ಎಸ್‍ಆರ್‍ಎನ್ ಮೆಹತಾ ಸಿಬಿಎಸ್‍ಇ ಶಾಲೆಗೆ ಶೇ.100 ರಷ್ಟು ಫಲಿತಾಂಶ
ಕಲಬುರಗಿ,ಮೇ.14-2023-24ನೇ ಸಾಲಿನಲ್ಲಿ ಎಸ್. ಆರ್. ಎನ್. ಮೆಹತಾ ಸಿ.ಬಿ.ಎಸ್.ಇ ಶಾಲೆಯು ಶೇ. 100ರಷ್ಟು ಫಲಿತಾಂಶ ಪಡೆದಿದ್ದು, ಪರಿಕ್ಷೆಗೆ ಕುಳಿತ 92 ಮಕ್ಕಳಲ್ಲಿ 92 ಮಕ್ಕಳು ತೇರ್ಗಡೆಯಾಗಿದ್ದಾರೆ. ಅದರಲ್ಲಿ ಜಹೆಶ್ 485/500 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ, ಮತ್ತು ಬಸವರಾಜೇಶ್ವರೀ 482/500 ಅಂಕಗನ್ನು ಪಡೆದು ದ್ವೀತಿಯ ಸ್ಥಾನ ಪಡೆದಿದ್ದಾಳೆ.
16 ವಿದ್ಯಾರ್ಥಿಗಳು ಶೇ.90ಕ್ಕಿಂತ ಮೇಲ್ಪಟ್ಟ, 19 ವಿದ್ಯಾರ್ಥಿಗಳು ಶೇ.85 ರಿಂದ 90ರವರೆಗೆ, 18 ವಿದ್ಯಾರ್ಥಿಗಳು ಶೇ.75 ರಿಂದ 85ರವರೆಗೆ ಫಲಿತಾಂಶ ಪಡೆದಿದ್ದಾರೆ. ಒಟ್ಟು ಡಿಸ್ಟಿಂಕ್ಷನ್- 53, ಪ್ರಥಮ ಶ್ರೇಣಿ-33, ದ್ವಿತಿಯ ಶ್ರೇಣಿ-06 ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಳಾದ ಜಯೇಶ ಶೇ.97, ಬಸವರಾಜೇಶ್ವರಿ ಶೇ.96.4, ದಕ್ಷ ಲಾತುರೆ ಶೇ.95.6, ಗಿರಿಜಾ ಪಾಟೀಲ ಶೇ.95.4, ಹರ್ಷಾ ಎಂ.ಬಿರಾದಾರ ಶೇ.95.2, ಸಾಹಿತ್ಯ ಅಮರೇಶ ಮಲಗಿಹಾಳ ಶೇ.95, ಮಹ್ಮದ್ ಯಾಸಿರ್ ಶೇ.94.4, ರಾಜೀವ ಪುರೋಹಿತ್ ಶೇ.93.4, ಸಿದ್ಧಿ ಶೇ.93.4 ಮಾಹೀನ್ ಜುಮ್ನಾಳ್ ಶೇ.93, ವೇದ್ ಕೆ.ಬಿರಾದಾರ ಶೇ.93, ರಕ್ಷಿತ್ ಶೇ.91.4, ರಾಮಚಂದ್ರ ಎಸ್.ಪಾಟೀಲ ಶೇ.91.4, ಸೃಷ್ಠಿ ಆರ್.ಕೌಕುಂಟ್ಲಾ ಶೇ.91.4, ರಾಹುಲ್ ಶೇ.91.2, ಅನುಷಾ ಶೇ.90.8 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯವರು, ಪ್ರಾಚಾರ್ಯರು ಮತ್ತು ಶಾಲಾ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.