ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಆಳವಡಿಸಿಕೊಂಡರೆ ಕಷ್ಟಗಳು ಬರುವುದಿಲ್ಲ: ವೀರಭದ್ರಪ್ಪ ಉಪ್ಪಿನ
ಬೀದರ:ಮೇ.14:ಬಸವಣ್ಣನವರ ವಚನಗಳು ಇಂದು, ಮುಂದೆ ಎಂದೆಂದಿಗೂ ಸಾರ್ವಕಾಲಿಕವಾಗಿದ್ದು, ಅವುಗಳನ್ನು ಜೀವನದಲ್ಲಿ ಆಳವಡಿಸಿಕೊಂಡರೆ, ಜೀವನದಲ್ಲಿ ಕಷ್ಟ ಹಾಗೂ ಸಮಸ್ಯೆಗಳು ಹೆಚ್ಚಾಗಿ ಬರುವುದಿಲ್ಲ. ಅಲ್ಪ ಸ್ವಲ್ಪ ಬಂದರೂ ಅವುಗಳನ್ನು ಎದುರಿಸುವ ಆತ್ಮಬಲ ವ್ಯಕ್ತಿ ಯಲ್ಲಿರುತ್ತದೆ ಎಂದು ಯೋಗ ಸಾಧಕ ವೀರಭದ್ರಪ್ಪ ಉಪ್ಪಿನ ರವರು ಅಭಿಪ್ರಾಯ ಪಟ್ಟರು. ಅವರು ಬರೀದಶಾಹಿ ಉದ್ಯಾನದಲ್ಲಿ ಯೋಗ ತಂಡದಿಂದ ಏರ್ಪಡಿಸಿದ್ದ ಜಗಜ್ಯೋತಿ, ಸಾಂಸ್ಕøತಿಕ ನಾಯಕ ಬಸವಣ್ಣನವರ 891 ನೇ ಜಯಂತ್ಯೋತ್ಸವದಲ್ಲಿ ಮಾತನಾಡುತ್ತಿದ್ದರು. ಬಸವಣ್ಣನವರ ವಚನಗಳನ್ನು ಶಾಲಾ-ಕಾಲೇಜುಗಳ ಪಠ್ಯದಲ್ಲಿ ಸೇರಿಸಿದರೆ ವಿದ್ಯಾರ್ಥಿಗಳು ಆರಂಭದಿಂದಲೇ ಕಡ್ಡಾಯ ವಾಗಿ ವಚನಗಳ ಪಠಣ ಮಾಡಲು ಅನುಕೂಲ ವಾಗುತ್ತದೆ ಎಂದು ಯೋಗ ಮೇಲ್ವಿಚಾರಕರ ಗಂಗಪ್ಪ ಸಾವಳೆಯವರು ನುಡಿದರು. ನಿಜಲಿಂಗಪ್ಪ ತಗಾರೆಯವರು ಮಾತನಾಡಿದರು. ಅರುಣಾ ಪಾಟೀಲ ಸ್ವಾಗತ ಗೀತೆ ಹಾಡಿದರು. ಅಶೋಕ ಸೀಲವಂತ ನಿರೂಪಿಸಿದರು. ಸಂಜೀವಕುಮಾರ ಸ್ವಾಗತಿಸಿದರು. ಸಂಜು ಪಾಟೀಲ ಕೊನೆಯಲ್ಲಿ ವಂದಿಸಿದರು.ಮಲ್ಲಿಕಾರ್ಜುನ ಪಾಟೀಲ, ವೀರಶೆಟ್ಟಿ, ರಮೇಶ್ ಕಪಲಾಪೂರ, ಚಂದ್ರಶೇಖರ ದೆವಣಿ, ಶರಣಪ್ಪ ಬಿರಾದಾರ, ಗಣರಾಜ, ಅನನ್ಯ, ರಾಜಪ್ಪ, ಸತೀಷ ಹಾಗೂ ಇತರರು ಹಾಜರಿದ್ದರು.