ಸಹಕಾರಿ ಧುರೀಣ ಮಹಾಂತಪ್ಪ ಆಲೂರೆ ಕೊಲೆ ಒಂದು ನೀಚ ಕೃತ್ಯ: ಗುತ್ತೇದಾರ
ಆಳಂದ:ಸೆ.೨೩: ಶ್ರೀ ಧನಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಮಹಾಂತಪ್ಪ ಆಲೂರೆಯವರ ಕೊಲೆ ಒಂದು ನೀಚ ಕ್ರತ್ಯವಾಗಿದೆ,” ಈ ಕೃತ್ಯ ಎಸಗಿದವರಿಗೆ ದೇವರೆ ಪಾಠಕಲಿಸಲಿ ಎಂದು ಮಾಜಿ ಶಾಸಕ ಸುಭಾಸ್ ಗುತ್ತೇದಾರ್ ಅವರು ಭಾವುಕರಾಗಿ ಆಕ್ರೋಶ ಹೊರಹಾಕಿದರು.
ಸರಸಂಬಾ ಗ್ರಾಮದ ಶ್ರೀ ದಯಾಲಿಂಗೇಶ್ವರ ಆಶ್ರಮದಲ್ಲಿ ಭಾನುವಾರ ಶ್ರೀ ಧನಲಕ್ಷಿö್ಮÃ ಸೌಹಾರ್ದ ಸಹಕಾರಿ ಸಂಘದ ೨೨ನೇ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾಂತಪ್ಪ ಆಲೂರ್ಯವರು ತಮ್ಮ ಸಂಘವನ್ನು ಕೆಳಮಟ್ಟದಿಂದ ಮೇಲ್ಮಟ್ಟದವರೆಗೆ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಬೆಳಸಿ, ಸಾವಿರಾರು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಆಶ್ರಯ ಒದಗಿಸುವ ಮಹಾಕಾರ್ಯ ಮಾಡಿದ್ದಾರೆ. ಅವರು ತನ್ನ ಕುಟುಂಬದ ಆರ್ಥಿಕ ಸದೃಢತೆ ಕೈಗೊಳ್ಳದೆ ಸಂಘದ ಆರ್ಥಿಕ ಸದೃಢತೆ ಕೈಗೊಂಡಿದ್ದು, ಈ ಭಾಗದ ಸಹಕಾರಿ ಕ್ಷೇತ್ರಕ್ಕೆ ಮಾದರಿಯಾಗಿದ್ದಾರೆ. ಅವರ ಜನರಪ ಕಾರ್ಯ ಸಹಿಸಿಕೊಳ್ಳದವರ ಈ ದುಷ್ಕೃತ್ಯಕ್ಕೆ ದೇವರ ಪಾಠಕಲಿಸಲಿ, ಇಂತಹ ಪ್ರಾಮಾಣಿಕ ಮತ್ತು ಪ್ರಗತಿಪರವಾಗಿ ಕಟ್ಟಿದ ಸಂಘವನ್ನು ಸದಸ್ಯರು ಮತ್ತು ಆಡಳಿತ ಮಂಡಳಿ ಮುನ್ನಡೆಸಿ ಅಭಿವೃದ್ಧಿಯನ್ನು ಸಾಧಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಶ್ರೀಶೈಲ ಮಾಡ್ಯಾಳೆ, ಮಡಿವಾಳಪ್ಪ ್ಪ ದೇಶಟ್ಟಿ ಸೇರಿ ಅನೇಕರು ಮಹಾಂತಪ್ಪ ಆಲೂರೆವರಿಲ್ಲದ ನೋವಿನಲ್ಲಿ ಸರ್ವ ಸದಸ್ಯರು ದುಃಖಿತರಾಗಿದ್ದರು. ಈ ಸಂದರ್ಭದಲ್ಲಿ ಭಾಷಣ ಮಾಡಿದವರು ಭಾವುಕರಾಗಿ ಕಣ್ಣೀರನ್ನು ಹರಿಸಿದ್ದು ಸರ್ವರ ದುಃಖವನ್ನು ಉಮ್ಮಳಿಸಿತ್ತು.
ಸಾನ್ನಿಧ್ಯ ವಹಿಸಿದ್ದ ಚಳಗೇರಾ ಜಗದ್ಗುರು ರೇಣುಕಾಚಾರ್ಯ ಸಂಸ್ಥಾನ ಮಠದ ಶಾಂತವೀರ ಶಿವಾಚಾರ್ಯರು ಆಶೀರ್ವಚನ ನೀಡಿ ಸಂಸ್ಥಾಪಕ ಅಧ್ಯಕ್ಷ ಆಲೂರೆ ಅವರ ಕಟ್ಟಿಬೆಳೆಸಿದ ಈ ಸಂಘವನ್ನು ಅಭಿವೃದ್ಧಿಗೆ ಸರ್ವರು ಮೊದಲಿನಂತೆ ಮುನ್ನೆಡೆಸಿಕೊಂಡು ಸಾಗಬೇಕು ಎಂದು ಹೇಳಿದರು.
ಆಶ್ರಮದ ಪ್ರಕಾಶ ಮುತ್ತಾö್ಯ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಕ.ರಾ.ಸೌ. ಸಂಯುಕ್ತ ಸಹಕಾರಿ ಸಂಘ ಬೆಂಗಳೂರಿನ ನಿರ್ದೇಶಕಿ ಶೈಲಜಾ ತಪ್ಪಲಿ, ಪ್ರಾಂತೀಯ ವ್ಯವಸ್ಥಾಪಕ ಸೂರ್ಯಕಾಂತ ರ‍್ಯಾಕಲೆ, ಪಿಯು ಉಪನಿರ್ದೇಶಕ ಶಿವಶರಣಪ್ಪ ಮುಳೆಗಾಂವ, ಕಲಬುರಗಿ ಸಹಕಾರಿ ಸಂಘದ ಅಧ್ಯಕ್ಷ ಶಿವಶರಪ್ಪ ಕರೋಟೆ ಮಾತನಾಡಿದರು. ಸಂಘದ ಅಧ್ಯಕ್ಷೆ ರತ್ನಾಬಾಯಿ ಮಹಾಂತಪ್ಪ ಆಲೂರೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸೋಮಲಿಂಗ ಎಸ್. ಕವಲಗಿ, ನಿರ್ದೇಶಕ ಸೂರ್ಯಕಾಂತ ಎಂ. ಪಾಟೀಲ, ಶ್ರೀಕಾಂತ ಬಿ. ದೇಶಟ್ಟಿ, ಜಗನಾಥ ಎಂ. ದೇಶಮುಖ, ವಿಜಯಾನಂದ ಕೆ. ಮಾಶಾಳೆ, ಮಲ್ಲಿನಾಥ ಕೆ. ಗೋವಿನ, ಕುಪೇಂದ್ರ ವಿ. ಪಾಟೀಲ, ಬೆಕಕಪ್ಪ ಎ. ಸೋಸಟ್ಟಿ, ವಿಠ್ಠಲ ಕೆ. ಖಾನಾಪೂರೆ, ಪ್ರಕಾಶ ಎಂ. ಕುಂಬಾರ, ಸಂಜುಬಾಯಿ ಬಿ. ಮೈಂದರ್ಗಿ, ಕವಿತಾ ಎಂ. ಹಿರೇಮಠ, ದೀಪಾ ಮಾಡ್ಯಾಳೆ, ವಿಜಯಲಕ್ಷಿö್ಮÃ ಬಿ. ಕೊರಳ್ಳಿ, ಜ್ಯೋತಿ ಡಿ. ಶಿಂಧೆ ಸೇರಿ ಮತ್ತಿತರು ಇದ್ದರು. ಮುಖ್ಯ ಕಾರ್ಯನಿರ್ವಹಕ ಸೋನಾಥ ನಿಂಬರಗಿ ವಾರ್ಷಿಕ ವರದಿ ಮಂಡಿಸಿ ಸಭೆಯ ಒಪ್ಪಿಗೆ ಪಡೆದರು.
೪೮.೭೪ಲಕ್ಷ ನಿವಳ ಲಾಭ: ಗ್ರಾಮೀಣ ಭಾಗದಲ್ಲಿ ಐದು ಶಾಖೆಗಳನ್ನು ಆರಂಭಿಸುವ ಮೂಲಕ ಆರ್ಥಿಕ ಕ್ರಾಂತಿಗೈದ ಸರಸಂಬಾದ ಶ್ರೀ ಧನಲಕ್ಷಿö್ಮÃ ಸೌಹಾರ್ದ ಸಹಕಾರಿ ಸಂಘಕ್ಕೆ ೨೦೨೩-೨೪ನೇ ಸಾಲಿಗೆ ೪೮.೭೪ಲಕ್ಷ ನಿವಳ ಲಾಭಗಳೀಸಿದೆ. ಒಟ್ಟು ದುಡಿಯುವ ೧೩ ಕೋಟಿ ರೂಪಾಯಿ ಬಂಡವಾಳದೊAದಿಗೆ ೬೪ ಕೋಟಿ ರೂಪಾಯಿ ವಾರ್ಷಿಕ ವೈಹಿವಾಟಿನೊಂದಿಗೆ ಮುನ್ನೆಡೆ ಸಾಧಿಸಿಕೊಂಡ ದಾಖಲೆ ಮೆರೆದಿದೆ. ಅಲ್ಲದೆ ಹಲವು ಸಾಲಸೌಲಭ್ಯ, ಮತ್ತು ಹಲವು ಸಾಮಾಜಿಕ ಚಟುವಟಿಕೆ ಜೀವನ ಸುರಕ್ಷಾ ಯೋಜನೆ ಅನುಷ್ಠಾನದ ಸಾಧನೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಆಲೂರೆ ಕುಟುಂಬಕ್ಕೆ ಲಾಭಾಂಶ: ಏಳೆ ತಿಂಗಳಷ್ಟೇ ಕೊಲೆಯಾದÀ ಶ್ರೀಧನಲಕ್ಷಿö್ಮÃ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಮಹಾಂತಪ್ಪ ಆಲೂರೆ ಅವರ ಕುಟುಂಬಕ್ಕೆ ಸಂಘದ ೩೯೬೪ ಒಟ್ಟು ಸದಸ್ಯರು ಸೇರಿ ನಿರ್ದೇಶಕ ಮಂಡಳಿಯ ಈ ಬಾರಿಯ ವಾರ್ಷಿಕ ತಲಾ ಲಾಭವಂಶÀವನ್ನು ನೀಡಲು ಸಭೆಯಲ್ಲಿ ಸರ್ವಾನುಮತದಿಂದ ಚಪ್ಪಾಳೆ ಮೂಲಕ ಆಡಳಿ ಮಂಡಳಿ ಮತ್ತು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಎಸ್‌ಆರ್‌ಜಿ ವಹಿಸಿಕೊಂಡ ಶಿಕ್ಷಣ ಜವಾಬ್ದಾರಿ: ನಿಜವಾಗಲೂ ಸಹಕಾರಿ ಧುರೀಣರಾಗಿದ್ದ ದಿ. ಮಹಾಂತಪ್ಪ ಆಲೂರೆ ಅವರ ಎಳೆಯ ನಾಲ್ವರು ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಘೋಷಿಸಿದರು. ಅವರ ಕೊಲೆ ಘಟನೆಯನ್ನು ಖಂಡಿಸಿದ್ದಾರೆ.
೧೩ ಲಕ್ಷ ಮರಣಾಂತರÀ ನಿಧಿ ವಿತರಣೆ: ಸಂಘದ ಮೃತ ೧೨ ಸದಸ್ಯರ ಕುಂಟಬಕ್ಕೆ ೧೩ಲಕ್ಷ ರೂಪಾಯಿ ಶ್ರೀಧನಲಕ್ಷಿö್ಮÃ ಜೀವನ ಸುರಕ್ಷಾ ಯೋಜನೆ ಸೌಲಭ್ಯದಡಿ ಹಣ ನೀಡಲಾಯಿತು. ಅಲ್ಲದೆ, ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ೪ನೇ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರಥಮ ಸ್ಥಾನ ಪಡೆದ ಸಮರ್ಥ ಶಿವರಾಜ ಭಕರೆ ವಿದ್ಯಾರ್ಥಿಗೆ ೫ ಸಾವಿರ ರೂ.ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದಡಿ ಅತ್ಯುತ್ತಮ ವ್ಯವಹಾರ ಕೈಗೊಂಡ ೪೦ ಉತ್ತಮ ಗ್ರಾಹಕರಿಗೆ ಸನ್ಮಾನಿಸಲಾಯಿತು.
ಬಸವರಾಜ ಕೊರಳ್ಳಿ ಸ್ವಾಗತಿಸಿದರು. ಯೋಗಿರಾಜ ಮಾಡಿಯಾಳ ನಿರೂಪಿಸಿದರು. ಬಸವರಾಜ ಬೆಳಮಗಿ ವಂದಿಸಿದರು. ಕಲಾವಿದ ಶಂಕರ ಹೋಗಾರ ಗಾಯನ ನಡೆಸಿಕೊಟ್ಟರು.