ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ: ಹರೀಶ್ ಗೌಡ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.14:- ಸಗತ ಪರಿಶ್ರಮ ಹಾಗೂ ಆತ್ಮಸ್ಥೈರ್ಯ ದಿಂದ ಬದುಕಿನಲ್ಲಿ ಸಾಧನೆಗೈಯ್ಯಲು ಸಾಧ್ಯವಾಗುತ್ತದೆ ಎಂದು ಶಾಸಕ ಹರೀಶ್ ಗೌಡ ಹೇಳಿದರು
ಕರ್ನಾಟಕದ SSಐಅ ಫಲಿತಾಂಶದಲ್ಲಿ ಮೈಸೂರು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಮೂರನೇ ಶ್ರೇಣಿ ಪಡೆದ ಕುಮಾರಿ ಡಿ ಎಸ್ ಧ್ವನಿ ರವರಿಗೆ ಶಾಸಕ ಹರೀಶ್ ಗೌಡ ಹಾಗೂ ಅವರ ಪತ್ನಿ ಗೌರಿ ರವರು ಕೆ ಜಿ ಕೊಪ್ಪಳ್ ಶಾಸಕರ ನಿವಾಸದಲ್ಲಿ ವಿದ್ಯಾರ್ಥಿನಿಗಿ ಸಿಹಿ ತಿನಿಸಿ ಸನ್ಮಾನಿಸಿ ಶುಭ ಹಾರೈಸಿ ಮಾತನಾಡಿ ಅವರು ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಉಪಕ್ರಮಗಳನ್ನು ಅಳವಡಿಸಿಕೊಂಡಿರುವ ಪ್ರಯುಕ್ತ ಪ್ರತಿಯೊಂದು ಕ್ಷೇತ್ರದಲ್ಲಿಯೂ ದಕ್ಷತೆ ಮತ್ತು ನಿಖರತೆಯ ಪ್ರಮಾಣ ಹೆಚ್ಚಾಗಿರುತ್ತದೆ, ಆರೋಗ್ಯಕರ ಸಾಮಾಜಿಕ ವ್ಯವಸ್ಥೆಯನ್ನು ಬಲಗೊಳಿಸಲು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಮಾತ್ರ ಮಾನವ ಸಂಪನ್ಮೂಲವನ್ನು ನಿರ್ಧರಿಸಿರುವ ಕಾರಣದಿಂದಾಗಿ ಇಂದಿನ ವಿದ್ಯಾರ್ಥಿಗಳು ನಿರಂತರ ಓದು ಕರಾರುವಾಕ್ ಅಧ್ಯಯನ ಇತ್ಯಾದಿ ಕೌಶಲಗಳನ್ನು ಕಾಲಕ್ಕೆ ತಕ್ಕಂತೆ ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದರು,
ಇದೇ ಸಂದರ್ಭದಲ್ಲಿ ಅವರ ತಂದೆ ಡಿ ಪಿ ಸುಧನ್ವ ತಾಯಿ ಎನ್ ಎಸ್ ಕುಸುಮ ಹಾಜರಿದ್ದರು.