ಪರಿಹಾರ ಬೋಧನಾ ತರಗತಿ ರದ್ದಿಗೆ ಮನವಿ
ಸಂಜೆವಾಣಿ ವಾರ್ತೆ
ಯಲಬುರ್ಗಾ, ಮೇ.15  :  ಮೇ 15 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ 2 ನ್ನು ಬರೆಯುವ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನಾ ತರಗತಿ ಯನ್ನು ನಡೆಸುವಂತೆ   ಪ್ರೌಢ ಶಾಲಾ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು ಕೂಡಲೇ ರದ್ದು ಪಡಿಸಬೇಕೆಂದು ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಯಲಬುರ್ಗಾ ಕುಕನೂರು ತಾಲೂಕು ಘಟಕಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದೆ.
ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಈಗಾಗಲೇ ಬೆಳಗಿನ, ಸಾಯಂಕಾಲ ವಿಶೇಷ ತರಗತಿಗಳನ್ನು ನಡೆಸಿದ್ದಾರೆ. ಕಿರು ಪರೀಕ್ಷೆ, ಘಟಕ ಪರೀಕ್ಷೆ ಇತ್ಯಾದಿ ಪರೀಕ್ಷೆಗಳನ್ನು ನಡೆಸಿರುತ್ತಾರೆ. ಅಲ್ಲದೇ ಶಿಕ್ಷಕರು ಎಸ್ ಎಸ್ ಎಲ್ ಸಿ ಮೌಲ್ಯ ಮಾಪನ, ಲೋಕಸಭೆ ಚುನಾವಣೆ ಕಾರ್ಯಗಳನ್ನು ಪ್ರಸಕ್ತ ರಜೆಯಲ್ಲಿ ನಿರ್ವಹಿಸಿದ್ದಾರೆ. ಸದ್ಯದ ರಜೆ ದಿನಗಳು ಇರುವುದರಿಂದ ಶಿಕ್ಷಕರು ಕೂಡಾ ತಮ್ಮ ಕುಟುಂಬದೊಂದಿಗೆ ಬೇರೆಯಲು ಸಮಯ ಮಿಸಲಿಟ್ಟದ್ದರಿಂದ ಸದರಿ ಕಾರ್ಯ ಸೂಚಿಯಿಂದ ಶಿಕ್ಷಕರಿಗೆ ತೊಂದರೆ ಆಗುತ್ತಿದ್ದೂ ಸರ್ಕಾರ, ಶಿಕ್ಷಣ ಇಲಾಖೆ ಈ ಆದೇಶವನ್ನು ರದ್ದು ಪಡಿಸಿ ಸಂಘದ ಉಬಯ ತಾಲೂಕು ಘಟಕಗಳ ಮನವಿಯನ್ನು ಪರಿಗಣಿಸುವಂತೆ ಸಂಘದ ಪದಾಧಿಕಾರಿಗಳಾದ ಅಶೋಕ್ ಪಾಟೀಲ್, ಬಸವರಾಜ್ ಮೇಟಿ, ಸುರೇಶ್, ಸುರೇಶ್ ಮಾದಿನೂರು, ಉದಯ್ ತಳವಾರ್, ಮತ್ತಿತರರು ಮನವಿ ಮಾಡಿಕೊಂಡಿದ್ದಾರೆ.