ಪಟ್ಟದ್ದೇವರ ಸಂಘಕ್ಕೆ ೬೭.೩೪ ಲಕ್ಷ ರೂ ನಿವ್ವಳ ಲಾಭ
ಭಾಲ್ಕಿ:ಸೆ.೨೩:ಡಾ.ಚನ್ನಬಸವ ಪಟ್ಟದ್ದೇವರು ಪತ್ತಿನ ಸಂಘ ೨೦೨೩-೨೪ನೆಯ ಸಾಲಿನಲ್ಲಿ ೫೫೭ ಕೋಟಿ ರೂ ವಾರ್ಷಿಕ ವಹಿವಾಟು ನಡೆಸುವುದರ ಜತೆಗೆ ೬೭.೩೪ ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಕೆ.ಸಿದ್ರಾಮ ಹೇಳಿದರು.
ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ೨೧ನೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘ ಅತ್ಯಂತ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ೫೫ ಕೋಟಿ ರೂ ಠೇವಣಿ ಇದ್ದು ೫೪ ಕೋಟಿ ರೂ ಸಾಲ ನೀಡಲಾಗಿದ್ದು, ಜಿಲ್ಲೆಯ ಮೂರು ಶಾಖೆಗಳು ಸೇರಿ ಸುಮಾರು ೧೨ ಕೋಟಿ ರೂ ಬಂಗಾರದ ಒಡೆವೆಗಳ ಮೇಲೆ ಸಾಲ ನೀಡಲಾಗಿದೆ. ಶೇ. ೯೫ರಷ್ಟು ಸಾಲ ವಸೂಲಾತಿ ಇದೆ. ಉಳಿದ ಶೇ.೫ರಷ್ಟು ಸಾಲ ವಸೂಲಿಗೂ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಕಾಯಕ ತತ್ವ ಸಮೃದ್ಧಿಯತ್ತ ಕೊಂಡೊಯ್ಯುತ್ತದೆ. ಗ್ರಾಹಕರ ವಿಶ್ವಾಸ, ಆಡಳಿತ ಮಂಡಳಿಯ ನಿಸ್ವಾರ್ಥ ಕಾಯಕದ ಪರಿಣಾಮ ಸಂಘ ಪ್ರಗತಿಯತ್ತ ದಿಟ್ಟ ಹೆಜ್ಜೆಯಿರಿಸಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ವ್ಯವಸ್ಥಾಪಕ ಗಣಪತಿ ಬಾವುಗೆ ಅವರು ವಾರ್ಷಿಕ ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ಸಂಘದ ಬೀದರ್ ಶಾಖೆಯ ಅಧ್ಯಕ್ಷ ಜಯರಾಜ ಖಂಡ್ರೆ, ಔರಾದ್ ಶಾಖೆಯ ಅಧ್ಯಕ್ಷ ರಾಜಶೇಖರ ಅಷ್ಟೂರೆ, ನಿರ್ದೇಶಕರಾದ ಬಾಬುರಾವ ಜಲ್ದೆ, ಶರದ ಸಿರ್ಸೆ, ರೇಖಾ ಮಹಾಜನ, ಶಶಿಕಲಾ ಲಕ್ಷ್ಯಣ್ಣ, ಡಾ.ಮಲ್ಲಿಕಾರ್ಜುನ ಬುಕ್ಕಾ, ಜಗದೇವಿ ಶಿವರಾಜ ಮದಕಟ್ಟೆ, ರವೀಂದ್ರ ಮಿಸೆ, ಮನ್ಮಥ ಹುಗ್ಗೆ, ಪ್ರಕಾಶ ಘುಳೆ, ಚಂದ್ರಕಾAತ ನಿರ್ಮಳೆ, ವೈಜಿನಾಥ ಪಂಚಾಳ, ನಾಗಪ್ಪ ಮೇತ್ರೆ, ಸುನಿಲ ದೇಶಮುಖ, ಬಂಡೆಪ್ಪ ಕಂಟೆ, ಹಿರಿಯ ಸಲಹೆಗಾರ ಚಂದ್ರಶೇಖರ ಪಾಟೀಲ್ ಇದ್ದರು.