ರಾಜ್ಯದಲ್ಲಿ ಡೆಂಗ್ಯೂ ಜ್ವರದ ಭೀತಿ
ಬೆಂಗಳೂರು.ಮೇ.೧೫- ಕೆಲವು ದಿನಗಳಿಂದ ರಾಜ್ಯದಲ್ಲಿ ಮಳೆಯಾಗುತ್ತಿರುವ ಬೆನ್ನಲ್ಲೆ ಮಹಾಮಾರಿ ಡೆಂಗ್ಯೂ ಪ್ರಕರಣ ಹೆಚ್ಚಾಗಿದೆ.
ರಾಜ್ಯದಲ್ಲಿ ೨೮೦೦ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ ೧೭೨೫ ಪ್ರಕರಣಗಳು ದಾಖಲಾಗಿರುವುದು ಆತಂಕಕ್ಕೀಡು ಮಾಡಿದೆ. ಆದರೆ ಈ ವರ್ಷ ಮೊನ್ನೆ ಮೇ ೧೩ರವರೆಗೆ ೨,೮೭೭ ಪ್ರಕರಣಗಳು ದಾಖಲಾಗಿವೆ.
ಮುಂಗಾರು ಆರಂಭಕ್ಕೂ ಮುನ್ನವೇ ಡೆಂಗ್ಯೂ ಆರ್ಭಟ ಹೆಚ್ಚಾದ್ದರಿಂದ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು ಕ್ರಮಕ್ಕೆ ಮುಂದಾಗಿದೆ.
ಜಿಲ್ಲಾ ಆರೋಗ್ಯ ಅಧಿಕಾರಗಳು (ಡಿಎಚ್‌ಒ) ಮತ್ತು ರೋಗ ನಿಯಂತ್ರಣ ಅಧಿಕಾರಿಗಳು ಎನ್‌ಎಚ್‌ಎಂನ ನಿರ್ದೇಶಕರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ರೋಗ ನಿಂಯ್ರಣ ಕ್ರಮಕ್ಕೆ ಮುಂದಾಗಿದ್ದಾರೆ.
ಡೆಂಘಿ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕಿಟ್, ಔಷಧಿಗಳ ಲಭ್ಯತೆ, ಆಸ್ಪತ್ರೆಗಳಲ್ಲಿ ಪ್ರಕರಣಗಳ ಮೇಲ್ವಿಚಾರಣೆ, ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನ, ಆಶಾ ಕಾರ್ಯಕರ್ತೆಯರ ಮತ್ತು ಆರೋಗ್ಯ ಸಿಬ್ಬಂದಿಗಳ ಮನೆ ಮನೆ ಭೇಟಿ ಬಗ್ಗೆ ಪರಿಶೀಲಿಸಲಾಗುತ್ತಿದೆ.
ಏನಿದು ಡೆಂಗ್ಯೂ ?
ಡೆಂಗ್ಯೂ ಕಾಯಿಲೆ ಸಾಮಾನ್ಯವಾಗಿ ಜರ್‍ವದ ಲಕ್ಷಣ ತೋರಿಸುತ್ತದೆ. ಮಲೇರಿಯಾದಂತೆ ಸೊಳ್ಳೆಗಳಿಂದ ಹರಡುವ ಕಾಯಿಲೆಯಾಗಿದೆ. ಮೈಬಿಸಿ, ತಲೆ ನೋವು, ಕೀಲು ಮತ್ತು ಸ್ನಾಯು ನೋವು, ರಕ್ತ ಸ್ರಾವ ಡೆಂಘಿ ಲಕ್ಷಣಗಳಾಗಿವೆ.
ಡೆಂಗ್ಯೂ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಯಿಂದ ಹರಡುವ ವೈರಾಣು ಸೋಂಕು ಆಗಿದೆ. ಉಷ್ಣವಲಯ ಮತ್ತು ಉಪುಷ್ಣವಲಯಗಳಲ್ಲಿ ಹೆಚ್ಚಾಗಿ ಪತ್ತೆಯಾಗುತ್ತವೆ.
ಡೆಂಗ್ಯೂಯಿಂದ ದೂರ ಉಳಿಯಲು ಸೊಳ್ಳೆ ಕಚ್ಚದಂತೆ ಎಚ್ಚರವಹಿಸಬೇಕು. ಬಿಸಿ ನೀರನ್ನು ಕುಡಿಯಬೇಕು. ಶುದ್ಧ ಕರವಸ್ತ್ರಗಳನ್ನು ಬಳಸಬೇಕು.