ಶಿರೂರು ಶೋಧ ಕಾರ್ಯ :ದೊರೆತ ಮೂಳೆಯ ಡಿಎನ್ ಎ ಪರೀಕ್ಷೆ : ಮತ್ತೊಂದು ಲಾರಿಯ ಎಂಜಿನ್ ಪ್ಲೇಟ್ ಲಭ್ಯ
ಕಾರವಾರ : ರಾಷ್ಟ್ರೀಯ ಹೆದ್ದಾರಿ ೬೬ ಶಿರೂರು ಬಳಿ ಮಣ್ಣು ಕುಸಿತದ ನಂತರ ನದಿಯಲ್ಲಿನ ಮಣ್ಣು ತೆರವು ಕಾರ್ಯ ಚಾಲ್ತಿಯಲ್ಲಿದ್ದು, ರವಿವಾರ ಸಂಜೆ ಮೂಳೆಯೊಂದು ಸಿಕ್ಕಿದೆ. ಈ ಮೂಳೆ ಮನುಷ್ಯರದ್ದೇ ಎಂದು ಪರೀಕ್ಷಿಸಲಾಗುತ್ತಿದೆ. ಹಾಗೂ ಇದರ ಡಿ.ಎನ್. ಎ . ಪರೀಕ್ಷೆ ಸಹ ನಡೆಯಲಿದೆ. ಕಾಣೆಯಾದವರ ಕುಟುಂಬದ ಡಿಎನ್ ಎ ಗೆ ಮ್ಯಾಚ್ ಆಗಲಿದೆಯಾ ಎಂಬುದರ ಪರೀಕ್ಷೆ ಸಹ ನಡೆಯಲಿದೆ.
ಎಂಜಿನ್ ನಂಬರ್ ಪ್ಲೇಟ್ ಲಭ್ಯ:
ಮಣ್ಣು ಕುಸಿತದ ದುರಂತದಲ್ಲಿ ಕಾಣೆಯಾಗಿರುವ ಕೇರಳ ಮೂಲದ ಭಾರತ್ ಬೆಂಜ್ ಲಾರಿ ಪತ್ತೆ ಕಾರ್ಯ ನಡೆಸುತ್ತಿರುವಾಗಲೇ, ಇನ್ನೊಂದು ಲಾರಿ ಇಂಜಿನ್ ಪ್ಲೇಟ್ ಪತ್ತೆಯಾಗಿದೆ.
ದುರಂತದಲ್ಲಿ ನದಿಯಲ್ಲಿ ಮುಳುಗಿದ ಭಾರತ್ ಬೆಂಜ್ ಲಾರಿ ಮತ್ತು ಟಾಟಾ ಕಂಪನಿಯ ಗ್ಯಾಸ್ ಟ್ಯಾಂಕರ್ ಇದೆ ಎಂದು ಗೊತ್ತಾಗಿತ್ತು. ಆದರೆ ರವಿವಾರದ ಕಾರ್ಯಚರಣೆಯಲ್ಲಿ ಲಾರಿ ಇಂಜಿನ್ ಒಂದರ ಪ್ಲೇಟ್ ಪತ್ತೆಯಾಗಿದ್ದು , ಸಿಕ್ಕ ಎಂಜಿನ್ ಪ್ಲೇಟ್ ನಲ್ಲಿ ಹಿಂದೂಜಾ ಗ್ರೂಪ್ ನ ಅಶೋಕ ಲೈಲ್ಯಾಂಡ್ ಲಾರಿ ಎಂಜಿನ್ ಪ್ಲೇಟ್ ಸಿಕ್ಕಿದೆ. ಇದು ಹಿಂದೂಜಾ ಗ್ರೂಪಿಗೆ ಸೇರಿದ್ದಾಗಿದೆ. ಗಂಗಾವಳಿ ನದಿಯಲ್ಲಿ ಮತ್ತೊಂದು ಲಾರಿ ಮುಳುಗಿತ್ತೇ ಎನ್ನುವ ಚರ್ಚೆ ನಡೆದಿದೆ.