ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿ ಕಿಸಾನ ಸಂಘ ನೇತೃತ್ವದಲ್ಲಿ ಪ್ರತಿಭಟನೆ, ಡಿಸಿಗೆ ಮನವಿ ಸಲ್ಲಿಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.14:ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಕರ್ನಾಟಕ ಉತ್ತರ ಪ್ರಾಂತ ವಿಜಯಪುರ ಜಿಲ್ಲೆ ವತಿಯಿಂದ ತಿಡಗುಂದಿ ಶಾಖಾ ಕಾಲುವೆಯ ಕೊನೆಯ ಭಾಗದಲ್ಲಿ ಬರುವ ಎಲ್ಲ ಕೆರೆಗಳಿಗೆ ತಡವಲಗಾ, ಡೋಮನಾಳ ಕರೆಯಿಂದ ಬಮ್ಮನಳ್ಳಿ ಕೆರೆಗೆ ನೀರು ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಅವರು ಮನವಿ ಸ್ವೀಕರಿಸಿದರು.
ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಜಿಲ್ಲಾಧ್ಯಕ್ಷÀ ಮಲ್ಲನಗೌಡ ಪಾಟೀಲ ಮಾತನಾಡಿ, ಈ ಸಂಬಂಧ ಈ ಹಿಂದೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಕುಳಿತಿದ್ದಾಗ ವಿಜಯಪುರ ಜಿಲ್ಲಾಧಿಕಾರಿಗಳು, ಬೆಳಗಾವಿ ಪ್ರಾದೇಶಿಕ ಆಯುಕ್ತರಿಂದ ಹೆಚ್ಚುವರಿ ನೀರಿನ ಪರವಾನಿಗೆ ತೆಗೆದುಕೊಂಡು ಕೊನೆಯ ಭಾಗದ ಕೆರೆಗಳಾದ ತಡವಲಗಾ, ಅಥರ್ಗಾ, ಹರಟಗಿ ಕೆರೆಗಳಿಗೆ ನೀರು ಹರಿಸಲಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಇನ್ನೂವರೆಗೆ ತಿಡಗುಂದಿ ಕೆರೆಗೆ ನೀರು ಹರಿಸಿಲ್ಲ. ಜನ ಜಾನುವಾರುಗಳಿಗೆ ತೊಂದರೆಯಾಗದಂತೆ ಕೂಡಲೇ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಕೆರೆಗಳಿಗೆ ನೀರು ತುಂಬದೇ ಹೋದರೆ ಉಗ್ರ ಹೋರಾಟ ಮಾಡಬೇಕಾಗÀುತ್ತದೆ. ಅದಕ್ಕಾಗಿ ತಾವು ಮುಂಚಿತವಾಗಿ ಕ್ರಮ ಕೈಗೊಳ್ಳಬೇಕೆಂದು ಅವರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಗುರುನಾಥ ಬಗಲಿ, ಶರಣಪ್ಪ ಸುದಾಮ, ಜಿ.ಎನ್. ನಿಂಬರಗಿ, ಎಸ್.ಸಿ. ಜಾಲಗೇರಿ, ಎ.ಬಿ. ಪೂಜಾರಿ, ಬಸವರಾಜ ಹಳ್ಳಿ, ಮಲ್ಲು ನೇಕಾರ, ಶರಣಪ್ಪ ತೊರಪೆ, ಪ್ರಕಾಶ ಹಂಜಗಿ, ದುಂಡಪ್ಪ ಕರಕಟ್ಟಿ, ಈರಣ್ಣ ಗೊಟ್ಯಾಳ, ಚನ್ನಪ್ಪ ಮಿರಗಿ, ಬಿ.ಎಚ್. ಪಂತೋಜಿ, ಶರಣಪ್ಪ ತಾರಾಪುರ, ಚಿದಾನಂದ ಮದರಿ ಮತ್ತಿತರರು ಇದ್ದರು.