ವಾಹನ ಸವಾರರಿಗೆ ಗುಲಾಬಿ ಹೂವು ನೀಡಿ ಸಂಚಾರ ಜಾಗೃತಿ
ಕೊಲ್ಹಾರ:ಸೆ.೨೩: ಪಟ್ಟಣ ಪೊಲೀಸ್ ಠಾಣೆ ವತಿಯಿಂದ ಹೆಲ್ಮಟ್ ಜಾಗೃತಿ ಜಾಥಾ ನಡೆಸಿ ಸಂಚಾರ ನಿಯಮ ಪಾಲನೆ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು
ಪಟ್ಟಣದ ಪೊಲೀಸ್ ಠಾಣೆ ಪಿಎಸ್‌ಐ ಎಮ್.ಬಿ ಬಿರಾದಾರ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ೨೧೮ ರಲ್ಲಿ ವಾಹನ ಚಾಲಕರಿಗೆ ಗುಲಾಬಿ ಹೂವು ನೀಡುವ ಮೂಲಕ ಜಾಗೃತಿ ಮೂಡಿಸಿದರು.ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಜಾಥ ನಡೆಸಿದ ಪೊಲೀಸ್ ಅಧಿಕಾರಿಗಳು ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಿ,ಹೆಲ್ಮಟ್ ಧರಿಸಿ, ಓವರ್ ಟೇಕ್ ಮಾಡುವುದನ್ನು ನಿಲ್ಲಿಸಿ, ಅಪಘಾತವಾಗದಂತೆ ಎಚ್ಚರವಹಿಸಿ, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸದಿರಿ, ಸುರಕ್ಷಿತ ವಾಹನ ಚಾಲನೆಗೆ ಮುಂದಾಗಿ.ರಸ್ತೆ ಅಪಘಾತಗಳು ಸಂಭವಿಸದAತೆ ಎಚ್ಚರ ವಹಿಸಬೇಕು ಎಂದು ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಪೊಲೀಸರು ಸಿಬ್ಬಂದಿಗಳು ಇದ್ದರು.