ಜಾತ್ರಾ ಮಹೋತ್ಸವ
ನವಲಗುಂದ,ಮೇ.14: ಪಟ್ಟಣದ ಗವಿಮಠದ ಶ್ರೀ ಸಿದ್ದಲಿಂಗೇಶ್ವರ ಜಾತ್ರಾಮಹೋತ್ಸವವು ಸೋಮವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಸಂಜೆ ಮಠದಿಂದ ಪ್ರಾರಂಭವಾದ ರಥೋತ್ಸವವು ಗಾಂಧಿ ಮಾರುಕಟ್ಟೆ ಯಲ್ಲಿರುವ ಪರ್ವತ ಮಲ್ಲಿಕಾರ್ಜುನ ದೇವಸ್ಥಾನದ ವರೆಗೂ ತೆರಳಿದ ರಥೋತ್ಸವವು ಸಾವಿರಾರು ಭಕ್ತ ಸಮೂಹದ ಜಯಘೋಷಣೆಗಳೊಂದಿಗೆ ಪುನಃ ಮಠಕ್ಕೆ ಆಗಮಿಸಿ ಸಮಾಪ್ತಿಯಾಯಿತು.
ಬೆಳಿಗ್ಗೆ 6ಕ್ಕೆ ಸಿದ್ದಲಿಂಗೇಶ್ವರ ಕತೃಗದ್ದುಗೆಗೆ ಅಭಿಷೇಕ,8ಗಂಟೆಗೆ ಲಿಂಗದೀಕ್ಷೆ ಹಾಗೂ ಅಯ್ಯಾಚಾರ. 10ಗಂಟೆಗೆ ಸರ್ವಧರ್ಮ ಸಾಮೂಹಿಕ ವಿವಾಹ ನಂತರ ಮಹಾ ಪ್ರಸಾದ ಸೇವೆ ಜರುಗಿತು.
ಸಾನ್ನಿಧ್ಯವನ್ನು ಹುಬ್ಬಳ್ಳಿ ರುದ್ರಾಕ್ಷಿ ಮಠದ ಬಸಲಿಂಗಸ್ವಾಮಿಜಿ ವಹಿಸಿದ್ದು ರಾಯನಾಳ ವಿರಕ್ತಮಠದ ರೇವಣಸಿದ್ದ ಸ್ವಾಮಿಜಿ,ಮಣಕವಾಡದ ಮೃತ್ಯುಂಜಯ ಸ್ವಾಮಿಜಿ, ಅಗಡಿ ಗುತ್ತಲಮಠದ ಗುರುಸಿದ್ದ ಸ್ವಾಮಿಜಿ, ಬೈಲಹೊಂಗಲ ತೋಟದಾರ್ಯಮಠದ ಶಾಂತಲಿಂಗ ಸ್ವಾಮಿಜಿ, ತುಪ್ಪದಕುರಟ್ಟಿ ಹಿರೇಮಠದ ವಾಗೀಶ ಪಂಡಿತಾರಾಧ್ಯ ಸ್ವಾಮಿಜಿ, ಗುಡ್ಡದ ಅನ್ವೇರಿಯ ಶಿವಯೋಗೀಶ್ವರ ಸ್ವಾಮಿಜಿ, ಯಲಬುರ್ಗಾ ಹಿರೇಮಠದ ಬಸವಲಿಂಗಸ್ವಾಮಿಜಿ, ಕುಕನೂರು ಅನ್ನದಾನೇಶ್ವರ ಮಠದ ಡಾ.ಮಹಾದೇವ ಸ್ವಾಮಿಜಿ, ಅಕ್ಕಿಆಲೂರಿನ ಶಿವಬಸವಸ್ವಾಮಿಜಿ, ವೆಂಕಟಾಪೂರದ ಗುರುಸಿದ್ದೇಶ್ವರ ಸ್ವಾಮಿಜಿ, ಬಾದಾಮಿಯ ಶಿವಪೂಜಾ ಸ್ವಾಮಿಜಿ, ಮಂಟೂರಿನ ಮಹಾಂತ ಸ್ವಾಮಿಜಿ, ವಿಜಯಪುರ ಜ್ಞಾನ ಯೋಗಾಶ್ರಮದ ಸಂಗೇಶ್ವರ ದೇವರು ಹಾಗೂ ಗವಿಮಠದ ಮನಿಪ್ರ ಬಸವಲಿಂಗ ಮಹಾಸ್ವಾಮಿಗಳಿಂದ ಧರ್ಮಸಭೆ ಜರುಗಿತು.
ಕವಿ ಗವಾಯಿ ಅಡಿವೆಪ್ಪ ಕಮತರ ಹಾಗೂ ಸಂಗಡಿಗರಿಂದ ಭಕ್ತಿ ಸಂಗೀತ ಸೇವೆ ಜರುಗಲಿದೆ. ಸಿದ್ದಲಿಂಗೇಶ್ವರ ಸಮಿತಿ ಕಾರ್ಯದರ್ಶಿ ಪೆÇ್ರ.ಎಸ್.ಕೆ.ದೋಟಿಕಲ್ ಹಾಗೂ ಎಸ್,ಎಮ್,ಪಟ್ಟಣಶೆಟ್ಟಿ ಸೇರಿದಂತೆ ಮಠದ ಭಕ್ತರು ಉಪಸ್ಥಿತರಿದ್ದರು.