ಎಸ್.ಎಸ್.ಎಲ್.ಸಿ.ಯಲ್ಲಿ ಡೈಮಂಡ ಪ್ರೌಢ ಶಾಲೆಯ ಸಾಧನೆ
ಭಾಲ್ಕಿ:ಮೇ.14:2023-24ನೇ ಸಾಲಿನ ಹತ್ತನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು ಭಾಲ್ಕಿ ನಗರದ ಪ್ರತಿಷ್ಠಿತ ಡೈಮಂಡ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೀಶಾ ತಂದೆ ವಿನೋದ ಬಿರಾದಾರ 618/625 (98.88%) ಅಂಕ ಪಡೆದು ರಾಜ್ಯಕ್ಕೆ ಏಳನೇ ರ್ಯಾಂಕ್ ಪಡೆಯುವುದರ ಮೂಲಕ ಭಾಲ್ಕಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ ಮತ್ತು ಪ್ರಿಯಂಕಾ.ಎಸ್ 98.08, ಮೇಘನಾ 97.92, ರೇವಣಪ್ಪಾ ಮತ್ತು ಸಹನಾ 96.96, ಸ್ನೇಹಾ 96.16, ನರಸಿಂಗ 95.68, ಸ್ವಾತಿ 95.68, ಶ್ರದ್ಧಾ 95.20, ಅಲ್ಮಾಸ್ ಫಾತಿಮಾ ಮತ್ತು ಪ್ರಥ್ವಿರಾಜ 95.04, ಸಂತೋಷಿ 94.72, ವೈಶಾಲಿ 94.56, ವಿಶ್ವರಾಜ 94.40, ಅಂಕಿತಾ 94.24, ಆದಿತ್ಯ ಧನರಾಜ, ರಿಷಿಕೇಶ.ಎಮ್ ಮತ್ತು ಪ್ರಣವ ಗುರುನಾಥ 93.92, ಐಶ್ವರ್ಯ.ಎಸ್ 93.60, ವೈಭವ 93.44, ಆರತಿ ಮತ್ತು ಮದಿಹಾ ಫಾತಿಮಾ 92.96, ಗೌರಿ ವಂಕೆ 92.80, ಅಭಿಜೀತ.ಎಮ್ 92.64, ವೀರೇಂದ್ರ ಮತ್ತು ದಿವ್ಯಾ 92.48, ಕಿರಣಕುಮಾರ ಮತ್ತು ಯೋಗೇಶ 92.32, ಸೃಷ್ಟಿ.ವಿ. 92.00, ಪ್ರಿಯಾ.ಬಿ. 91.52, ಅಲ್ಫಿಯಾ ಮೆಹರುನ್ನಿಸಾ ಮತ್ತು ರೋಹಿನಿ 91.04, ಪ್ರಿಯಾ.ಡಿ. ಮತ್ತು ಗಣೇಶ 90.72, ಅಂಜಲಿ.ಆರ್. 90.24, ಮೋಹನ.ವಿ. 90.08 ಈ ರೀತಿಯಾಗಿ ಒಟ್ಟಾರೆ 36 ವಿದ್ಯಾರ್ಥಿಗಳು 90 ಪ್ರತಿಶತಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಪಡೆದಿರುತ್ತಾರೆ.
ಅಗ್ರಶ್ರೇಣಿಯಲ್ಲಿ 67 ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ. ವಿದ್ಯಾರ್ಥಿಗಳ ಜೀವನದಲ್ಲಿ ಹತ್ತನೇ ತರಗತಿ ಶಿಕ್ಷಣ ಅತ್ಯಂತ ಮಹತ್ವದ ಘಟ್ಟ. ಈ ಹಂತದಲ್ಲಿ ಅವರು ಪಡುವ ಪರಿಶ್ರಮ ಮತ್ತು ತೆಗೆದುಕೊಳ್ಳುವ ನಿರ್ಧಾರ ವಿದ್ಯಾರ್ಥಿಗಳ ಜೀವನಕ್ಕೆ ಭದ್ರ ಬುನಾದಿಯನ್ನು ನೀಡುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಸ್.ಕೆ.ಮಸ್ತಾನವಲಿ ತಿಳಿಸಿದರು. ಪ್ರೌಢ ಶಾಲಾ ಹಂತದ ಶಿಕ್ಷಣವು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಅವಕಾಶಗಳನ್ನು ತೆರೆದಿಡುವ ಮೂಲಕ ಅವರ ಸರ್ವಾಂಗೀಣ ವಿಕಾಸಕ್ಕೆ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ಇದರ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ವಾಯ್.ಮಾಧವರಾವ ವಿದ್ಯಾರ್ಥಿಗಳಿಗೆ ಹಿತನುಡಿಯನ್ನು ತಿಳಿಸುತ್ತ ಅವರ ಸಾಧನೆಗೆ ಹರ್ಷ ವ್ಯಕ್ತಪಡಿಸಿರುತ್ತಾರೆ. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಗೌಸಿಯಾ ಬೇಗಂ ಮತ್ತು ಮುಖ್ಯೋಪಾಧ್ಯಾಯರಾದ ಶ್ರೀ ಧನರಾಜ ನೀಲಂಗೆ, ಆಡಳಿತಾಧಿಕಾರಿಗಳಾದ ಶ್ರೀ ಬಸವರಾಜ ಪಾಟೀಲ, ಶ್ರೀ ರಾಮ ಕನಸೆ ಮತ್ತು ಶ್ರೀಮತಿ ಸ್ವಪ್ನಾಲಿ ಕಾಶೆಂಪುರೆ ಅವರು ಕೂಡಾ ವಿದ್ಯಾರ್ಥಿಗಳ ಅಮೋಘ ಸಾಧನೆಗೆ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ. ಪ್ರೌಢ ಶಾಲೆಯ ಎಲ್ಲಾ ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿರುತ್ತಾರೆ.