ಆರೋಗ್ಯ ಕ್ಷೇತ್ರಕ್ಕೆ ಶೂಶ್ರೂಷಕರ ಕೊಡುಗೆ ಅನನ್ಯ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.14:- ಆರೋಗ್ಯ ಕ್ಷೇತ್ರದಲ್ಲಿ ವೈದ್ಯರ ಜತೆಗೆ ಶೂಶ್ರೂಷಕರ ಸೇವೆ ಮಹತ್ವದ್ದಾಗಿದೆ. ಯಾವುದೇ ತಾರತಮ್ಯ ಮಾಡದೇ ರೋಗಿಗಳ ಆರೈಕೆ ಮಾಡುವ ಮೂಲಕ ಸಾಮಾಜಿಕ ಕಳಕಳಿ ತೋರುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ನಜರ್‍ಬಾದ್ ನಟರಾಜ್ ಬಣ್ಣಿಸಿದರು.
ಜನತಾ ನಗರದಲ್ಲಿರುವ ಮೌರ್ಯ ಆಸ್ಪತ್ರೆಯಲ್ಲಿ ಸೋಮವಾರ ಅಂತರ ರಾಷ್ಠ್ರೀಯ ಶೂಶ್ರೂಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ದಾದಿಯರಿಗೆ ಸನ್ಮಾನಿಸಿ ಮಾತನಾಡಿದರು.
ಕೋವಿಡ್ ವೇಳೆಯಲ್ಲಿ ನಮ್ಮವರನ್ನು ನಾವೇ ಮುಟ್ಟಲಿಲ್ಲ, ಮಾತನಾಡಿಸಲಿಲ್ಲ. ಆದರೆ ಆಸ್ಪತ್ರೆಗಳಲ್ಲಿ ಯಾವ ಸಂಬಂಧ ಪರಿಚಯವೇ ಇಲ್ಲದ ದಾದಿಯರು ತಮ್ಮ ಜೀವದ ಹಂಗನ್ನು ತೊರೆದು ರೋಗಿಗಳಿಗೆ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ. ದೇಶಕ್ಕೆ ವೈದ್ಯರು ಮತ್ತು ದಾದಿಯರು ಬೆನ್ನೆಲುಬಾಗಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಜರ್‍ಬಾದ್ ನಟರಾಜ್, ವರುಣ ಮಹಾದೇವ್, ಚೇತನ್ ಗೌಡ, ವೆಂಕಟೇಶ್, ಬೈರತಿ ಲಿಂಗರಾಜು, ಲೋಕೇಶ್, ಶಿವು ಕಡಕೋಳ, ದುರ್ಗಾ ಪ್ರಸಾದ್, ರವಿಚಂದ್ರ, ಮೋಹನ್ ಕುಮಾರ್, ನವೀನ್ ಕೆಂಪಿ, ಹಾಗೂ ಇನ್ನಿತರರು ಹಾಜರಿದ್ದರು