ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಡಿ.ಟಿ.ಶ್ರೀನಿವಾಸ್ ನಾಮಪತ್ರ ಸಲ್ಲಿಕೆ
ಕೋಲಾರ,ಮೇ.೧೫:ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಡಿ.ಟಿ.ಶ್ರೀನಿವಾಸ್ (ಡಿಟಿಎಸ್) ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸಾವಿರಾರು ಶಿಕ್ಷಕ ಅಭಿಮಾನಿಗಳೊಂದಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್, ಮಂತ್ರಿಗಳಾದ ಕೆ.ಹೆಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ, ಮಧುಬಂಗಾರಪ್ಪ, ಡಿ.ಸುಧಾಕರ್, ಶಾಸಕರುಗಳಾದ ಪುಟ್ಟಣ್ಣ, ಗೋವಿಂದಪ್ಪ, ದೇವೇಂದ್ರಪ್ಪ, ಕೆ.ಎಸ್.ಬಸಂತಪ್ಪ, ಕಾಂಗ್ರೆಸ್ ಹಿರಿಯ ಮುಖಂಡರುಗಳಾದ ಮನ್ಸೂರ್ ಆಲಿಖಾನ್, ಆಂಜನೇಯ, ಡಿ.ಕೆ.ಸುರೇಶ್, ಸೌಮ್ಯ ರಾಮಲಿಂಗಾರೆಡ್ಡಿ, ರಕ್ಷರಾಮಯ್ಯ, ಗೌತಮ್, ಚಂದ್ರಪ್ಪ, ಹೆಚ್.ಎಂ.ರೇವಣ್ಣ, ಪೂರ್ಣಿಮಾ ಶ್ರೀನಿವಾಸ್ ಮುಂತಾದವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆಯಿಂದ ಸಾವಿರಾರು ಶಿಕ್ಷಕ ಅಭಿಮಾನಿಗಳು ಆಗಮಿಸಿ ಅವರಿಗೆ ಶುಭ ಕೋರಿದರು. ಅನೇಕ ಶಿಕ್ಷಕ, ಉಪನ್ಯಾಸಕ, ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.