ಆದರ್ಶ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು:ಸಜ್ಜನಶೆಟ್ಟಿ
ಸೈದಾಪುರ:ಮೇ.15:ಪಟ್ಟಣದ ಪ್ರತಿಷ್ಠಿತ ವಿದ್ಯಾ ವರ್ಧಕ ಸಂಸ್ಥೆಯ ವಿವಿಧ ವಿಭಾಗಗಳ ವತಿಯಿಂದ ಶ್ರೀ ಭಗೀರಥ ಮಹರ್ಷಿ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ ಮಾತನಾಡಿ, ಶ್ರೀ ಭಗೀರಥ ಮಹರ್ಷಿಗಳು ದೇವಲೋಕದಿಂದ ಗಂಗೆಯನ್ನು ಭೂಮಿಗೆ ತಂದು ಸಕಲ ಜೀವರಾಶಿಗಳಿಗೆ ಪುನರುಜ್ಜೀವನ ನೀಡಿದರು. ಇಂತಹ ಮಹಾನ ಚೇತನ ಎಲ್ಲರಿಗೂ ಆರಾಧಕರಾಗಿದ್ದಾರೆ. ಅವರ ಆದರ್ಶ ವಿಚಾರಧಾರೆಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜಗಳಾಬೇಕು. ಇದಕ್ಕಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು.
ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಅನುರಾಧ, ಆನಂದ ಪಾಟೀಲ ಕೊಂಡಾಪುರ, ಭೀಮರೆಡ್ಡಿ ಸೇರಿದಂತೆ ಇತರರಿದ್ದರು.