ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವ
ಮುನವಳ್ಳಿ, ಮೇ14: ಅರ್ಟಗಲ್ಲ ಗ್ರಾಮದ ಶ್ರೀ ದ್ಯಾಮಮ್ಮ ಹಾಗೂ ಶ್ರೀ ದುರ್ಗಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮೇ 22 ರವರೆಗೆ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಜರಗುವುದು.
ಇಂದು ಸಂಜೆ ಶ್ರೀ ಭಗತ್‍ಸಿಂಗ್ ಗೆಳೆಯರ ಬಳಗದವರಿಂದ 50+52 ಕೆ.ಜಿ ಒಳಗಿನ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಜರಗುವದು.
ದಿ.15 ರಂದು ಬೆಳಗ್ಗೆ ಬಿಲ್ವಪೂಜೆ, ಡೊಳ್ಳಿನ ವಾಲಗ, ಶ್ರೀ ಗ್ರಾಮದೇವಿಯು ಭಕ್ತರ ಮನೆಗೆ ಭೇಟಿ ಕೊಟ್ಟು ಉಡಿ ತುಂಬುವುದು, ಸಂಜೆ 4-30 ಕ್ಕೆ ರಥೋತ್ಸವ, ರಾತ್ರಿ.10-30ಕ್ಕೆ ಶ್ರೀ ಮಾರುತೇಶ್ವರ ಯುವಕ ಮಂಡಳ ಇವರಿಂದ ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ಸಾಮಾಜಿಕ ನಾಟಕ ಪ್ರದರ್ಶನ ಗೊಳ್ಳುವದು.
ದಿ.16 ಬೆಳಗ್ಗೆ ಗುಗ್ಗಳ ಪೂಜೆ, ವಜ್ರಮಟ್ಟಿಯ ಗೋಕಾರೇಶ್ವರ ಚೌಡಕಿ ಗಾಯನ ಸಂಘದಿಂದ ಚೌಡಕಿ ಪದಗಳು, ಡೊಳ್ಳಿನ ವಾಲಗ ಮತ್ತು ಹಲಗಿ ಮಜಲು, ಸಂಜೆ 5ಕ್ಕೆ ಶ್ರೀ ಪಾಂಡುರಂಗ ದೇವಸ್ಥಾನದಿಂದ ಶ್ರೀ ಗ್ರಾಮದೇವಿ ದೇವಸ್ಥಾನದವರೆಗೆ ಕುಂಭಮೇಳ ರಾತ್ರಿ 8-30ಕ್ಕೆ ಶ್ರೀ ಫಕೀರಸ್ವಾಮಿ ಯುವಕ ಮಂಡಳದವರಿಂದ ಸಂಗೀತ ಸಿಂಚನ ರಸಮಂಜರಿ ಕಾರ್ಯಕ್ರಮ.
ದಿ.17 ರಂದು ಬೆಳಗ್ಗೆ ಅರಷಿಣ ಕುಂಕುಮ ಎಲೆ ಪೂಜೆ, ಸುತ್ತ ಮುತ್ತಲಿನ ಗ್ರಾಮಗಳ ಸದ್ಬಕ್ತರಿಂದ ಶ್ರೀ ಗ್ರಾಮದೇವಿಯ ಉಡಿ ತುಂಬುವದು, ಡೊಳ್ಳಿನ ವಾಲಗ, ಚೌಡಕಿ ಪದಗಳು, ಹಲಗಿ ಮಜಲು ಬೆಗ್ಗೆ 10 ಗಂಟೆಗೆ ಪಾಂಡುರಂಗ ಯುವಕ ಮಂಡಳ ಇವರಿಂದ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆ, ರಾತ್ರಿ 10-30ಕ್ಕೆ ಧರ್ಮದ ನುಡಿ ಬೆಂಕಿಯ ಕಿಡಿ ಎಂಬ ಸಾಮಾಜಿಕ ನಾಟಕ ಪ್ರದರ್ಶನ.
ದಿ.18 ರಂದು ಬೆಳಗ್ಗೆ ಪುಷ್ಪ ಪೂಜೆ, ಹಲಗಿ ಮಜಲು, ಚೌಡಕಿ ಹಾಡುಗಳು, ಡೊಳ್ಳಿನ ವಾಲಗ ಸಂಜೆ 4 ಗಂಟಗೆ ಕುಸ್ತಿ ಪಂದ್ಯಾವಳಿ, ಟಗರಿನ ಕಾಳಗ ಸ್ಪರ್ಧೆ, ರಾತ್ರಿ, ಚೌಡಕಿ ಪದಗಳ ಸವಾಲ್ ಜವಾಬ್ ಜಿದ್ದಜಿದ್ದಿ ಸ್ಪರ್ಧೆ ಜರಗುವುದು.
ದಿ.19 ರಂದು ಕುಸ್ತಿಗಳು, ರೈತರ ಬಳಗದವರಿಂದ 1 ನಿಮಿಷದ ಬಂಡಿ ಓಟದ ಸ್ಪರ್ಧೆ ರಾತ್ರಿ 10-30ಕ್ಕೆ ಜನ ಮೆಚ್ಚಿದ ಜಮೀನ್ದಾರ ಸಾಮಾಜಿಕ ನಾಟಕ.
ದಿ.20 ರಂದು ಟ್ರಾಕ್ಕರ್ ಇಂಜಿನ ಜಗ್ಗುವ ಸ್ಪರ್ಧೆ, ಸಂಜೆ ಕುಸ್ತಿಗಳು, ರಾತ್ರಿ 10-30ಕ್ಕೆ ಸೇಡಿಗಾಗಿ ಸಿಡಿದೆದ್ದ ಶಿವನಾಗ ಸಾಮಾಜಿಕ ನಾಟಕ.
ದಿ.21 ಪುಷ್ಪಪೂಜೆ, ಉಡಿ ತುಂಬುವುದು, ಡೊಳ್ಳಿನ ವಾಲಗ, ಚೌಡಕಿ ಪದಗಳು, ರಾತ್ರಿ 9-30 ಕ್ಕೆ ಜಾನಪದ ಜಾತ್ರೆ ರಸಮಂಜರಿ ಕಾರ್ಯಕ್ರಮ ಜರಗುವದು.
ದಿ.22 ರಂದು ಗುಗ್ಗಳ ಪೂಜೆ, ಚೌಡಕಿ ಪದಗಳು, ಡೊಳ್ಳಿನ ವಾಲಗ ಹಲಗಿ ಮಜಲು ಸಂಜೆ ಶ್ರೀ ಗ್ರಾಮದೇವಿಯ ಹೊನ್ನಾಟ ಆಡುತ್ತಾ ಶ್ರೀ ದೇವಿಯ ಸೀಮೋಲಂಘನೆ ಮಾಡವರು,
ದಿ.24 ರಂದು ಬೆಳಗ್ಗೆ ಶ್ರೀ ಗ್ರಾಮದೇವಿಯು ಗದ್ದುಗೆಗೊಳ್ಳುವಳು ಹಾಗೂ ಗ್ರಾಮಸ್ಥರಿಂದ ಉಡಿ ತುಂಬುವದರ ಮೂಲಕ ಜಾತ್ರೋತ್ಸವ ಮಂಗಳವಾಗುವದು. ಎಂದು ಜಾತ್ರಾ ಕಮಿಟಿಯ ಅಧ್ಯಕ್ಷ ಪ್ರಕಟಣೆಯಲ್ಲಿ ತಿಳಿಸಿರುವರು.