ಹಿರಿಯರು ಸುಖಮಯ ಜೀವನ ಸಾಗಿಸಬೇಕು:ರಾಜಶೇಖರ ಧೈವಾಡೆ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.14: ಹಿರಿಯ ನಾಗರಿಕರು ಸುಖಮಯ ಜೀವನ ನಡೆಸಲು, ಸರಕಾರ ಹಲವು ಸೌಲಭ್ಯಗಳನ್ನು ಒದಗಿಸಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ತೃಪ್ತಿಯಿಂದ ಜೀವನ ಸಾಗಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ರಾಜಶೇಖರ ಧೈವಾಡೆ ಹೇಳಿದರು.
ರೋಟರಿ ಪ್ರೋಬಸ್ ಕ್ಲಬ್ ಉತ್ತರದ ಹಿರಿಯ ನಾಗರಿಕರ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, 60 ದಾಟಿದ ಹಿರಿಯರು ತಮ್ಮ ತಮ್ಮ ಕಚೇರಿಗೆ ಆಧಾರ ಕಾಡ್ರ್À ಹಾಗು ಅದರ ಜೊತೆ ಲಿಂಕ ಇರುವ ಮೊಬೈಲ್ ತೆಗೆದುಕೊಂಡು ಬಂದರೆ, ಒಂದು ಗಂಟೆಯೊಳಗೆ ಅವರಿಗೆ ಹಿರಿಯ ನಾಗರಿಕರ ಕಾಡ್ರ್À ಮಾಡಿಕೊಡಲಾಗುವದು ಎಂದು ಹೇಳಿದರು.
ಬಿ.ಪಿ.ಎಲ್. ಕಾಡ್ರ್À ಹೊಂದಿರುವ ಹಿರಿಯರು ಮಾಸಿಕ ಪಿಂಚಣಿಗೆ ಅರ್ಹರು. ಜಿಲ್ಲಾ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗಾಗಿಯೇ ವಿಶೇಷ ವಾರ್ಡ್ ಇದೆ. ಹಿರಿಯ ನಾಗರಿಕರ ಮನರಂಜನೆಗಾಗಿ ಜಲನಗರದಲ್ಲಿ ‘ಡೇ ಕೇರ್ ಕೇಂದ್ರ’ ಇದೆ. ಹಿರಿಯರು ಇವುಗಳ ಪ್ರಯೋಜನೆ ಪಡೆಯಲು ಕೋರಿದರು. ಹೆಚ್ಚಿನ ಮಾಹಿತಿಗಾಗಿ 1090 ಹಾಗು 14567 ಟೋಲ್ ಫ್ರೀ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಕೋರಿದರು.
ವೇದಿಕೆಯ ಅಧ್ಯಕ್ಷ ವಿಠಲ ತೇಲಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಎಸ್.ಸಿ.ಹಿರೇಮಠ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಹಾದೇವ ಹಾಲಳ್ಳಿ ನಿರೂಪಿಸಿದರು. ವೇದಿಕೆಯ ಉಪಾಧ್ಯಕ್ಷ, ಸಾಹಿತಿ ಸುಭಾಸ ಯಾದವಾಡ ವಂದಿಸಿದರು.