ಪೋಷಣ ಅಭಿಯಾನ
ಮುನವಳ್ಳಿ,ಸೆ.23: ಪಟ್ಟಣದ ಗಾಂಧಿ ನಗರದಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಜಾಗೃತಿ ಜಾಥಾ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜರುಗಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಅಧಿಕಾರಿ ಸುನೀತಾ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪೌಷ್ಠಿಕಾಂಶಯುಕ್ತ ಆಹಾರದಿಂದ ದೇಹದ ಸದೃಢ ಬೆಳವಣಿಗೆ ಸಾಧ್ಯ ಗರ್ಭಿಣಿಯರು, ಬಾಣತಿಯರು ಮಕ್ಕಳು ಪೌಷ್ಟಿಕಾಂಶ ಆಹಾರ ಸೇವಿಸಿ ರಕ್ತಹೀನತೆ ರೋಗದಿಂದ ದೂರವಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಮೀರಾಸಾಬ ವಟ್ನಾಳ, ಕಸ್ತೂರೆವ್ವ ಗಂಗಣ್ಣವರ, ಚೇತನಾ ಹಳ್ಳಿ, ಆರೋಗ್ಯ ಕ್ಷೇತ್ರಶಿಕ್ಷಣಾದಿಕಾರಿ ಐ.ಆರ್.ಗಂಜಿ, ಡಾ|| ಎಸ್.ಎಲ್.ದಂಡಗಿ, ಶಿಕ್ಷಕ ವೀರಣ್ಣ ಕೊಳಕಿ, ರೇಖಾ ಶಾನಭೋಗ ಮೇಘಾ, ಜಿ.ಎಲ್.ಭಂಡಾರಿ, ಬಾಳೂ ಹೊಸಮನಿ, ಸುನಂದಾ ಸಣಕಲ್ಲ, ವೀಣಾ ಹನಮಸಾಗರ, ಸವಿತಾ ವಾಂಗಿ, ಇಂದಿರಾ ಕದಂ, ಲಲಿತಾ ದೇಸಾಯಿಪಟ್ಟಿ, ಲಕ್ಷ್ಮೀ ಕುರಿ, ಮಹಾಲಕ್ಷ್ಮೀ ಹುಲ್ಲೂರ, ರೇಣುಕಾ ಪಟಗುಂದಿ, ಭಾರತಿ ಹಡಪದ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಗೆ ರಂಗೋಲಿ ಸ್ಪರ್ಧೆ ಜರುಗಿತು.