲಾಗುತ್ತಿದೆ ಕೆಲಸದ ಸ್ಥಳದಲ್ಲಿ ಕುಡಿಯುವ ನೀರು ನೆರಳು ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೊಸದರೋಜಿ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಗಣೇಶ್ ಪ್ರತಿಕ್ರಿಯಿಸಿದರು.