ಶಾಕ್ ಸಕ್ರ್ಯೂಟ್ 25 ಲಕ್ಷ ಪದಾರ್ಥಗಳು ಬೆಂಕಿಗೆ ಆಹುತಿ
ಸಂಜೆವಾಣಿ ವಾರ್ತೆ
ನಂಜನಗೂಡು.ಮೇ.14:- ನಂಜನಗೂಡು ಮುಸ್ಲಿಂ ಬ್ಲಾಕ್ ಉರ್ದು ಸ್ಕೂಲ್ ಹಿಂಬಾಗ ರಫೀಕ್ ಎಂಬುವರಿಗೆ ಸೇರಿದ ಗಂಧದ ಕಡ್ಡಿ ತಯಾರು ಮಾಡುವ ಫ್ಯಾಕ್ಟರಿ ಬೆಳಗಿನ ಜಾವ ಶಾಕ್ ಸಕ್ರ್ಯೂಟ್ ನಿಂದ 25 ಲಕ್ಷ ವೆಚ್ಚದ ಪದಾರ್ಥಗಳು ಸುಟ್ಟು ಕರಕಲಾಗಿದೆ.
ಪಟ್ಟಣದ ಟಾಕೀಸ್ ಹಿಂಭಾಗ ವಾಸವಿರುವ ರಫೀಕ್ ಎಂಬುವರು ಮುಸ್ಲಿಂ ಬ್ಯಾಕ್ ಉರ್ದು ಸ್ಕೂಲ್ ಹಿಂಬಾಗ ಗಂಧದಕಡ್ಡಿ ತಯಾರು ಮಾಡುವ ಫ್ಯಾಕ್ಟರಿ ನಡೆಸುತ್ತಿದ್ದರು ಸತತ ಮಳೆಯಿಂದ ಪಟ್ಟಣದಲ್ಲಿ ಕರೆಂಟ್ ಹೋಗುವುದು ಬರುವುದು ಆಗುತ್ತಿತ್ತು ಬೆಳಗಿನ ಜಾವ ಐದು ಗಂಟೆಯಲ್ಲಿ ಗಂಧದಕಡ್ಡಿ ಫ್ಯಾಕ್ಟರಿ ಕಿಟಕಿ ಮತ್ತು ಮೇಲ್ಚಾವಣಿ ನಲ್ಲಿ ಹೊಗೆ ಕಾಣಿಸಿಕೊಂಡಾಗ ಅಕ್ಕ ಪಕ್ಕದವರು ಗಾಬರಿಗೊಂಡು ಮನೆಯಿಂದ ಹೊರಗೆ ಬಂದಾಗ ಫ್ಯಾಕ್ಟರಿ ಒಳಗಡೆ ಇದ್ದಂತಹ ಪದಾರ್ಥಗಳು ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು ತಕ್ಷಣ ಫ್ಯಾಕ್ಟರಿ ಮಾಲೀಕನಿಗೆ ಫೆÇೀನ್ ಮೂಲಕ ವಿಷಯ ಮುಟ್ಟಿಸಿದ್ದಾರೆ ತಕ್ಷಣ ಫೈಯರ್ ಇಂಜಿನ್ ಅವರಿಗೂ ಕೂಡ ಮಾಹಿತಿ ನೀಡಿದ್ದಾರೆ ಇವರು ಬರುವಷ್ಟರಲ್ಲಿ ಅಕ್ಕಾ ಪಕ್ಕದ ಮನೆಗಳಿಗೂ ಬೆಂಕಿ ತಗಲಿ ಮನೆಯಲ್ಲಿದ್ದಂತಹ ಸಿಲಿಂಡರ್ ಗಳನ್ನು ಹೊರ ಎಸೆದರು ಆದರೂ ಕೂಡ ಮನೆಯಲ್ಲಿದ್ದಂತಹ ವಾಷಿಂಗ್ ಮಿಷಿನ್ ಬೀರುಗಳು ಬಟ್ಟೆಗಳು ಇನ್ನು ಅನೇಕ ಪದಾರ್ಥಗಳು ಸುಟ್ಟು ಕರಕಲಾಗಿದೆ ಬಂದಂತ ಫೈಯರ್ ಇಂಜಿನ್ ಬೆಂಕಿ ನಿಂದಿಸಲು ಹರ ಸಾಹಸ ಪಟ್ಟರು ಸ್ಥಳೀಯರ ಸಹಾಯದಿಂದ ಬೆಂಕಿ ನಿಂದಿಸಿದರು ಒಳಗಡೆ ಇದ್ದಂತ ಪದಾರ್ಥಗಳು ಸುಟ್ಟು ಕರಕಲಾಗಿದೆ ಒಟ್ಟಾರೆ ಗಂಧದಕಡ್ಡಿ ಫ್ಯಾಕ್ಟರಿ ಮತ್ತು ಅಕ್ಕಪಕ್ಕದ ಮನೆಗಳ ಒಟ್ಟು ಪದಾರ್ಥಗಳ ವೆಚ್ಚ 28 ಲಕ್ಷ ಎಂದು ಅಂದಾಜು ಮಾಡಲಾಗಿದೆ ಸಂಪೂರ್ಣವಾಗಿ ಎಲ್ಲಾ ಪದಾರ್ಥಗಳು ಸುಟ್ಟು ಕರಕಲಾಗಿದೆ.
ನಿದ್ರೆಯಲ್ಲಿ ಜಾರಿದ ಕುಟುಂಬಗಳು ಹೆಚ್ಚಿನ ಅನಾಹುತ ಉಂಟಾಗದೆ ದೇವರ ದಯೆಯಿಂದ ಪಾರಾಗಿದ್ದಾರೆ ಸರಿಯಾದ ಸಮಯಕ್ಕೆ ಫೈಯರ್ ಇಂಜಿನ್ ಬಂದು ಹೆಚ್ಚಿನ ಅವಘಡ ತಪ್ಪಿಸಿದ್ದಾರೆ. ಸ್ಥಳಕ್ಕೆ ಪೆÇಲೀಸ್ ಇಲಾಖೆ ಮತ್ತು ವಾರ್ಡಿನ ನಗರಸಭೆ ಸದಸ್ಯ ಗಾಯಿತ್ರಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.