ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕತ್ತೆಕಿರುಬ ಪ್ರತ್ಯಕ್ಷ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.14-ದೇಶದಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದಗುಂಡ್ಲುಪೇಟೆತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಲು ಅಪರೂಪವಾಗಿ ಕಾಣಸಿಗುವ ಕತ್ತೆಕಿರುಬ ಪ್ರತ್ಯಕ್ಷವಾಗಿದೆ.
ಮಂಗಲ ಗ್ರಾಮದ ಮಹದೇಶ್ವರಕೆರೆ ಹಾಗೂ ಸುತ್ತಮುತ್ತಲಿನ ಜಮೀನಿನಲ್ಲಿಕತ್ತೆಕಿರುಬ ಓಡಾಡುತ್ತಿರುವದೃಶ್ಯವನ್ನು ಸ್ಥಳೀಯರಾದ ಕುಮಾರ್‍ಎಂಬುವರು ಸೆರೆ ಹಿಡಿದಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿದಶಕದ ಹಿಂದೆಕತ್ತೆಕಿರುಬ ಇರುವುದು ಬೆಳಕಿಗೆ ಬಂದಿತ್ತು. ಅದಾದ ನಂತರ ಈಗ ಕತ್ತೆಕಿರುಬ ಕಾಣಸಿಕೊಳ್ಳುತ್ತಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಯಲಚಟ್ಟಿ ಬೀಟ್‍ನಲ್ಲಿ 2012 ರ ಫೆಬ್ರುವರಿ ತಿಂಗಳಲ್ಲಿ ಕತ್ತೆಕಿರುಬಗಳು ಓಡಾಡುತ್ತಿದ್ದ ಫೆÇೀಟೋ ಸೆರೆ ಹಿಡಿಯಲಾಗಿತ್ತು. ಅದಕ್ಕೂ ಮುನ್ನ 1980 ರದಶಕದಲ್ಲಿಉಲ್ಲಾಸ್‍ಕಾರಂತ್‍ಅವರು ಮಧುಮಲೈ ಹಾಗೂ ಬಂಡೀಪುರದಲ್ಲಿಕತ್ತೆಕಿರುಬ ಇರುವುದನ್ನು ಪತ್ತೆ ಹಚ್ಚಿದ್ದರು. ಸಫಾರಿಯಲ್ಲಿಕತ್ತೆಕಿರುಬ ಕಾಣುವುದುಎμÉ್ಟೂೀ ವರ್ಷಗಳಿಗೊಮ್ಮೆ ಎಂಬಂತಾಗಿದೆ.
ಅಳಿವಿನಂಚಿನಲ್ಲಿರುವ ಈ ಕತ್ತೆಕಿರುಬ ಮಂಗಲ ಗ್ರಾಮದಲ್ಲಿಓಡಾಟ ನಡೆಸುವ ಮೂಲಕ ವನ್ಯಪ್ರೇಮಿಗಳ ಮನಸ್ಸನ್ನುಗೆದ್ದಿದೆ. ಅಪರೂಪವಾಗಿ ಕಾಣಸಿಗುವ ಕತ್ತೆಕಿರುಬದದೃಶ್ಯ ಸದ್ಯ ಮೊಬೈಲ್ ನಲ್ಲಿ ಸೆರೆಂiiÁಗಿದೆ.