ಚಾ.ನಗರ ಜೆಎಸ್‍ಎಸ್ ಪಬ್ಲಿಕ್ ಶಾಲೆಗೆ ಶೇ. 100 ರಷ್ಟು ಫಲಿತಾಂಶ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ 14- ನಗರದ ಜೆಎಸ್‍ಎಸ್ ಪಬ್ಲಿಕ್ ಶಾಲೆಯು ಸಿಬಿಎಸ್‍ಇ 10ನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ಶೇ. 100 ರಷ್ಟು ಸಾಧನೆ ಮಾಡಿದೆ.
ಶಾಲೆಯು ಸತತ 5ನೇ ಬಾರಿಗೆ ಶೇ. 100 ರಷ್ಟು ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ. ಶಾಲೆಯ ಶಾಹೇಹರಾಂ 600ಕ್ಕೆ 577 ಅಂಕಗಳನ್ನು ಗಳಿಸಿ ಶೇ.96.17 ರಷ್ಟು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಜೆಎಸ್‍ಎಸ್ ಪಬ್ಲಿಕ್ ಶಾಲೆಗೆ ಸತತ ಮೂರನೇ ಬಾರಿಗೆ ಜಿಲ್ಲೆಯ ಟಾಪರ್ ನೀಡುವ ಮೂಲಕ ಉತ್ತಮ ಸಾಧನೆಯನ್ನು ಶಾಲೆಯ ವಿದ್ಯಾರ್ಥಿಗಳು ಮಾಡಿದ್ದಾರೆ
ಶಾಲೆಯ 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರು ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಶಾಲೆಯ 10 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. ಶಾಹೇ ಹರಾಂ ಶೇ. 96.17 ರಷ್ಟು ಅಂಕ ಪಡೆದು ಪ್ರಥಮ, ಎಚ್.ಯು. ಶ್ರೇಯಾ ಶೇ. 95 ರಷ್ಟು ಅಂಕ ಪಡೆದು ದ್ವೀತಿಯ ಹಾಗೂ ಯಶಸ್ವಿನಿ ಶೇ. 94.83 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದು, ಕನ್ನಡದಲ್ಲಿ ವರ್ಷಣಿ 100 ಅಂಕಗಳು, ಸೋಷಿಯಲ್ ಸೈನ್ಸ್‍ನಲ್ಲಿ ಶಶಾಂಕ್ ಬಿ 100 ಅಂಕಗಳನ್ನು ಹಾಗೂ ಜೀವನ್ ಐಟಿಯಲ್ಲಿ 100 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲ ಎಚ್.ಎಂ. ಉಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.