ವಂಚಿತ ಗ್ರಾಹಕರಿಗೆ ನ್ಯಾಯ ದೊರಕಿಸಿ: ಸಿಎಂಗೆ ಮನವಿ ಸಲ್ಲಿಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨೩: ವಿವಿಧ ಕಂಪನಿಗಳಿAದ ವಂಚನೆಗೆ ಒಳಗಾದ ರಾಜ್ಯದ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ರಾಷ್ಟçಶಕ್ತಿ ಇನ್‌ವ್ಹೆಸ್ರ‍್ಸ್ ಕೋ- ಆರ್ಡಿನೇಶನ್ ಕಮೀಟಿ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ರಾಷ್ಟçಶಕ್ತಿ ಸಂಘಟನೆ ಜಿಲ್ಲಾಧ್ಯಕ್ಷÀ ಲಕ್ಷಿö್ಮÃಪುತ್ರ ಕಿರನಳ್ಳಿ ಮಾತನಾಡಿ, ೨೦೧೪ ರಲ್ಲಿ ಕೇಂದ್ರ ಸರಕಾರ ದೇಶದ ೧೮೫ ಕ್ಕಿಂತ ಹೆಚ್ಚು ಹಣಕಾಸು ಹಾಗೂ ವಿವಿಧ ಉದ್ಯಮ ಮಾಡುತ್ತಿರುವ ಖಾಸಗಿ ಕಂಪನಿಗಳನ್ನು ಏಕಾಏಕಿ ಬಂದ್ ಮಾಡಿ ಆದೇಶ ಹೊರಡಿಸಿತ್ತು. ಈ ಅನ್ಯಾಯದ ಕುರಿತು ಪಿಎಸಿಎಲ್, ಪ್ಯಾನಕಾರ್ಡ್ ಕ್ಲಬ್, ಅಗ್ರಿಗೋಲ್ಡ, ಸಮೃದ್ಧಿ ಜೀವನ ಹೀಗೆ ನಾನಾ ಕಂಪನಿಗಳ ಗ್ರಾಹಕರು ಕೋರ್ಟ್ ಮೆಟ್ಟಲೇರಿದವು. ವಿಚಾರಣೆ ನಡೆಸಿದ ಕೋರ್ಟ್ ಬಹುಸಂಖ್ಯಾತ ಕಂಪನಿಗಳ ಗ್ರಾಹಕರ ಪರವಾಗಿ ತೀರ್ಪು ನೀಡಿದೆ. ತೀರ್ಪಿನನ್ವಯ ಸೆಬಿ ಸಂಸ್ಥೆಗೆ ನಿರ್ದೇಶನ ನೀಡಿ ತೀರ್ಪು ಬಂದ ೩ ತಿಂಗಳ ಒಳಗೆ ವಂಚನೆ ಒಳಗಾದ ಗ್ರಾಹಕರ ಹಣ ಹಿಂದಿರುಗಿಸಲು ತಿಳಿಸಿದೆ. ಆದರೆ ತೀರ್ಪು ಬಂದು ೬-೭ ವರ್ಷವಾದರೂ ಸೆಬಿ ಹಾಗೂ ಕೇಂದ್ರ ಸರ್ಕಾರ ಕಂಪನಿಗಳ ಚರಾಸ್ಥಿಗಳನ್ನು ತಮ್ಮ ಅಧೀನದಲ್ಲಿಟ್ಟುಕೊಂಡು ಮಾರಾಟ ಮಾಡದೇ ಹಾಗೂ ಸರಕಾರವು ಹಸ್ತಾಂತರ ಮಾಡಿಕೊಳ್ಳದೇ ಗ್ರಾಹಕರಿಗೆ ಘನಘೋರ ಅನ್ಯಾಯ ಮಾಡುತ್ತಿವೆ ಎಂದು ಟೀಕಿಸಿದರು.
ವಂಚಿತ ಠೇವಣಿದಾರರ ಸಂಘಟನೆ ವಿಜಯಪುರ ಜಿಲ್ಲಾ ಘಟಕದಿಂದ ಕಳೆದ ೨೨ ದಿನಗಳಿಂದ ಸಾವಿರಾರು ಗ್ರಾಹಕರಿಂದ ಪ್ರತಿನಿತ್ಯ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಸರಕಾರದಿಂದಾಗಲಿ ಅಥವಾ ಜನಪ್ರತಿನಿಧಿಗಳಿಂದಾಗಲಿ ಯಾವುದೇ ತರಹದ ಭರವಸೆ ಸಿಕ್ಕಿಲ್ಲ. ಈ ಕೂಡಲೇ ಎಚ್ಚೆತ್ತುಕೊಂಡು ಸೆಬಿ ಹಾಗೂ ಕೇಂದ್ರ ಸರಕಾರಕ್ಕೆ ಮಾಹಿತಿ ಕೇಳಲು ರಾಜ್ಯ ಸಂಬAಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ನೇಮಕ ಮಾಡಿ ಆದೇಶ ಮಾಡಬೇಕು. ಕಳೆದ ೧೦ ವರ್ಷಗಳಲ್ಲಿ ಸೆಬಿಯ ಕಾರ್ಯವೈಖರಿ ಲಿಖಿತವಾಗಿ ತಿಳಿಸಬೇಕೆಂದು ಒತ್ತಾಯಿಸಿದರು.
ಸೆಬಿ ಇಲ್ಲಿಯವರೆಗೆ ಒಂದು ಕಂಪನಿಯ ಗ್ರಾಹಕರಿಗೆ ಹಣ ನೀಡದೇ ದೇಶದ ಅನ್ಯಾಯಕೊಳಗಾದ ಗ್ರಾಹಕರಿಗೆ ಮೋಸ ಮಾಡುತ್ತಿದೆ. ಹಾಗಾಗಿ ನಮಗೆ ಎಸ್‌ಇಬಿಐ ಸಂಸ್ಥೆಗೆ ವರ್ಗಾಯಿಸಿ ಸೆಬಿಯನ್ನು ಬ್ಯಾನ್ ಮಾಡಿ ನ್ಯಾಯ ಕೊಡಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ವಿಳಂಬವಾದಲ್ಲಿ ಇಡೀ ರಾಜ್ಯದ ಗ್ರಾಹಕರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಬೇಕಾಗುತ್ತದೆ. ಇದಕ್ಕೆ ಮುಂದಿನ ಆಗುಹೋಗುಗಳಿಗೆ ನೇರವಾಗಿ ಸರಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಭಾಗ್ಯಶ್ರೀ ಭಾವಿಮನಿ, ಕಲಾವತಿ ತಾರಾಪೂರಮಠ, ಅಶ್ವಿನಿ ಚಿಂತಾಪೂರಮಠ, ಸತೀಶ, ಕೆ.ಎಸ್.ವಾಲಿಕಾರ, ವಿಠ್ಠಲ ವಡ್ಡರ, ಐ.ಎಸ್. ಕುಂಬಾರ, ಶಾಂತಾಬಾಯಿ ಕಟ್ಟಿಮನಿ ಮುಂತಾದವರು ಇದ್ದರು.