ಮಳೆ ನೀರಿಗೆ ಸುಭಾಷ್ ನಗರ ಜನತೆ ಆಕ್ರೋಶ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಮೇ.15:- ಬಿಸಿಲಿನ ತಾಪಮಾನಕ್ಕೆ ತತ್ತರಿಸಿದ ನಾಗರಿಕರು ಮಳೆರಾಯನ ಆರ್ಭಟಕೆ ಬೆಚ್ಚಿಬಿದ್ದ ಜನತೆ ಪುರಸಭೆಗೆ ಹಿಡಿ ಶಾಪ ಹಾಕಿರುವ ಘಟನೆ ಜರುಗಿದೆ.
ಪಟ್ಟಣದ ಶುಭಾಷ್ ನಗರ ಪುರಸಭೆ ವ್ಯಾಪ್ತಿಗೆ ಬರುವ ಈ ಬಡಾವಣೆಯಲ್ಲಿ ಯಾವುದೇ ರೀತಿಯಾದಂತಹ ಮೂಲ ಸೌಕರ್ಯಗಳಿಲ್ಲ ಆದ್ದರಿಂದ ಇಲ್ಲಿಯ ನಾಗರಿಕರು ದಿನನಿತ್ಯದ ಸಂಚಾರಕ್ಕೆ ನರಕಯಾತನೆ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ ಹಾಗೂ ಮಳೆಗಾಲದ ಸಂದರ್ಭದಲ್ಲಿ ಇತ್ತ ಸಂಚಾರಕ್ಕೆ ಬಾರಿ ತೊಂದರೆಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಹುಣಸೂರು ಮುಖ್ಯ ರಸ್ತೆಯ ಸೋಮೇಶ್ವರ ದೇವಸ್ಥಾನ ಹಿಂಬಾಗದಲ್ಲಿರುವ ಬಡಾವಣೆ ಒಳಚರಂಡಿ ಹಾಗೂ ಯುಜಿಡಿ ಸಂಪರ್ಕಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಹುಚ್ಚ ಮಳೆಗಾಲದಲ್ಲಿ ಮಳೆ ಸಂಭವಿಸಿದರೆ ಮಳೆಯ ನೀರು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಕೆಲವು ಮನೆಗಳಲ್ಲೂ ಸಹ ನೀರು ನುಗ್ಗುವ ಸಂಗತಿ ಕಾಣಬಹುದು ಇದರಿಂದ ಆರೋಗ್ಯ ಸಮಸ್ಯೆಗಳು ಸಹ ಉದ್ಭವವಾಗುತ್ತದೆ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಎರಡು ದಿನಗಳಿಂದ ಭಾರಿ ಮಳೆ ಸಹ ರಾತ್ರಿ ಸಮಯದಲ್ಲಿ ಸುರಿಯುತ್ತಿರುವುದರಿಂದ ಬೆಳಗಿನ ನಾಗರಿಕರಿಗೆ ಸಂಚಾರಕ್ಕೆ ತುಂಬಾ ಅಡ್ಡಿ ಪರಿಣಾಮವಾಗಿ ಬೀರುತ್ತಿದೆ ಆದ್ದರಿಂದ ಪುರಸಭೆಯ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿ ಈ ಬಡಾವಣೆಗೆ ಭೇಟಿ ನೀಡಿ ರಸ್ತೆ ಹಾಗೂ ಒಳಚರಂಡಿ ಸಂಪರ್ಕಗಳು ಸರಿಯಾಗಿದೆ ಎಂದು ಪರಿಶೀಲಿಸಿ ಮಳೆ ನೀರು ಶುಭ ಸಂಚಾರಕ್ಕೆ ಅನುಕೂಲ ಮಾಡಬೇಕೆಂದು ನಾಗರಿಕರು ಮನವಿ ಮಾಡಿದರು.
ಈ ಹಿಂದೆಯೂ ಕೂಡ ರಸ್ತೆಗಳನ್ನ ಸರಿಪಡಿಸುವುದಾಗಿ ಬಾರಿ ಬಾರಿ ಮಣ್ಣುಗುಡ್ಡೆಗಳು ಟ್ರ್ಯಾಕ್ಟರ್ ಮೂಲಕ ತಂದು ಸುರಿದಿರುವ ಸಂಗತಿ ಸಹಾಯ ಇದೆ ಆದರೆ ಯಾವುದೇ ಪರಿಣಾಮಕಾರಿಯಾಗಿಲ್ಲ ಇದರಿಂದ ನಾಗರಿಕರು ರಸ್ತೆ ಸಂಚಾರಕ್ಕೆ ಅನಾನುಕೂಲವಾಗಿದೆ ಎಂದು ಪ್ರಶ್ನೆ ಮೇಲೆ ಪ್ರಶ್ನೆಗಳು ಕೇಳುತ್ತಿದ್ದರು ಯಾವುದೇ ಉತ್ತರ ಮಾತ್ರ ಇಲ್ಲ.