ಇಂದಿನಿಂದ ಸುಕ್ಷೇತ್ರ ತೊರವಿಯಲ್ಲಿ ಶ್ರೀನರಸಿಂಹ ಜಯಂತ್ಯುತ್ಸವ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.15:ತನ್ನ ಅನನ್ಯ ಭಕ್ತನಾದ ಪ್ರಲ್ಹಾದನ ರಕ್ಷಣೆಗೋಸ್ಕರ ಅವತರಿಸಿದ ಮಹಾವಿಷ್ಣುವಿನ ರೂಪವೇ ಈ ನರಸಿಂಹ ಅವತಾರ. ಭಕ್ತರ ಅಭೀμÉ್ಟಗಳನ್ನು ತ್ವರಿತದಲಿ ಈಡೇರಿಸಿ ‘ತ್ವರಿತಾಲಯ’ ನಿವಾಸಿ ಎನಿಸಿದ್ದಾನೆ. ಗರ್ಭಗುಡಿಯು ಗುಹೆಯಲ್ಲಿದ್ದು ಗುಹಾವಾಸಿ ಜಾಗೃತ ದೇವನೆನಿಸಿರುವನು.
15ನೇ ಶತಮಾನದಲ್ಲಿ ನರಹರಿ ಕವಿ ‘ಕುಮಾರ ವಾಲ್ಮೀಕಿ’ ಎಂಬ ಹೆಸರಿನಿಂದ ಕನ್ನಡದಲ್ಲಿ ‘ತೊರವೆ ರಾಮಾಯಣ’ ವೆಂಬ ಸುಂದರ ಮಹಾಕಾವ್ಯವನ್ನು ತೊರವೆಯ ಈ ನರಸಿಂಹ ದೇವರ ಸಮ್ಮುಖದಲ್ಲಿಯೇ ರಚಿಸಿ ಇತಿಹಾಸ ಪ್ರಸಿದ್ಧನಾಗಿರುವನು.
ತನ್ನೆಲ್ಲ ಭಕ್ತರ ಅಭೀμÉ್ಟಗಳನ್ನು ತ್ವರಿತದಲಿ ಈಡೇರಿಸುವ ಇಂತಹ ಜಾಗೃತ ಶ್ರೀ ಲಕ್ಷ್ಮೀನರಸಿಂಹ ದೇವರ ವಾರ್ಷಿಕೋತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಮಾಡಲಾಗಿದೆ.
ಕ್ರೋಧಿನಾಮ ಸಂವತ್ಸರ ವೈಶಾಖ ಶುದ್ಧ ಅಷ್ಟಮಿ ಮೇ.15 ರಿಂದ ವೈಶಾಖ ವದ್ಯ ಪ್ರತಿಪದ, ಮೇ.24 ರವರೆಗೆ ‘ಶ್ರೀ ಲಕ್ಷ್ಮೀ ನರಸಿಂಹ ದೇವರ ವಾರ್ಷಿಕೋತ್ಸವ’ ಹಾಗೂ ಶ್ರೀ ಮದುತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಪರಮಾನುಗ್ರಹ ಪೂರ್ವಕ ಆಜ್ಞಾನುಸಾರವಾಗಿ ಪ್ರಾರಂಭಿಸಿದ ‘ಜ್ಞಾನಸತ್ರ, ಶ್ರೀ ಸರ್ವಮೂಲಗ್ರಂಥ ಪಾರಾಯಣ, ಪ್ರವಚನ ಹಾಗೂ ದಾಸವಾಣಿ’ ಇತ್ಯಾದಿ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ.
ಅದರಂಗವಾಗಿ ಮೇ. 15 ರಂದು ಬೆಳಿಗ್ಗೆ 9 ಗಂಟೆಯಿಂದ ಪವಮಾನ ಹೋಮ, ಸರ್ವಮೂಲ ಗ್ರಂಥ ಪಾರಾಯಣ ಆರಂಭವಾಗಲಿದೆ.
ಪ್ರತಿದಿನ ಬೆಳಿಗ್ಗೆ ಪಂಡಿತ ಅಜಯ ಆಚಾರ್ಯ ಜೋಶಿ (ತೊರವಿ), ಪಂಡಿತ ಕೃಷ್ಣಾಚಾರ್ಯ ಜೋಶಿ, ಪಂಡಿತ ಸಂಜೀವಚಾರ್ಯ ಬುರ್ಲಿ, ಪಂಡಿತ ಅಜಿತಾಚಾರ್ಯ ಹನಗಂಡಿ, ಪಂಡಿತ ಕಶ್ಯಪಾಚಾರ್ಯ ಗೊರನಾಳ ಅವರಿಂದ ಪ್ರವಚನ ನಡೆಯಲಿವೆ. ಮೇ. 19ರಂದು ಬೆಳಿಗ್ಗೆ ಮಂತ್ರ ಪರೀಕ್ಷೆ ಸಂಗೀತ ಸ್ಪರ್ಧೆ, ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. 20 ರಂದು ಮಧ್ಯಾನ್ಹ 2 ಗಂಟೆಗೆ ವಸಂತ ಪೂಜೆ ಬಳಿಕ ದಾಸವಾಣಿ ನಡೆಯಲಿವೆ.
ಉತ್ಸವದ ಕಾಲದಲ್ಲಿ 15 ರಂದು ಸಂಜೆ 7 ಗಂಟೆಗೆ ಪಲ್ಲಕ್ಕಿ ಸೇವೆ ಸ್ವಸ್ತಿ ವಾಚನ, 18 ರಂದು ಸಂಜೆ 5ರಿಂದ 7 ರ ವರೆಗೆ ಅಥಣಿಯ ಶ್ರೀರಾಮ ಜೋಶಿ ಅವರಿಂದ ಹಾಗೂ 20ರಂದು ಸಂಜೆ ಸುಮತಿ ಪ್ರಸಾದ ಮತ್ತು 21 ರಂದು ಗೀತಾ ಸಂಜೀವ ಕುಲಕರ್ಣಿ, ಶ್ರೀಹರಿ ಹಾಗೂ ಶ್ರೀನಿಧಿ ಕುಲಕರ್ಣಿ ಅವರಿಂದ 22 ರಂದು ಸಂಜೆ ಆಕಾಶವಾಣಿ ಗಾಯಕಿ ಶ್ರೀದೇವಿ ಭಂಡಾರಕರ(ಜೋಶಿ) ಅವರಿಂದ ದಾಸವಾಣಿ ಕಾರ್ಯಕ್ರಮ ಜರುಗಲಿವೆ.
ನರಸಿಂಹ ಜಯಂತಿ:
ಮೇ. 21ರಂದು ಶ್ರೀ ನರಸಿಂಹ ಜಯಂತಿ ಅಂಗವಾಗಿ ಬೆಳಿಗ್ಗೆ 6-53ಕ್ಕೆ ಶ್ರೀ ನರಸಿಂಹ ದೇವರ ಜನನೋತ್ಸವ ಸಂಜೆ ಪಂಡಿತ ನರಹರಿ ಆಚಾರ್ಯರಿಂದ ಪ್ರವಚನ ನಡೆಯಲಿವೆ. ರಾತ್ರಿ 8 ಗಂಟೆಗೆ ತೀರ್ಥ ಪ್ರಸಾದವಿದೆ.
23 ರಂದು ಬೆಳಿಗ್ಗೆ 10 ಕ್ಕೆ ಸತ್ಯನಾರಾಯಣ ಪೂಜೆ, 11 ಗಂಟೆಗೆ ಪುರಾಣ ಮಂಗಲೋತ್ಸವ ಅಪರಾಹ್ನ 12 ಗಂಟೆಗೆ ರಥೋತ್ಸವ ಜರುಗಲಿದೆ.
24 ರಂದು ಬೆಳಿಗ್ಗೆ ಸರ್ವಮೂಲ ಗ್ರಂಥ ಪಾರಾಯಣ ಸಮಾಪ್ತಿ, ಬಳಿಕ 8-30 ಗಂಟೆಗೆ ಗೋಪಾಲ ಕಾವಲಾ ನಡೆದು ಮಧ್ಯಾಹ್ನ ಮಹಾಪೂಜೆ, ಪಂಡಿತರ ಸನ್ಮಾನ 2 ಗಂಟೆಗೆ ತೀರ್ಥ ಪ್ರಸಾದವಿದೆ
ಈ ಸಂದರ್ಭದಲ್ಲಿ ಎಲ್ಲ ಭಕ್ತರು ಉತ್ಸವಕ್ಕೆ ಆಗಮಿಸಿ ತಮ್ಮ ಶಕ್ತ್ಯಾನುಸಾರವಾಗಿ ತನು, ಮನ, ಧನ, ವಸ್ತ್ರ, ಆಭರಣ, ಪಾತ್ರೆ ಹಾಗೂ ಧಾನ್ಯ ಮೊದಲಾದವುಗಳನ್ನು ದೇವಸ್ಥಾನದ ಕಚೇರಿಯಲ್ಲಿ ಸಲ್ಲಿಸಿ ಪಾವತಿಯನ್ನು ಪಡೆದು ಶ್ರೀಲಕ್ಷ್ಮೀನರಸಿಂಹ ದೇವರ ದರ್ಶನ ಪಡೆದು ಪುನೀತರಾಗಬೇಕಾಗಿ ದೇವಸ್ಥಾನ ಕಮೀಟಿ ಪ್ರಕಟಣೆಯಲ್ಲಿ ಕೋರಿದೆ.