17ರಂದು ಗೀತಾ ಶಿಶು ಶಿಕ್ಷಣ ಸಂಸ್ಥೆಗೆ ದಸಂಸ ಮುತ್ತಿಗೆ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.15:- ನಗರದ ಮರಿಮಲ್ಲಪ್ಪ, ಸದ್ವಿದ್ಯಾ, ಡಿ.ಪಾಲ್, ಪೆÇಲೀಸ್ ಪಬ್ಲಿಕ್ ಸ್ಕೂಲ್ ಹಾಗೂ ಗೀತಾ ಶಿಶು ಶಿಕ್ಷಣ ಸಂಸ್ಥೆ ಸೇರಿದಂತೆ ಬಹುತೇಕ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಹಿಂದಾ ವರ್ಗದ ಮಕ್ಕಳು ಕಡಿಮೆ ಅಂಕ ಪಡೆದಿದ್ದಾರೆಂದು 9ನೇ ತರಗತಿಯಿಂದ 10ನೇ ತರಗತಿಗೆ ಪ್ರವೇಶ ನಿರಾಕರಿಸಲಾಗುತ್ತಿದ್ದು, ಇದನ್ನು ಖಂಡಿಸಿ ಮೇ 17 ರಂದು ಗೀತಾ ಶಿಶು ಶಿಕ್ಷಣ ಸಂಸ್ಥೆ ಪ್ರೌಢಶಾಲೆಗೆ ಮುತ್ತಿಗೆ ಹಾಕಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೀತಾ ಶಿಶು ಶಿಕ್ಷಣ ಸಂಸ್ಥೆಯಲ್ಲಿ ವಿಜಯಕುಮಾರ್ ಎಂಬವರ ಮಗ ಜಯಂತ್ ಎಲ್‍ಕೆಜಿಗೆ ಪ್ರವೇಶ ಪಡೆದು ಇದೀಗ 9ನೇ ತರಗತಿ ಮುಗಿಸಿದ್ದಾನೆ. ಆತ 9ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಾನೆಂದು ಹೇಳಿ ಆತನಿಗೆ 10ನೇ ತರಗತಿ ಪ್ರವೇಶ ನಿರಾಕರಿಸಿದ್ದಾರೆ. ಈ ಬಗ್ಗೆ ವಿಜಯಕುಮಾರ್ ಕಳೆದ ಏ.24 ರಂದು ಮೈಸೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಅವರಿಗೆ ದೂರು ನೀಡಿದ್ದಾರೆ. ದೂರು ನೀಡಿ 20 ದಿನವಾದರೂ ಬಿಇಓ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈ ಅಧಿಕಾರಿಗಳೆಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಶಾಮೀಲಾಗಿದ್ದಾರೆ. ಕೂಡಲೇ ಜಯಂತ್ ಎಂಬ ವಿದ್ಯಾರ್ಥಿಗೆ ಅದೇ ಶಾಲೆಯಲ್ಲಿ ಮೇ 16 ರೊಳಗೆ 10ನೇ ತರಗತಿಗೆ ಪ್ರವೇಶ ನೀಡಬೇಕು ಇಲ್ಲದಿದ್ದಲ್ಲಿ ಮೇ 17 ರಂದು ದಸಂಸ ಕಾರ್ಯಕರ್ತರಿಂದ ಗೀತಾ ಶಿಶು ಶಿಕ್ಷಣ ಸಂಸ್ಥೆ ಪ್ರೌಢಶಾಲೆಗೆ ಮುತ್ತಿಗೆ ಹಾಕಲಾಗುವುದು ಎಂದು ಶಿವಣ್ಣ ಎಚ್ಚರಿಕೆ ನೀಡಿದರು.
ನಗರದಲ್ಲಿ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಾಗಿ ಪೆÇೀಷಕರನ್ನು ನಂಬಿಸಿ ಅವರಿಂದ ಲಕ್ಷಾಂತರ ರೂ. ಡೊನೆಷನ್ ಮತ್ತು ಶುಲ್ಕವನ್ನು ಪಡೆದು ಪ್ರವೇಶ ನೀಡುತ್ತಿದ್ದಾರೆ. ಶಾಲೆಗಳಲ್ಲಿ ಎಲ್‍ಕೆಜಿ ಯಿಂದ 9ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡುವ ಮಕ್ಕಳಲ್ಲಿ ವಿಶೇಷವಾಗಿ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಅವರನ್ನು 9ನೇ ತರಗತಿಯಲ್ಲಿ ಬೇಕಂತಲೇ ಫೇಲ್ ಮಾಡುವುದು. ಬಳಿಕ ಪೆÇೀಷಕರನ್ನು ಶಾಲೆಗೆ ಕರೆಸಿ ನಿಮ ಮಗು ಫೇಲ್ ಆಗಿದೆ. ಇಲ್ಲೇ ಓದಿಸುತ್ತೇವೆ ಅಂದ್ರೆ ಈ ವರ್ಷವೂ 9ನೇ ತರಗತಿಯಲ್ಲಿ ಇರಬೇಕಾಗುತ್ತದೆ. ನೀವು ಬೇರೆ ಕಡೆ ಸೇರಿಸ್ತೀವಿ ಅಂದ್ರೆ ಪಾಸ್ ಮಾಡಿ ಕೊಡ್ತೀವಿ ಎಂದು ಏನೋ ಶಾಲೆಯವರು ಪೆÇೀಷಕರ ಮೇಲೆ ಭಾರಿ ಅನುಕಂಪ ತೋರುತ್ತಿದ್ದಾರೆ ಎಂದು ಫೆÇೀಸ್ ಕೊಟ್ಟು ವಿದ್ಯಾರ್ಥಿಗೆ ಬಲವಂತದಿಂದ ಟಿಸಿ ಕೊಟ್ಟು ಸಾಗ ಹಾಕುತ್ತಾರೆ ಎಂದು ದೂರಿದರು.
ಈ ಘಟನೆಗಳು ಮೈಸೂರಿನ ಎಲ್ಲ ಪ್ರೌಢಶಾಲೆಗಳಲ್ಲೂ ನಡೆಯುತ್ತಿದೆ. ಆದರೇ, ಪೆÇೀಷಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇವರ ವಿರುದ್ಧ ದೂರು ನೀಡುತ್ತಿಲ್ಲ. ಇಂತಹ ಘಟನೆಗಳಿಂದ ನೊಂದ ಪೆÇೀಷಕರು ಮತ್ತು ವಿದ್ಯಾರ್ಥಿಗಳು ಕೂಡಲೇ ದಲಿತ ಸಂಘರ್ಷ ಸಮಿತಿಯನ್ನು ಸಂಪರ್ಕಿಸಿದರೆ ಅವರಿಗೆ ನ್ಯಾಯ ಕೊಡಿಸಲಾಗುವುದು ಎಂದು ಶಿವಣ್ಣ ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡರಾದ ನಟರಾಜು, ಸೋಮನಾಯಕ, ವರುಣಾ ಮಹೇಶ್, ಚಂದ್ರಶೇಖರ್, ದೇವರಾಜು, ದೇವೇಂದ್ರ ಇದ್ದರು.