ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮನವಿ
ನವಲಗುಂದ,ಮೇ.15 : ಬೆಳೆವಿಮೆ, ಬೆಳೆಹಾನಿ ಪರಿಹಾರದಲ್ಲಿ ವ್ಯತ್ಯಾಸ ಹಾಗೂ ಬ್ಯಾಂಕಿನವರು ರೈತರಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದು ಸಮಸ್ಯೆ ಕೂಡಲೇ ಬಗೆಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಜಾತ್ಯಾತೀತ ಪಕ್ಷಾತೀತ ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮಿತಿಯಿಂದ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಮಿತಿ ಅಧ್ಯಕ್ಷ ರಘುನಾಥರಡ್ಡಿ ನಡುವಿನಮನಿ ಮಾತನಾಡಿ ರೈತರು ಹೆಸರಿನ ಬೆಳೆ ವಿಮಾದಿಂದ ವಂಚಿತರಾಗಿರುತ್ತಾರೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದರು.
ಮುಖಂಡರಾದ ಲೋಕನಾಥ ಹೇಬಸೂರ್ ಮಾತನಾಡಿ ಬೆಳೆ ಹಾನಿಯಲ್ಲಿ ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ನಿಯಮದ ಪ್ರಕಾರ ಪರಿಹಾರವನ್ನು ಕೊಟ್ಟಿರುವದಿಲ್ಲಾ. ನೀರಾವರಿಗೆ ಮತ್ತು ಒಣಬೇಸಾಯ ಹಾಗೂ ತೊಟಗಾರಿಕೆ ಬೆಳೆಗಳಿಗೆ ಬೆರೆ ಬೆರೆ ನಿಯಮವಿದ್ದರೂ ಕೂಡಾ ಯಾವ ರೈತರಿಗೂ ಪರಿಹಾರ ಬಂದಿರುವದಿಲ್ಲ.
ರೈತರಿಗೆ ಬಂದಂತಹ ಪರಿಹಾರದ ಹಣ ಹಾಗೂ ಬೆಳೆ ವಿಮೆ ಹಣವನ್ನು ಬ್ಯಾಂಕಿನವರು ಸಾಲಕ್ಕೆ ಜಮಾಮಾಡಿಕೊಳ್ಳುತ್ತಿದ್ದಾರೆ. ಈ ಹಣವನ್ನು ಯಾವುದೇ ಕಾರಣಕ್ಕೂ ಸಾಲಕ್ಕೆ ಜಮಾ ಮಾಡಬಾರದು ಎಂದು ಬ್ಯಾಂಕಿನವರಿಗೆ ಆದೇಶಿಸಬೇಕು. ಈ ಬೇಡಿಕೆ 15 ದಿನದ ಒಳಗಾಗಿ ಇಡೇರಿಸದಿದ್ದರೇ ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನಗೌಡ ಕುಲಕರ್ಣಿ, ಪಕ್ಕೀರಗೌಡ ವೆಂಕಣಗೌಡ್ರ, ಗೌಡಪ್ಪಗೌಡ ದೊಡಮನಿ, ಬರಮಪ್ಪ ಕಾತರಕಿ, ರಮೇಶ ಹಲಗತ್ತಿ, ವಿಠ್ಠಲ ಗೊನ್ನಾಗರ, ಭರಮಗೌಡ ಹೊಸಗೌಡ್ರ, ಯಲ್ಲಪ್ಪ ಸಾಲಿ, ಪರಶು ಓಲೇಕಾರ, ಬಸವರಾಜ ಮರಲಕ್ಕಣ್ಣವರ, ನಿಂಗಪ್ಪ ಈಟಿ ಸೇರಿದಂತೆ ನೂರಾರು ರೈತ ಮುಖಂಡರು ಉಪಸ್ಥಿತರಿದ್ದರು