ನಿಯಮ ಗಾಳಿ ತೂರಿ ಮದ್ಯ ಮಾರಾಟ, ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಜಾಂಭವ ಯುವ ಸೇನಾ ಸಂಘಟನೆಯಿAದ ಆರೋಪ
ಹೂ ಹಿಪ್ಪರಗಿ :ಸೆ.೨೩:ಬಸವನ ಬಾಗೇವಾಡಿ ತಾಲೂಕಿನಲ್ಲಿ ಬರುವ ಹಳ್ಳಿಗಳಲ್ಲಿ ಮತ್ತು ರಸ್ತೆ ಬದಿ ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಪರವಾನಗಿ ಪಡೆದುಕೊಂಡ ಸನ್ನದದಾರು ನಿಯಮಗಳು ಉಲ್ಲಂಘನೆ ಮಾಡುತ್ತಿದ್ದು.ಇದನ್ನು ಕಂಡು ಕಾಣದಂತೆ ಕುರುಡರಾದ ಇಲಾಖೆ ಅಧಿಕಾರಿಗಳು ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ. ತಪ್ಪಿತಸ್ಥರ ವಿರುದ್ದ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಜಾಂಭವ ಯುವ ಸೇನಾ ಸಂಘಟನೆಯ ವಿಜಯಪುರ ಜಿಲ್ಲಾ ಗೌರವ ಅಧ್ಯಕ್ಷರಾದ ಮಹಾಂತೇಶ ಹಾದಿಮನಿ ಆಗ್ರಹಿಸಿದ್ದಾರೆ.
ಬಸವನ ಬಾಗೇವಾಡಿ ವಲಯ ವ್ಯಾಪ್ತಿಯಲ್ಲಿ ಬರುವ ಸಿಎಲ್-೨,ಸಿಎಲ್-೯,ಸಿಎಲ್-೭ ಪರವಾನಿ ಪಡೆದುಕೊಂಡಿರುವ ಸನ್ನದುದಾರರು ರಾಜಾರೋಷವಾಗಿ ಚಿಲ್ಲರೆ ವ್ಯಾಪಾರ ನಡೆಸುತ್ತಿದ್ದು.ಬಾರ್ ಮಾಲೀಕರು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಅಕ್ರಮ ಮಧ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಎಂದು ಆರೋಪಿಸಿದ್ದಾರೆ.
ಈ ಕುರಿತು ಜಿಲ್ಲಾ ಅಬಕಾರಿ ಅಧೀಕ್ಷಕರಿಗೆ (SP) ಈಚೆಗೆ ದೂರು ನೀಡಿರುವ ಮಹಾಂತೇಶ ರವರು, ವೈನ್ ಶಾಪ್ ಮತ್ತು ಬಾರಗಳಿಂದ ಖರೀದಿಸಿ ಪಾನಶಾಪ್, ಕಿರಾಣಿ ಅಂಗಡಿ, ಚಾಹಾ ಹೋಟೆಲಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ದಂದೆ ಬಸವನ ಬಾಗೇವಾಡಿ ವಲಯ ವ್ಯಾಪ್ತಿಯ ಎಲ್ಲಾ ಕಡೆ ವ್ಯಾಪಾಕವಾಗಿ ನಡೆಯುತ್ತಿದ್ದು. ಬಸವಣ್ಣನ ಜನ್ಮ ಸ್ಥಳವಾದ ಇಂಗಳೇಶ್ವರ ಗ್ರಾಮದ ಬಸ್ ನಿಲ್ದಾಣ ಹತ್ತಿರ ಹಾಗೂ ಎಲ್ಲಾ ಗ್ರಾಮಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದು. ಹಲವು ಕುಟುಂಬಗಳು ಬೀದಿಗೆ ಬೀಳುತ್ತಿವೆ. ಕೌಟುಂಬಿಕ ಹಾಗೂ ಸಾಮಾಜಿಕ ಕಲಹಗಳು ಹೆಚ್ಚಾಗಿ ಗ್ರಾಮಗಳಲ್ಲಿ ಅಶಾಂತಿ ಮೂಡುತ್ತಿದೆ. ಎಂದಿದ್ದಾರೆ.
ಕಾನೂನು ಬಾಹಿರವಾಗಿ ಮಧ್ಯ ಮಾರಾಟದಲ್ಲಿ ತೊಡಗಿರುವವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕಾದ ಬಸವನ ಬಾಗೇವಾಡಿ ವಲಯ ಅಬಕಾರಿ ನಿರೀಕ್ಷಕರು ಮೌನವಹಿಸಿದ್ದು. ಈ ಅವ್ಯವಹಾರಗಳಿಗೆ ಅವರೇ ಸಾತ್ ನೀಡುತ್ತಿದ್ದಾರೆ.ಜಿಲ್ಲಾ ಅಬಕಾರಿ ಅಧಿಕಾರಿಗಳು ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಹಳ್ಳಿಗಳಿಗೆ ಮಧ್ಯ ಸರಬರಾಜು ಮಾಡುತ್ತಿರುವ ಬಾರ ಮತ್ತು ವೈನ್ ಶಾಪ್ ವಿರುದ್ಧ ಕ್ರಮ ಕೈಗೊಂಡು ಪರವಾನಿಗೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಳ್ಳಿಗಳಲ್ಲಿ ಹಾಗೂ ರಸ್ತೆ ಬದಿ ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಪರವಾನಗಿ ಪಡೆದ ಮದ್ಯ ಮಾರಾಟ ಸನ್ನದದಾರು ನಿಯಮಗಳು ಉಲ್ಲಂಘನೆ ಮಾಡುತ್ತಿದ್ದು. ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ. ತಪ್ಪಿತಸ್ಥರ ವಿರುದ್ದ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಜಾಂಭವ ಯುವ ಸೇನಾ ಸಂಘಟನೆಯ ವಿಜಯಪುರ ಜಿಲ್ಲಾ ಗೌರವ ಅಧ್ಯಕ್ಷರಾದ ಮಹಾಂತೇಶ ಹಾದಿಮನಿ ಆಗ್ರಹಿಸಿದ್ದಾರೆ.
ಬಸವನ ಬಾಗೇವಾಡಿ ವಲಯ ವ್ಯಾಪ್ತಿಯಲ್ಲಿ ಬರುವ ಸಿಎಲ್೨,ಸಿಎಲ್೯,ಸಿಎಲ್೭ ಪರವಾನಿ ಪಡೆದುಕೊಂಡಿರುವ ಸನ್ನದುದಾರರು ರಾಜಾರೋಷವಾಗಿ ಚಿಲ್ಲರೆ ವ್ಯಾಪಾರ ನಡೆಸುತ್ತಿದ್ದು.ಬಾರ್ ಮಾಲೀಕರು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಅಕ್ರಮ ಮಧ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಎಂದು ಆರೋಪಿಸಿದ್ದಾರೆ.
ಈ ಕುರಿತು ಜಿಲ್ಲಾ ಅಬಕಾರಿ ಅಧೀಕ್ಷಕರು (SP) ರವರಿಗೆ ದೂರು ನೀಡಿರುವ ಮಹಾಂತೇಶ ರವರು ವೈನ್ ಶಾಪ್ ಮತ್ತು ಬಾರಗಳಿಂದ ಖರೀದಿಸಿ ಪಾನಶಾಪ್, ಕಿರಾಣಿ ಅಂಗಡಿ, ಚಾಹಾ ಹೋಟೆಲಗಳಲ್ಲಿ ಮಾರಾಟ ಮಾಡುವ ದಂದೆ ಬಸವನ ಬಾಗೇವಾಡಿ ವಲಯ ವ್ಯಾಪ್ತಿಯ ಎಲ್ಲಾ ಕಡೆ ವ್ಯಾಪಾಕವಾಗಿ ನಡೆಯುತ್ತಿದ್ದು. ಬಸವಣ್ಣನ ಜನ್ಮ ಸ್ಥಳವಾದ ಇಂಗಳೇಶ್ವರ ಗ್ರಾಮದ ಬಸ್ ನಿಲ್ದಾಣ ಹತ್ತಿರ ಹಾಗೂ ಎಲ್ಲಾ ಗ್ರಾಮಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದು. ಹಲವು ಕುಟುಂಬಗಳು ಬೀದಿಗೆ ಬೀಳುತ್ತಿವೆ. ಕೌಟುಂಬಿಕ ಹಾಗೂ ಸಾಮಾಜಿಕ ಕಲಹಗಳು ಹೆಚ್ಚಾಗಿ ಗ್ರಾಮಗಳಲ್ಲಿ ಅಶಾಂತಿ ಮೂಡುತ್ತಿದೆ. ಎಂದಿದ್ದಾರೆ.
ಕಾನೂನು ಬಾಹಿರವಾಗಿ ಮಧ್ಯ ಮಾರಾಟದಲ್ಲಿ ತೊಡಗಿರುವವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕಾದ ಬಸವನ ಬಾಗೇವಾಡಿ ವಲಯ ಅಬಕಾರಿ ನಿರೀಕ್ಷಕರು ಮೌನವಹಿಸಿದ್ದು. ಈ ಅವ್ಯವಹಾರಗಳಿಗೆ ಅವರೇ ಸಾತ್ ನೀಡುತ್ತಿದ್ದಾರೆ. ಜಿಲ್ಲಾ ಅಬಕಾರಿ ಅಧಿಕಾರಿಗಳು ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಹಳ್ಳಿಗಳಿಗೆ ಮಧ್ಯ ಸರಬರಾಜು ಮಾಡುತ್ತಿರುವ ಬಾರ ಮತ್ತು ವೈನ್ ಶಾಪ್ ವಿರುದ್ಧ ಕ್ರಮ ಕೈಗೊಂಡು ಪರವಾನಿಗೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
