ಸೆ. 24 ರಂದು ಪೂರ್ವಭಾವಿ ಸಭೆ
ಚನ್ನಮ್ಮನ ಕಿತ್ತೂರು,ಸೆ. 23: ಐತಿಹಾಸಿಕ ಕಿತ್ತೂರು ರಾಣಿ ಚನ್ನಮ್ಮನ ಉತ್ಸವವನ್ನು ಆಚರಿಸುವ ವಿಷಯ ಕುರಿತು ಚರ್ಚಿಸಲು ಪೂರ್ವಭಾವಿ ಸಭೆ ಕರೆಯಲಾಗಿದೆ.
ಭಾರತ ವೀರರಾಣಿ ಕಿತ್ತೂರ ಚನ್ನಮ್ಮನವರ ಉತ್ಸವ ಆಚರಿಸಲಾಗುತ್ತದೆ. ಈ ವರ್ಷ ಉತ್ಸವದ ಆಚರಿಸುವ ವಿಷಯ ಕುರಿತು ಚರ್ಚಿಸಲು ಹಾಗೂ ಸಾರ್ವಜನಿಕರ ಸಲಹೆ ಪಡೆಯಲು ಜಿಲ್ಲಾಧಿಕಾರಿ ಮೊಹಮ್ಮದ ರೋಶನ್ ಅವರ ಆದೇಶದ ಮೇರೆಗೆ ಸೆಪ್ಟಂಬರ 24 ರಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಶೆಟ್ಟರ ಕಲ್ಯಾಣ ಮಂಟಪ ಕುಲವಳ್ಳಿ ರಸ್ತೆ ಗಜರಾಜ ಪ್ಯಾಲೇಸ್ ಹಿಂಭಾಗ ಕಿತ್ತೂರಿನಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ.ಕಾರಣ ಪೂರ್ವಭಾವಿ ಸಭೆಗೆ ಕಿತ್ತೂರು ನಾಡಿನ ಸಮಸ್ತ ಜನರು ಉಪಸ್ಥಿತರಿದ್ದು ಸಲಹೆ ನೀಡಬೇಕು. ಈ ಸಭೆಗೆ ಶಾಸಕ ಬಾಬಾಸಾಹೇಬ ಪಾಟೀಲ, ಅತಿಥಿಗಳಾಗಿ ಮತ್ತು ಜಿಲ್ಲಾ ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿರುವರೆಂದು ತಹಶೀಲ್ದಾರ ಹಾಗೂ ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಕಾರ್ಯಾಲಯ ಕಿತ್ತೂರು ಇವರು ತಿಳಿಸಿದ್ದಾರೆ.