ಪ್ರೀತಿ ವಿಸ್ವಾಸದಿಂದ ಸಹಕಾರಿ ಸಂಘಗಳು ಬೆಳೆದಿವೆ:ಮುತ್ತುರಾಜ
ತಾಳಿಕೋಟೆ:ಸೆ.೨೩: ಜನರ ನಂಬಿಕೆ ವಿಸ್ವಾಸ ಪ್ರೀತಿಯನ್ನು ಗಳಿಸಿದಾಗ ಮಾತ್ರ ಸಹಕಾರಿ ಸಂಘಗಳು ಬೆಳೆಯಲು ಸಾದ್ಯವಾಗಿದೆ ಶ್ರೀ ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘದ ಎಲ್ಲ ಸದಸ್ಯರು ತಮ್ಮ ಅಳಿಲು ಸೇವೆ ಸಲ್ಲಿಸಿದ್ದರ ಪರಿಣಾಮ ವರ್ಷದಿಂದ ವರ್ಷಕ್ಕೆ ಲಾಭಾಂಶದಲ್ಲಿ ದ್ವಿಗುಣವಾಗಲು ಸಾದ್ಯವಾಗಿದೆ ಎಂದು ಶ್ರೀ ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಮುತ್ತುರಾಜ ಜಾಹಗೀರದಾರ ಅವರು ಹೇಳಿದರು.
ಪಟ್ಟಣದ ಅಡತ್ ಮರ್ಚೆಂಟ್ ಅಸೋಸಿಯೇಶನ್ ಸಭಾಭವನದಲ್ಲಿ ರವಿವಾರ ಶ್ರೀ ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘದ ೨೪ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಹಕಾರಿ ಸಂಘದ ಸದಸ್ಯರುಗಳು ವಿಸ್ವಾಸದಾಯಕ ಮನೋಭಾವನೆ ಹೊಂದಿರಬೇಕು ಮತ್ತು ಸಿಬ್ಬಂದಿಗಳು ಗ್ರಾಹಕರೊಂದಿಗೆ ಪ್ರೀತಿ ವಿಸ್ವಾಸವನ್ನು ಗಳಿಸಿಕೊಳ್ಳಬೇಕು ಇದರಿಂದ ಸಹಕಾರಿ ಕ್ಷೇತ್ರವು ಬೆಳೆಯಲು ಸಾದ್ಯವಾಗಲಿದೆ ಜಂಗಮ ಸಮಾಜದ ಹಿರಿಯರು ಸಮಾಜದ ಶ್ರೇಯೋಭಿವೃದ್ದಿಗಾಗಿ ಕಟ್ಟಿದ್ದ ಶ್ರೀ ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘವು ಹೆಮ್ಮರವಾಗಿ ಬೆಳೆದು ನಿಂತಿದ್ದು ಇದಕ್ಕೆ ಗ್ರಾಹಕರ, ಸಿಬ್ಬಂದಿಗಳ ಮತ್ತು ಸದಸ್ಯರ ಸಹಕಾರವೇ ಕಾರಣವಾಗಿದೆ ಎಂದ ಅವರು ಗ್ರಾಹಕರು ನಮ್ಮ ಮೇಲೆ ವಿಶ್ವಾಸವಿಟ್ಟು ಸೇವೆ ಮಾಡುವ ಅವಕಾಶ ಕೊಟ್ಟಿದ್ದಾರೆ ಈ ಅವಧಿಯಲ್ಲಿ ಸಂಘದ ಅಭಿವೃದ್ಧಿಗೆ ನಾವು ಸಾಕಷ್ಟು ಶ್ರಮಿಸಿದ್ದೇವೆ. ಸಂಘವು ಅಭಿವೃದ್ಧಿ ಹೊಂದಲು ಸಾಲ ಪಡೆದವರು ಸಕಾಲಕ್ಕೆ ಮರು ಪಾವತಿಸಬೇಕು. ಮುಂದಿನ ದಿನಗಳಲ್ಲಿ ಶ್ರೀ ಪಂಚಾಚಾರ್ಯ ಬ್ಯಾಂಕಿನ ಇನ್ನೊಂದು ಶಾಖೆ ಪ್ರಾರಂಬಿಸುವ ಆಲೋಚನೆಯನ್ನು ಆಡಳಿತ ಮಂಡಳಿಯ ಎಲ್ಲ ಸದಸ್ಯರು ಮಾಡಿದ್ದು ಇದಕ್ಕೆ ಎಲ್ಲರ ಸಹಕಾರ ಅತ್ಯವಶ್ಯವಾಗಿದೆ ಎಂದರು.
ಪೀರಾಪೂರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್.ಬಿ. ದಮ್ಮೂರಮಠ ಮಾತನಾಡಿ ಸಾರ್ವಜನಿಕ ಕ್ಷೇತ್ರದಲ್ಲಿ ಸಾಕಷ್ಟು ಸಹಕಾರಿ ಸಂಘ-ಸAಸ್ಥೆಗಳು ಜನ್ಮ ತಾಳುತ್ತವೆ ಜನ್ಮತಾಳಿದ ನಂತರ ಜನರೊಂದಿಗೆ ಬೆರೆತು ಅವರ ಕಷ್ಟ ಸುಖಃಗಳ ಜೊತೆಗೆ ತನ್ನ ಬೆಳವಣಿಗೆಯನ್ನು ಸಾಧಿಸಬೇಕಾದ ಛಲವೆಂಬುದು ಬೇಕಾಗುತ್ತದೆ ಈ ಛಲಕ್ಕೆ ಎಲ್ಲ ಗ್ರಾಹಕರ ವಿಸ್ವಾಸ ಗೆಲ್ಲುವದು ಅವಶ್ಯವಾಗಿದೆ ಗ್ರಾಹಕರ ನಾಡಿ ಮಿಡಿತ ಅರಿಯುವದರೊಂದಿಗೆ ಅವರೊಂದಿಗೆ ಪ್ರೀತಿ ವಿಸ್ವಾಸ ಗಳಿಸಿ ೨೪ ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಸಾಗಿರುವ ಶ್ರೀ ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘದ ಕಾರ್ಯ ಶ್ಲಾಘನೀಯವಾಗಿದ್ದು ಈ ಬೆಳವಣಿಗೆಗೆ ಸಂಘದ ಆಡಳಿತ ಮಂಡಳಿ ಸದಸ್ಯರ ಪ್ರಾಮಾಣಿಕ ಪ್ರಯತ್ನ, ಸದಸ್ಯರ ಸಹಕಾರ ಮತ್ತು ಉತ್ತಮ ಸೇವೆಯೇ ಕಾರಣವಾಗಿದೆ ಎಂದರು.
ದೇವರ ಹಿಪ್ಪರಗಿ ಪರದೇಶಿ ಮಠದ ಪೂಜ್ಯ ಶ್ರೀ ಶಿವಯೋಗಿ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಚಬನೂರಿನ ಶ್ರೀ ರಾಮಲಿಂಗಯ್ಯ ಸ್ವಾಮಿಗಳು ಸಸಿಗೆ ನೀರುಣುಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮಕ್ಕೂ ಮೊದಲು ಜಗದ್ಗುರು ಶ್ರೀ ಪಂಚಾಚಾರ್ಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವಿಸಲಾಯಿತು.
ಸಂಘದ ವ್ಯವಸ್ಥಾಪಕ ಶ್ರೀಕಾಂತ ಹಿರೇಮಠ ವಾರ್ಷಿಕ ವರದಿ ವಾಚಿಸಿದರು.
ಇದೇ ಸಮಯದಲ್ಲಿ ಜಂಗಮ ಸಮಾಜದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಮಯದಲ್ಲಿ ಸಂಘದ ಅಧ್ಯಕ್ಷ ಎಂ.ವಿ.ಜಾಹಗೀರದಾರ, ಉಪಾಧ್ಯಕ್ಷ ಶಂಕ್ರಯ್ಯ ಗದ್ದಗಿಮಠ. ಆಡಳಿತ ಮಂಡಳಿಯ ಸದಸ್ಯರಾದ ಬಸಯ್ಯ ಹಿರೇಮಠ, ಗುರಯ್ಯ ಬಿರಾದಾರ, ಚಿನ್ಮಯ ಹಿರೇಮಠ, ಡಾ. ಸೋಮಶೇಖರಯ್ಯ ಹಿರೇಮಠ, ಮಹಾಂತೇಶ ಮಠ, ಶ್ರೀಮತಿ ಹೇಮಾ ಹಿರೇಮಠ, ಶ್ರೀಮತಿ ಸುವರ್ಣ ಹಿರೇಮಠ, ಸಂಘದ ಸದಸ್ಯರು ಸಿಬ್ಬಂದಿಗಳಾದ ಶೋಭಾ ಪಾಟೀಲ, ರಾಜೇಶ್ವರಿ ಹಿರೇಮಠ, ಶಿವಕುಮಾರ ಹಿರೇಮಠ, ಗೀತಾ ಹಿರೇಮಠ, ಸಿದ್ದಯ್ಯ ಅಗ್ನಿಮಠ, ಮಹೇಶ ಗದಗಿಮಠ, ಸಂಗು, ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಸೋಮಶೇಖರಯ್ಯ ಹಿರೇಮಠ ಸ್ವಾಗತಿಸಿ ನಿರೂಪಿಸಿದರು.