ಪಂ ವಿರೂಪಾಕ್ಷ ಸಮ್ಮಾನ್ ರಾಷ್ಟ್ರೀಯ ಪುರಸ್ಕಾರಕ್ಕೆ ಖ್ಯಾತ ಕಲಾವಿದರಾದಕೇಶವರಾವ ಸೂರ್ಯವಂಶಿ ಮತ್ತು ಶೇಖ್ ಹನ್ನುಮಿಯಾ ಆಯ್ಕೆ
ಬೀದರ:ಮೇ.14:ಸಂಗೀತ ರುದ್ರ ಜನಕ, ವೇದಗಾಯನಾಚಾರ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪೂಜ್ಯ ಶ್ರೀ ಪಂ. ವಿರೂಪಾಕ್ಷಯ್ಯ ಸ್ವಾಮಿ ಗೋರಟಾ ಅವರ ಸ್ಮರಣಾರ್ಥ ಕೊಡಮಾಡುವ ಪಂ. ವಿರೂಪಾಕ್ಷ ಸಮ್ಮಾನ್ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಲ್ಕಿಯ ಪ್ರಸಿದ್ಧ ತಬಲಾವಾದಕರಾದ ಶ್ರೀ ಕೇಶವರಾವ ಸೂರ್ಯವಂಶಿ (2022) ಮತ್ತು ಖ್ಯಾತ ಸಿತಾರ ವಾದಕರಾದ ಭಾಲ್ಕಿಯ ಶೇಖ್ ಹನ್ನುಮಿಯಾ (2023) ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ತಿಂಗಳ 19 ರಂದು ಗೋರಟಾದಲ್ಲಿ ನಡೆಯುವ ಶ್ರೀ ಸಂಗೀತ ರುದ್ರೇಶ್ವರ 2ನೇ ಜಾತ್ರಾ ಮಹೋತ್ಸವ, ಪೂಜ್ಯ ಶ್ರೀ ವಿರೂಪಾಕ್ಷಯ್ಯ ಸ್ವಾಮಿಗಳವರ 15ನೇ ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಪಶ್ರಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಶ್ರೀ ಸಂಗೀತ ರುದ್ರೇಶ್ವ ಮಹಾಸಂಸ್ಥಾನದ ಅಧಿಪತಿಗಳಾದ ಶ್ರೀ ಷ್ರ.ಬ್ರ ಡಾ|| ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.