ಬಸವಣ್ಣನವರ ವ್ಯಕ್ತಿತ್ವವೇ ಒಂದು ಕಾವ್ಯ: ಡಾ ರೇಖಾ ಪಾಟೀಲ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.15::ಜೀವನದ ಹಂಗನ್ನು ತೊರೆದು ಸಾಮಾಜಿಕ ಚಿಂತನೆಯ ಹರಿಕಾರರಾಗಿ, ಮಹಾಮಾನವತಾವಾದಿಯಾಗಿ, ವಿಶ್ವಗುರುವಾಗಿ, ಸಾಂಸ್ಕøತಿಕ ನಾಯಕರಾಗಿ ಹೊರಹೊಮ್ಮಿದ ಆದರ್ಶ ಸಮಾಜದ ನಿರ್ಮಾಣದಲ್ಲಿ ತಮ್ಮ ವಚನಗಳ ಮೂಲಕ ಇಡೀ ಸಮಾಜವನ್ನು ಧರ್ಮದ ನೆಲೆಗಟ್ಟಿನಲ್ಲಿಯೇ ಕಟ್ಟಿದ ಶ್ರೇಯಸ್ಸು ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ ಡಾ. ರೇಖಾ ಪಾಟೀಲ ಅಭಿಪ್ರಾಯಪಟ್ಟರು. ಭಾನುವಾರ ಸಂಜೆ ಜಿಲ್ಲಾ, ತಾಲೂಕ, ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಶ್ರೀ ಬಸವೇಶ್ವರ ಜಯಂತಿಯ ಕುರಿತು ಏಪ9ಡಿಸಿದ ಕವಿಗೋಷ್ಠಿಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವರ್ಣರಹಿತ, ವರ್ಗರಹಿತ, ಲಿಂಗ ರಹಿತ ಸಮಾಜವನ್ನು ಕಟ್ಟುವ ಮೂಲಕ ಅಂದಿನ ಅನುಭವ ಮಂಟಪದಲ್ಲಿಯೂ ಸಹ ಮಹಿಳೆಯರಿಗೆ ಮುಕ್ತವಾಗಿ ಸ್ತ್ರೀ ಸಮಾನತೆಯ ಮೂಲಕ ಭಾಗವಹಿಸಲು ಅವಕಾಶ ಕಲ್ಪಿಸಿಕೊಟ್ಟ ಶ್ರೀ ಬಸವೇಶ್ವರರು ಪ್ರಥಮ ಸಂಸತ್ತಿನ ರಚನಾಕಾರರಾಗಿದ್ದರು ಎಂಬುದು ನಮಗೆಲ್ಲ ಹೆಮ್ಮೆ ತರುವಂತಹ ವಿಚಾರವೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅವರು ಮಾತನಾಡಿ, ಸುಮಾರು 900 ವರ್ಷಗಳ ಹಿಂದೆ ಆಗಿ ಹೋದ ಮಹಾನ್ ಕ್ರಾಂತಿ ಪುರುಷರಾದ ಜಗಜ್ಯೋತಿ ಬಸವೇಶ್ವರರು ಇಂದಿಗೂ ನಮಗೆಲ್ಲ ಮಾದರಿಯದವರು. ಕಾರಣ ಅವರಲ್ಲಿರುವ ಪ್ರಾಮಾಣಿಕತೆ ಹಾಗೂ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಅವರಿಗೆ ಇರುವ ಕಾಳಜಿ ಕಳಕಳಿಗಳೇ ಅವರನ್ನು ಇಂದು ಅವತಾರಿ ಪುರುಷರಾಗಿ ದೈವತ್ವದ ಸ್ಥಾನವನ್ನು ತಂದುಕೊಡಲು ಸಾಧ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ರೇಡಿಯೋ ಪ್ರವಾಚಕÀ ಸವಿತಾ ದೇಶಮುಖ ಮಾತನಾಡಿ, ವೈಚಾರಿಕ ಚಿಂತನೆಗಳನ್ನು ತಮ್ಮ ವಚನಗಳಲ್ಲಿ ಬಿತ್ತುವ ಮೂಲಕ ಮೂಢನಂಬಿಕೆಗಳನ್ನು, ಸಮಾಜದ ಗೊಡ್ಡು ಸಂಪ್ರದಾಯಗಳನ್ನು ಕಿತ್ತೊಗೆಯುವ ಮೂಲಕ ಸಮಾನತೆಯ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದ್ದಾರೆ ಎಂದರು.
ಶ್ರೀ ಬಸವೇಶ್ವರ ಜಯಂತಿಯ ಕುರಿತು ಏರ್ಪಡಿಸಿದ ಕವಿಗೋಷ್ಠಿಯಲ್ಲಿ ಕವಿತಾ ಕಲ್ಯಾಣಪ್ಪಗೋಳ, ಅಂಬಿಕಾ ಕರಕಪ್ಪಗೋಳ, ಪೆÇ್ರ. ಸಿದ್ದು ಸಾವಳಸಂಗ, ಕುಮಾರಿ ಹೇಮಾ ಬಿರಾದಾರ, ಭಾರತಿ ಗೊಂಗಡಿ, ವೈಶಾಲಿ ಬಿಳೂರ, ಶಾಂತಲಾ ಪಾಟೀಲ, ಶಿಲ್ಪಾ ಹಂಜಿ ದಾನಮ್ಮ ಹೂಗಾರ, ಆಕಾಶ ಮ್ಯಾಗೇರಿ, ಶಿವಾಜಿ ಮೋರೆ, ಸಿದ್ಧನಗೌಡ ಕಾಶಿನಕುಂಟಿ, ಸಂತೋಷಕುಮಾರ ಬಂಡೆ, ಸುರೇಶ ಪೂಜಾರಿ, ಶಿವಲೀಲಾ ಕೋರವಾರ, ಸುಜಾತಾ ಹ್ಯಾಳದ, ರಜಿಯಾ ದಳವಾಯಿ, ಶೋಭಾ ಹರಿಜನ, ಸಂತೋಷ ಪಾಟೀಲ, ಸುನಂದಾ ಕೋರಿ, ಸಂಗಮೇಶ ಕರೆಪ್ಪಗೋಳ.ಶೋಭಾ ಹರಿಜನ. ವೈಶಾಲಿ ಬೀಳೂರ. ಸುಜಾತಾ ಹ್ಯಾಳದ. ಶಿವಲೀಲಾ ಕೊರವಾರ. ರಜಿಯಾ ದಳವಾಯಿ ಸುನಂದಾ ಕೋರಿ ಸಂತೋಷಕುಮಾರ ಬಂಡೆ. ಸುರೇಶ ಪೂಜಾರಿ. ಶಿವಾಜಿ ಮೋರೆ.ದಾನಮ್ಮ ಹೂಗಾರ. ಸೇರಿದಂತೆ ಸುಮಾರು 25ಕ್ಕೂ ಅಧಿಕ ಕವಿಗಳು ಶ್ರೀ ಬಸವೇಶ್ವರರ ಕುರಿತು ಕವನ ವಾಚನ ಮಾಡಿದರು. ಕವನವಾಚನ ಮಾಡಿದ ಕವಿ- ಕವಯಿತ್ರಿಯರಿಗೆ ಗೌರವಿಸಿ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಡಾ ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಮಲಾ ಮುರಾಳ, ಮಡಿವಾಳಮ್ಮ ನಾಡಗೌಡ, ಶಾಂತಾ ವಿಭೂತಿ, ಶೇಷರಾವ ಮಾನೆ ಉಪಸ್ಥಿತರಿದ್ದರು.
ಡಾ. ಮಾಧವ ಗುಡಿ ಸ್ವಾಗತಿಸಿದೆರು. ಸಿದ್ಧನಗೌಡ ಕಾಶಿನಕುಂಟಿ ನಿರೂಪಿಸಿದರು. ಕುಮಾರಿ ಅನ್ನಪೂರ್ಣ ಬೆಳ್ಳೆಣ್ಣವರ ವಂದಿಸಿದರು.