ಆನಂದ ತಳ್ಳಿಯವರಿಗೆ ಪಿಎಚ್‍ಡಿ ಪ್ರದಾನ
ವಿಜಯಪುರ,ಮೇ.14:ಇಲ್ಲಿನ ಸಿದ್ದೇಶ್ವರ ಸಂಸ್ಥೆಯ ಶುಶ್ರೂಷಾ ಮಹಾ ವಿದ್ಯಾಲಯದ ಬೋಧಕ ಆನಂದ ಅಮರಪ್ಪ ತಳ್ಳಿ ಅವರಿಗೆ ರಾಜಸ್ಥಾನದ ಜಬರ್ಮಲ್‍ತಿಬ್ರೆವಾಲಾ ವಿಶ್ವವಿದ್ಯಾಲಯ[ಎಎಖಿU] ಜುಂಜುನು ವಿಶ್ವವಿದ್ಯಾಲಯವು ಪಿಎಚ್‍ಡಿ ಪ್ರದಾನ ಮಾಡಿದೆ.
ಬೆಂಗಳೂರಿನ ಎಸ್‍ಡಿಎಸ್ ಟಿಆರ್‍ಸಿ ಮತ್ತು ರಾಜೀವ್‍ಗಾಂಧಿ ಎದೆರೋಗಗಳ ಸಂಸ್ಥೆ, ಡಾ. ಅಚ್ಚಮ್ಮ ವರ್ಗೀಸ್ ಅವರ ಮಾರ್ಗದರ್ಶನದಲ್ಲಿ ಆನಂದ ಅವರು ಕ್ಷಯ ರೋಗದ ನಡುವೆ ಆತಂಕ ಮತ್ತು ಖಿನ್ನತೆ ಮಹಾ ಪ್ರಬಂಧಕ್ಕೆ ಪಿಎಚ್‍ಡಿ ಪದವಿ ಪ್ರದಾನ ಮಾಡಲಾಗಿದೆ.
ಶ್ರೀ ಸಿದ್ದೇಶ್ವರ ಸಂಸ್ಥೆ ಶುಶ್ರೂಷಾ ಮಹಾವಿದ್ಯಾಲಯದ ಪ್ರಾಂಶುಪಾಲರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಅಧ್ಯಕ್ಷ ಡಾ. ಸುರೇಶ ಲೋಣಿ ಅವರು ಅಭಿನಂದಿಸಿದ್ದಾರೆ