ಉಪನ್ಯಾಸ, ವಚನ ಗಾಯನ ಕಾರ್ಯಕ್ರಮ
ಧಾರವಾಡ,ಮೇ. 15: ಬಸವಣ್ಣನವರುಕನ್ನಡದಕೀರ್ತಿಯನ್ನುಜಾಗತಿಕ ಮಟ್ಟಕ್ಕೆ ಬೆಳೆಸಿದ ಮಹಾಮಾನವತಾವಾದಿಗಳು. ಅವರು ವಿಶ್ವ ಪ್ರೇಮದಲ್ಲಿ ಜಗತ್ತನ್ನಾಳುವ ದಿವ್ಯ ಶಕ್ತಿ ಇದೆಎಂಬುದನ್ನು ತೋರಿಸಿದರು ಎಂದುಧಾರವಾಡ ಹಿರೇಮಲ್ಲೂರಈಶ್ವರನ್ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಶಶಿಧರ ತೋಡಕರ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ `ಬಸವಣ್ಣನವರ ಶೈಕ್ಷಣಿಕ ಚಿಂತನೆಗಳು’ ಉಪನ್ಯಾಸ ಹಾಗೂ ವಚನ ಗಾಯನಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುರು ಬಸವಣ್ಣನವರುಎಲ್ಲರಂತೆ ಬದುಕಲಿಲ್ಲಾ.ಎಲ್ಲರಿಗಾಗಿ ಬದುಕಿದ ಮಹಾಚೇತನ. ಕಾಯಕ ಮತ್ತುದಾಸೋಹ ವಿಶ್ವ ಸಂಸ್ಕøತಿಗೆ ಬಸವಣ್ಣನವರಎರಡು ಮಹಾನ್ ಕೊಡುಗೆಗಳು. ಹೀಗಾಗಿ ಈ ಎರಡನ್ನು ಕಡ್ಡಾಯಗೊಳಿಸಿದರು.ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದ ಬಸವಣ್ಣಎಲ್ಲಾಜಾತಿ, ಮತ, ಪಂಥದವರನ್ನು ಭೇದವಿಲ್ಲದೇ ಸರ್ವರನ್ನುಅಪ್ಪಿಕೊಂಡು ಬದುಕಿದ ವಿಶ್ವ ಮಾನವರು.ಬಸವಣ್ಣ ನುಡಿದಂತೆ ನಡೆದ ವಿಶ್ವವಿಭೂತಿ ಪುರುಷರು.ಅನುಭವ ಮಂಟಪದ ಮೂಲಕ ಸಮಸಮಾಜ ನಿರ್ಮಿಸಿ, ಪ್ರಜಾಪ್ರಭುತ್ವದ ಮೂಲಪುರುಷರೆನಿಸಿಕೊಂಡರು ಎಂದರು.
ಹಿರಿಯ ಸಾಹಿತಿಡಾ.ಬಾಳಣ್ಣ ಶೀಗೀಹಳ್ಳಿ ಉಪನ್ಯಾಸ ನೀಡಿ, ಬಸವಣ್ಣನವರು 12ನೇ ಶತಮಾನದಲ್ಲಿಎಲ್ಲಾ ಕಾಯಕಜೀವಿಗಳಿಗೆ ಅಕ್ಷರ ಕಲಿಸಿ ಅರಿವು ಮೂಡಿಸಿ, ವಚನ ರಚಿಸಲು ಪ್ರೇರಣೆ ನೀಡಿದರು.ಸ್ತೀಯರಿಗೆ ಶಿಕ್ಷಣ ನೀಡುವುದರ ಮೂಲಕ 33 ಜನ ಮಹಿಳೆಯರು ವಚನಗಾರ್ತಿಯರಾಗಲು ಸಾಧ್ಯವಾಯಿತು.ಅವರ ವಚನ ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡಎಂಬುದು ಸ್ವಸ್ಥ ಸಮಾಜ ನಿರ್ಮಾಣದ ಬುನಾದಿಯಾಯಿತು.ಜನಸಾಮಾನ್ಯರಲ್ಲಿ ಸ್ವಯಂಚಿಂತನೆ ಹಾಗೂ ವಿವೇಕವನ್ನು ಮೂಡಿಸಿದರು. ಅವರಕಾಯಕ ಸಮಾನತೆ ತತ್ವಗಳಲ್ಲಿ ಶೈಕ್ಷಣಿಕ ಚಿಂತನೆಗಳಿವೆ ಎಂದರು.
ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಮೂಢ ನಂಬಿಕೆ, ಕಂದಾಚಾರಗಳು ಮನುಷ್ಯನನ್ನುಅಜ್ಞಾನಿಯನ್ನಾಗಿ ಮಾಡುತ್ತವೆ. ಸುಜ್ಞಾನಿಯಾಗಬೇಕಾದರೆ ಈ ಅನಿಷ್ಠ ಪದ್ಧತಿಗಳಿಂದ ಮುಕ್ತವಾಗಬೇಕು.ಇದೂ ಶಿಕ್ಷಣದ ಒಂದುರೂಪವೇ.ಪ್ರಶಿಕ್ಷಣಾರ್ಥಿಗಳಾದ ತಾವು ಭವಿಷ್ಯದಲ್ಲಿ ವಿದ್ಯಾರ್ಥಿಗಳನ್ನು ಜಬಾಬ್ದಾರಿಯುತ ವ್ಯಕ್ತಿಗಳನ್ನಾಗಿ ರೂಪಿಸಬೇಕಿದೆಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆಡಾ.ಗಿರಿಜಾ ಹಿರೇಮಠ ಮಾತನಾಡಿ, ಬಸವಣ್ಣನವರ ಅನೇಕ ವಚನಗಳು ಜನಶಿಕ್ಷಣಕ್ಕೆ ಪೂರಕವಾಗಿವೆಎಂದು ಹೇಳಿದರು.
ಬಸವಣ್ಣನವರ ಭಾವಚಿತ್ರಕ್ಕೆಗಣ್ಯರು ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಿದರು.ಶಿವಾನಂದ ಹೂಗಾರ ಹಾಗೂ ಸಂಗಡಿಗರು ಬಸವಣ್ಣನವರ ವಚನ ಗಾಯನ ಪ್ರಸ್ತುತಪಡಿಸಿದರು.
ಕು.ಜ್ಯೋತಿ ಬ್ಯಾಲಾಳ ಸಂಗಡಿಗರ ವಚನ ಪ್ರಾರ್ಥನೆ ಮಾಡಿದರು. ಡಾ. ಕುಮಾರಸ್ವಾಮಿ ಹಿರೇಮಠ ಸ್ವಾಗತಿಸಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣಒಡ್ಡೀನ ಮಂಟಪದಕಾರ್ಯಯೋಜನೆಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಶಂಕರಚಕ್ರವರ್ತಿ ನಿರೂಪಿಸಿದರು.ಪ್ರೊ.ಪಿ.ಎಸ್. ಇಲಕಲ್ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಜಯಶೀಲಾ ವಿ.ಎಚ್, ಎಸ್.ಎಂ.ಕೊಟಬಾಗಿ, ನ್ಯಾಯವಾದಿ ಕೋರಿಶೆಟ್ಟರ, ಪ್ರೊ.ಉಮಾ ಮಠ, ವಿಜಯಲಕ್ಷ್ಮೀಕಲ್ಯಾಣಶೆಟ್ಟರ ಸೇರಿದಂತೆ ಪ್ರಶಿಕ್ಷಣಾರ್ಥಿಗಳು, ಇತರರುಇದ್ದರು.