ಬ್ರಹ್ಮಪುರದಲ್ಲಿ ಈಶ್ವರ ಹಾಗೂ ವೀರಭದ್ರೇಶ್ವರ್ ಜಾತ್ರಾ ಮಹೋತ್ಸವಕ್ಕೆ ಚಾಲನೆ
ಕಲಬುರಗಿ:ಮೇ.14: ನಗರದ ಬ್ರಹ್ಮಪುರದಲ್ಲಿರುವ ಮಹಾಲಕ್ಷ್ಮೀ ನಗರದ ಈಶ್ವರ್ ಉದ್ಯಾನವನದಲ್ಲಿನ ಶ್ರೀ ಈಶ್ವರ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಮೇ 13ರಂದು ಜರುಗಿತು ಎಂದು ಭಕ್ತ ಮಂಡಳಿಯವರು ತಿಳಿಸಿದ್ದಾರೆ.
ಸೋಮವಾರ ಸುಪ್ರಭಾತವು ಕಾರಭೋಸಗಾದ ಮೃತ್ಯುಂಜಯ್ ಹಿರೇಮಠ ಅವರಿಂದ ನೆರವೇರಿತು. ರುದ್ರಾಭಿಷೇಕ, ಪುರವಂತರ ಜೊತೆ ಬಡಾವಣೆ ಪ್ರದಕ್ಷಿಣೆ, ಧರ್ಮ ಧ್ವಜಾರೋಹಣವು ಮಾತೋಶ್ರೀ ದಾಕ್ಷಾಯಣಿ ಅಪ್ಪಾ ಅವರಿಂದ ನೆರವೇರಿಸಿದರು. ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರಿಂದ ಮಹಾಪ್ರಸಾದಕ್ಕೆ ಚಾಲನೆ ಮಾಡುವ. ಶಹಾಬಜಾರದ ಬ್ರಹ್ಮಕುಮಾರಿ ರೇಖಾ, ಜನತಾ ಲೇಔಟ್‍ನ ಮಾತೋಶ್ರೀ ವಿದ್ಯಾತಾಯಿ ಸಿದ್ದಾರೂಢಮಠ,
ಬಿದ್ದಾಪೂರ್ ಕಾಲೋನಿಯ ಮಾತೋಶ್ರೀ ಪ್ರಭುಶ್ರೀ ತಾಯಿ ಅಕ್ಕಮಹಾದೇವಿ ಆಶ್ರಮ, ಚವದಾಪುರಿ ಮಠದ ಡಾ. ರಾಜಶೇಖರ ಶಿವಾಚಾರ್ಯರು, ಶಿವಾಜಿನಗರದ ಮಲ್ಲಿಕಾರ್ಜುನ್ ಮಠದ ಚನ್ನವೀರ ಮುತ್ಯಾ ಅವರು ದಿವ್ಯ ಉಪಸ್ಥಿತರಿದ್ದರು.
ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.