ಹಜರತ್ ಖಾಜಾ ಬಂದಾ ನವಾಜ್ ದರ್ಗಾಕ್ಕೆ ಸಚಿವ ಜಮೀರ್ ಅಹ್ಮದ್ ಭೇಟಿ
ಕಲಬುರಗಿ:ಮೇ.13: ಪ್ರಸಿದ್ಧ ಸೂಫಿ ಸಂತ ಹಜರತ್ ಖಾಜಾ ಬಂದಾ ನವಾಜ್ ಗೇಸುದರಾಜ್ ಅವರ ದರ್ಗಾಕ್ಕೆ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಖಾತೆಯ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಭಾನುವಾರ ಭೇಟಿ ನೀಡಿ ಪೂಜ್ಯರ ದರ್ಶನ ಪಡೆದರು.
ಇದಕ್ಕೂ ಮುನ್ನ ದರ್ಗಾದ ಪೀಠಾಧಿಪತಿ ಹಜರತ್ ಸೈಯದ್ ಷಾ ಖುಸ್ರೋ ಹುಸೈನಿ ಅವರ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಸಿ ಸನ್ಮಾನಿಸಿದರು. ನಂತರ ಪೀಠಾಧಿಪತಿಗಳು ಸಚಿವರಿಗೆ ಸನ್ಮಾನಿಸಿ ಕುಶಲೋಪರಿ ವಿಚಾರಿಸಿದರು
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ವಕ್ಫ್ ಮಂಡಳಿಯ ಅಧ್ಯಕ್ಷ ಕೆ ಅನ್ವರ್ ಬಾಷಾ, ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ, ಡಾ. ಸೈಯದ್ ಮುಸ್ತಫಾ ಅಲ್ ಹುಸೈನಿ, ಸೈಯದ್ ಷಾ ತಖಿಉಲ್ಲಾ ಹುಸೈನಿ, ರವೂಫದ್ದೀನ್ ಜಚೇರಿವಾಲಾ, ನಟ ಅಕ್ಬರ್ ಬಿನ್ ತಬರ್, ಅಯಾಜ್ ಖಾನ್, ಫಝಲ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.