ರಸ್ತೆ ಮೇಲೆ ನೀರು ಗ್ರಾಮಸ್ಥರಿಗೆ ತೊಂದರೆ
ಸೇಡಂ, ಮೇ,14: ತಾಲೂಕಿನ ಬೆನಕನಹಳ್ಳಿ ಗ್ರಾಮದ ಮರಗಮ್ಮದೇವಿ ದೇವಸ್ಥಾನದಿಂದ ಶ್ರೀ ಚಂದಣೇಶ್ವರ ದೇವಸ್ಥಾನದ ರಸ್ತೆ ಮೇಲೆ ನೀರು ನಿಂತಿದ್ದು ಗ್ರಾಮಸ್ಥರಿಗೆ ದಿನನಿತ್ಯದ ತೊಂದರೆ ಅನುಭವಿಸುವಂತಾಗಿದೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗಮನಹರಿಸಿ ಸ್ವಚ್ಛಗೊಳಿಸಬೇಕೆಂದು ನಮ್ಮ ಕರ್ನಾಟಕ ಸೇನೆ ಸೇಡಂ ತಾಲೂಕಾ ಅಧ್ಯಕ್ಷರಾದ ಮೌನೇಶ್ ಬೆನಕನಹಳ್ಳಿ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.