ಬೆಳೆಹಾನಿ ಪರಿಹಾರ : ಜಿಲ್ಲೆಯ 2.50 ಲಕ್ಷ ರೈತರ ಖಾತೆಗೆ 36010.20 ಲಕ್ಷ ರೂ.ಜಮೆ
ಸಂಜೆವಾಣಿ ವಾರ್ತೆ,
ವಿಜಯಪುರ ಮೇ.15 :ಜಿಲ್ಲೆಯ ಎಲ್ಲ ತಾಲೂಕುಗಳನ್ನು ಈಗಾಗಲೇ ಸರ್ಕಾರ ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಬೆಳೆಹಾನಿಯಾದ ರೈತರ ಖಾತೆಗಳಿಗೆ ನೇರವಾಗಿ ಡಿಬಿಟಿ ಮೂಲಕ ಪರಿಹಾರ ಹಣ ಜಮೆ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ 36010.20 ಲಕ್ಷ ರೂ.ಗಳನ್ನು 2,50,063 ರೈತರಿಗೆ ಜಮೆ ಮಾಡಲಾಗಿದೆ. ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಜಮೆಯಾಗಿರುವ ಕುರಿತು hಣಣಠಿs://ಠಿಚಿಡಿihಚಿಡಿಚಿ.ಞಚಿಡಿಟಿಚಿಣಚಿಞಚಿ.gov.iಟಿ/seಡಿviಛಿe92 ಜಾಲತಾಣದಿಂದ ಪರಿಶೀಲಿಸಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.
ಸಹಾಯವಾಣಿ : ಜಿಲ್ಲಾಧಿಕಾರಿಗಳ ಕಚೇರಿ ವಿಜಯಪುರ ದೂ: 08352-221261 ಹಾಗೂ ಟೋಲ್ ಫ್ರೀ ಸಂಖ್ಯೆ 1077, ಉಪವಿಭಾಗಾಧಿಕಾರಿಗಳು ವಿಜಯಪುರ ದೂ: 083521-295286, ಉಪವಿಭಾಗಾಧಿಕಾರಿಗಳು ಇಂಡಿ ದೂ: 08359-225003, ಉಪನಿರ್ದೇಶಕರು ತೋಟಗಾರಿಕೆ ಇಲಾಖೆ, ವಿಜಯಪುರ ದೂ: 08352-250244, ತಹಶೀಲ್ದಾರ ವಿಜಯಪುರ ದೂ:08352-355731, ತಹಶೀಲ್ದಾರ ಬಬಲೇಶ್ವರ ದೂ: 8310504205, 9686073390, ತಹಶೀಲ್ದಾರ ತಿಕೋಟಾ ದೂ: 8762480811, 9480532696, ತಹಶೀಲ್ದಾರ ಬಸವನ ಬಾಗೇವಾಡಿ ದೂ:8050426663, 9108482599, ತಹಶೀಲ್ದಾರ ನಿಡಗುಂದಿ ದೂ: 7019178075,9902634186, ತಹಶೀಲ್ದಾರ ಕೊಲ್ಹಾರ ದೂ: 08426-200252, ತಹಶೀಲ್ದಾರ ಮುದ್ದೇಬಿಹಾಳ ದೂ: 08356-220227, ತಹಶೀಲ್ದಾರ ತಾಳಿಕೋಟೆ ದೂ:9449752854, ತಹಶೀಲ್ದಾರ ಇಂಡಿ ದೂ:08359-225020, ತಹಶೀಲ್ದಾರ ಚಡಚಣ ದೂ: 9483952337,9740183529, ತಹಶೀಲ್ದಾರ ಸಿಂದಗಿ ದೂ:08488-221235, ತಹಶೀಲ್ದಾರ ದೇವರಹಿಪ್ಪರಗಿ ದೂ: 08424-283222, ತಹಶೀಲ್ದಾರ ಆಲಮೇಲ ದೂ: 7353343228 ಇದಲ್ಲದೇ ವಿಪತ್ತು ನಿರ್ವಹಣೆಗಾರರ ದೂ: 7019682740 ಸಂಖ್ಯೆಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿ ಕಡ್ಡಾಯವಾಗಿರುವುದರಿಂದ ಇದುವರೆಗೆ ಫ್ರೂಟ್ಸ ಐಡಿ ಮಾಡಿಕೊಳ್ಳದ ರೈತರು ಕೂಡಲೇ ತಮ್ಮ ಆಧಾರ, ಬ್ಯಾಂಕ್ ಖಾತೆ ವಿವರ ಹಾಗೂ ಪಹಣಿ ಮಾಹಿತಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಫ್ರೂಟ್ಸ್ ಐಡಿ ಮಾಡಿಕೊಳ್ಳಲು ಮನವಿ ಮಾಡಿಕೊಳ್ಳಲಾಗಿದ್ದು, ಫ್ರೂಟ್ಸ್ ಐಡಿ ಇಲ್ಲದ ರೈತರು ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.