ಬಸ್- ಸ್ಕೂಟರ್ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು
ವಿಜಯಪುರ,ಮೇ.13: ಸಾರಿಗೆ ಬಸ್- ಸ್ಕೂಟರ್ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ನಗರ ಹೊರ ವಲಯದ ಅಲ್- ಅಮೀನ್ ಮೆಡಿಕಲ್ ಕಾಲೇಜ್ ಎದುರಿನ ತೊರವಿ ರಸ್ತೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ತಿಕೋಟಾದ ವಿಶಾಲ ಬಾಲಕೃಷ್ಣ ಶಿಂಧೆ (22), ರಮೇಶ ಪ್ರಕಾಶ ಮಾಶ್ಯಾಳ (20) ಎಂದು ಗುರುತಿಸಲಾಗಿದೆ.
ವಿಶಾಲ ಶಿಂಧೆ ಹಾಗೂ ರಮೇಶ ಮಾಶ್ಯಾಳ ಈ ಇಬ್ಬರು ಸ್ಕೂಟರ್ ಮೇಲೆ ತಿಕೋಟಾ ಕಡೆಗೆ ತೆರಳುತ್ತಿದ್ದಾಗ, ಎದುರಿಗೆ ಬಂದ ಸಾರಿಗೆ ಬಸ್ ಮಧ್ಯೆ ಅಪಘಾತ ಸಂಭವಿಸಿದೆ.
ಅಪಘಾತದಿಂದ ಸ್ಕೂಟರ್ ಸವಾರರು ತೀವ್ರವಾಗಿ ಗಾಯಗೊಂಡು ವಿಪರೀತ ರಕ್ತ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವಿಜಯಪುರ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.