ಪಂಚಕರ್ಮ ಚಿಕಿತ್ಸೆಯಿಂದ ಸರ್ವ ರೋಗಗಳ ನಿಯಂತ್ರಣ: ಡಾ.ಸಂತೋಷಕುಮಾರ
ಬೀದರ್: ಮೇ.14:ಆಯುರ್ವೇದ ಪದ್ದತಿಯ ಪ್ರಮುಖ ಚಿಕಿತ್ಸಾ ವಿಧಾನವಾಗಿರುವ ಪಂಚಕರ್ಮ ಚಿಕಿತ್ಸೆಯಿಂದ ಎಲ್ಲ ರೋಗಗಳ ನಿಯಂತ್ರಣ ಸಾಧ್ಯವಿದೆ ಎಂದು ಬೀದರ್ ಆಯುವೇದ ವೈದ್ಯರ ಸಂಘದ ಅಧ್ಯಕ್ಷ ಡಾ.ಸಂತೋಷಕುಮಾರ ಅಣ್ಣೆಪ್ಪನೋರ್ ತಿಳಿಸಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಸಿಸಿ ಮಾತನಾಡಿದ ಅವರು, ಆಯುರ್ವೇದ ಕೇವಲ ಚಿಕಿತ್ಸಾ ಪದ್ದತಿಯಾಗಿರದೇ ಅದೊಂದು ಜೀವನ ವಿಧಾನವಾಗಿದೆ ಎಂದರು.
ಆಯುರ್ವೇದ ಇದು 4 ವರೆ ವರ್ಷ ಶಿಕ್ಷಣ ಹಾಗೂ ಒಂದು ವರ್ಷ ತರಬೇತಿ ಸೇರಿ ಐದು ವರೆ ವರ್ಷಗಳನ್ನು ಒಳಗೊಂಡ ಶೈಕ್ಷಣಿಕ ಕ್ರಮವಾಗಿದೆ. ಇದು ಎನ್..ಸಿ.ಐ.ಎಸ್.ಎಮ್ ಹಾಗೂ ರಾಜೀವ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಕೋರ್ಸ್ ಇದಾಗಿದೆ. ಇದರಲ್ಲಿ ಆಯುರ್ವೇದ, ಯೋಗ,-ನ್ಯಾಚಿರೊಪತಿ, ಯುನಾನಿ, ಸಿದ್ದ ಹಾಗೂ ಹೋಮಿಯೊಪತಿ ಒಳಗೊಂಡಿದೆ. ಇದಕ್ಕೆ ಬಿ.ಎ.ಎಮ್.ಎಸ್,. ಬಿ.ಹೆಚ್.ಎಮ್.ಎಸ್ ಹಾಗೂ ಬಿ.ಯು.ಎಮ್.ಎಸ್ ಎಂದು ಕರೆಯಲಾಗುತ್ತದೆ. 2023ರಲ್ಲಿ ಬೀದರ್‍ನಲ್ಲಿ ಆಯುರ್ವೇದ ವೈದ್ಯಕೀಯ ಸಂಘ ಹುಟ್ಟು ಹಾಕಲಾಯಿತು ಎಂದು ವಿವರಿಸಿದರು.
ಮಾನಸಿಕ ಖಿನ್ನತೆ, ಬಂಜೇತನ, ನಿದ್ರಾಹೀನತೆ, ಮದುಮೇಹ, ರಕ್ತದೊತ್ತಡ, ಇತ್ಯಾದಿ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಮಾತ್ರ ಪರಿಹಾರವಿದೆ. ಪಿಸ್ತುಲಾ, ಮೂಲವ್ಯಾಧಿ ರೋಗಗಳಿಗೆ ಶಾರಸೂತ್ರದಿಂದ ಸಂಪೂರ್ಣವಾಗಿ ಬಗೆ ಹರಿಸಬಹುದಾಗಿದೆ ಎಂದು ವಿವರಿಸಿದರು.
ಸಂಘದ ಖಜಾಂಚಿ ಡಾ.ಶಿವಶರಣಯ್ಯ ಮಠಪತಿ ಮಾತನಾಡಿ, ಆಯುರ್ವೇದದಲ್ಲಿ ಧ್ಯಾನ, ಯೋಗಾಸನ, ಪ್ರಾಣಾಯಾಮ ಹಾಗೂ ವಾಯುವಿಹಾರಕ್ಕೆ ಮಹತ್ವ ನೀಡಲಾಗುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುವ ಒಂದು ಪದ್ದತಿಯಾಗಿದೆ. ಧನುರ್ವಾಯು, ಪಾಶ್ರ್ವವಾಯುಗಳು ಸಂಪೂರ್ಣ ಗುಣಮುಖವಾಗಬೇಕಾದರೆ ಅದಕ್ಕೆ ಆಯುರ್ವೇದದಲ್ಲಿ ಮಾತ್ರ ಚಿಕಿತ್ಸೆ ಲಭ್ಯವಿದೆ. ಎಂದರು.
ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಡಾ.ಮಂಜುಳಾ ಮಾತನಾಡಿ, ಆಯುರ್ವೇದ ಇಂದು ಯಾವುದರಲ್ಲಿಯೂ ಕಡಿಮೆ ಇಲ್ಲ. ಆದರೂ ನಮ್ಮನ್ನು ಕನಿಷ್ಟವಾಗಿ ಕಾಣಲಾಗುತ್ತಿದೆ. ಆಯುರ್ವೇದ ಪದ್ದತಿಯಿಂದ ನಮ್ಮ ಧೀರ್ಘಕಾಲದ ಕಾಯಿಲೆಗಳನ್ನು ಸಹ ವಾಸಿ ಮಾಡಬಹುದಾಗಿದೆ. ಬಂಜೇತನ, ಪಿ.ಸಿ.ಒ.ಡಿ ಮತ್ತು ಋತುಚಕ್ರ ಸಮಸ್ಯೆಗಳಿಗೆ ಆಯುರ್ವೇದದಿಂದ ಮಾತ್ರ ಪರಿಹಾರ ಸಾಧ್ಯವೆಂದು ಪ್ರತಿಪಾದಿಸಿದರು.
ಸಂಘದ ಸದಸ್ಯರಾದ ಡಾ.ಶ್ರೀಕಾಂತ ಪಾಂಡರಿ, ಡಾ.ಲೋಕೇಶ ಹಿರೇಮಠ ಪತ್ರಿಕಾ ಗೋಷ್ಟಿಯಲ್ಲಿದ್ದರು.